ನವದೆಹಲಿ: ಟೀಂ ಇಂಡಿಯಾದ ಆಲ್ರೌಂಡರ್ ಯುವರಾಜ್ ಸಿಂಗ್ ಮತ್ತು ಪತ್ನಿ ಹಜೆಲ್ ಕೀಚ್ ಜತೆಗೂಡಿ ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಹೆಜ್ಜೆ ಹಾಕಲಿದ್ದಾರೆ.
ಸ್ಟಾರ್ ಪ್ಲಸ್ ಚಾನಲ್ ನಲ್ಲಿ ಏಪ್ರಿಲ್ 2ರಂದು ಆರಂಭವಾಗಲಿರುವ ನಾಚ್ ಬಲಿಯೆ ಹೆಸರಿನ 8ನೇ ಆವೃತ್ತಿಯ ಡಾನ್ಸ್ ಶೋನಲ್ಲಿ ಈ ಜೋಡಿ ಕಾಣಿಸಿಕೊಳ್ಳಲಿದೆಯಂತೆ.
ಮುಂದಿನ ಏಪ್ರಿಲ್ 5 ರಿಂದ ಐಪಿಎಲ್ 10ನೇ ಆವೃತ್ತಿಯ ಐಪಿಎಲ್ ನಲ್ಲಿ ಯುವರಾಜ್ ಆಡಲಿದ್ದು ಇದರಿಂದಾಗಿ ಯುವಿ ದಂಪತಿಯನ್ನು ಐಪಿಎಲ್ ಮುಕ್ತಾಯದ ಬಳಿಕ ವೈಲ್ಡ್ ಕಾರ್ಡ್ ಮೂಲಕ ಶೋಗೆ ತರಲು ಆಯೋಜಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಇನ್ನು ಈ ಬಗ್ಗೆ ಆಯೋಜಕರು ಮತ್ತು ಯುವಿ ದಂಪತಿ ಮಾತುಕತೆ ನಡೆಸಿದ್ದು ಯಾವುದೂ ಅಂತಿಮವಾಗಿಲ್ಲ ಎಂದು ಮೂಲಗಳು ತಿಳಿಸಿವೆ.