ಬನ್ಸಾಲಿ ಮೇಲೆ ಹಲ್ಲೆ ಪ್ರಕರಣ:ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ಮಾಪಕರ ಸಂಘ ಆಗ್ರಹ

ಹಿರಿಯ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಮೇಲಿನ ಹಲ್ಲೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಸಿನಿಮಾ ಮತ್ತು ಟೆಲಿವಿಷನ್ ನಿರ್ಮಾಪಕರ ಸಂಘ ....
ಸಂಜಯ್ ಲೀಲಾ ಬನ್ಸಾಲಿ
ಸಂಜಯ್ ಲೀಲಾ ಬನ್ಸಾಲಿ
ಮುಂಬಯಿ: ಹಿರಿಯ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಮೇಲಿನ ಹಲ್ಲೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಸಿನಿಮಾ ಮತ್ತು ಟೆಲಿವಿಷನ್ ನಿರ್ಮಾಪಕರ ಸಂಘ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ  ಸರ್ಕಾರಕ್ಕೆ ಆಗ್ರಹಿಸಿದೆ.
ಸಿನಿಮಾ ಮತ್ತು ಟೆಲಿವಿಷನ್ ನಿರ್ಮಾಪಕರ ಸಂಘದ ಅಧ್ಯಕ್ಷ ಸಿದ್ದಾರ್ಥ್ ರಾಯ್ ಕಪೂರ್ ಮಾತನಾಡಿ, ಇಡೀ  ಚಿತ್ರರಂಗದ ಪರವಾಗಿ ಘಟನೆಯನ್ನು ನಾನು ಖಂಡಿಸುತ್ತೇನೆ, ನಿರ್ದೇಶಕರ ಮೇಲಿನ ಹಲ್ಲೆ ಪ್ರಕರಣದಿಂದ ಪ್ರಜಾಪ್ರಭುತ್ವದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿದಂತಾಗಿದೆ. ಹೀಗಾಗಿ ಕಿಡಿಗೇಡಿಗಳ ವಿರುದ್ಧ ರಾಜಸ್ತಾನ ಸರ್ಕಾರ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇಂಥಹ ಪ್ರಕರಣಗಳನ್ನು ಅಂತ್ಯಗೊಳಿಸಲು ಸಂಬಂಧ ಪಟ್ಟವರು, ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿರ್ಮಾಪಕರ ಸಂಘ, ಸಂಬಂಧ ಪಟ್ಟ ಇಲಾಖೆಗೆ ಮನವಿ ಸಲ್ಲಿಸಲಿದೆ. ನಾವೆಲ್ಲರೂ ಒಂದಾಗಿ ಸಂಜಯ್ ಲೀಲಾ ಬನ್ಸಾಲಿ ಅವರಿಗೆ ನಮ್ಮ ಸಂಪೂರ್ಣ ಬೆಂಬಲ ಸೂಚಿಸುತ್ತೇವೆ ಎಂದು ಹೇಳಿದ್ದಾರೆ. 
ಮುಂದಿನ ದಿನಗಳಲ್ಲಿ ಇಂಥ ದುರ್ಘಟನೆಗಳು ಸಂಭವಿಸದಂತೆ ರಾಜಸ್ತಾನ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳೂಬೇಕೆಂದು ಅವರು ಒತ್ತಾಯಿಸಿದ್ದಾರೆ.
ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಮುಂದಿನ ಚಿತ್ರ 'ಪದ್ಮಾವತಿ' ಸಿನೆಮಾ ಸೆಟ್ ನಲ್ಲಿ ನಿರ್ದೇಶಕರ ಮೇಲೆ ಶುಕ್ರವಾರ ಹಲ್ಲೆ ನಡೆದಿತ್ತು,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com