ನವದೆಹಲಿ: ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಶೆಹ್ಲಾ ರಶೀದ್ ವಿರುದ್ಧ ಅವಹೇಳನಕಾರಿ ಟ್ವೀಟ್ ಮಾಡಿ ಟ್ವಿಟ್ಟರ್ ಖಾತೆ ಅಮಾನತ್ತುಗೊಂಡ ವಾರದ ಮುನ್ನವೇ ಹಿನ್ನೆಲೆ ಗಾಯಕ ಅಭಿಜಿತ್ ಭಟ್ಟಾಚಾರ್ಯ ಹೊಸ ಖಾತೆ ತೆರೆದಿದ್ದಾರೆ.
ಹೊಸ ಖಾತೆಯಲ್ಲಿ ಸಣ್ಣ ವಿಡಿಯೊವನ್ನು ಹಂಚಿಕೊಂಡಿರುವ ಭಟ್ಟಾಚಾರ್ಯ, ಜನರು ತಮ್ಮ ಮಾತಿಗೆ ಹತೋಟಿ ತರಲು ಯತ್ನಿಸುತ್ತಿದ್ದಾರೆ. ಆದರೆ ತಾವು ತಮ್ಮ ಕೆಲ ಬೆಂಬಲಿಗರೊಂದಿಗೆ ದೇಶದ ವಿರುದ್ಧ ಧ್ವನಿಯೆತ್ತುವವರರನ್ನು ತೊಡೆದು ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.
ಕಳೆದ ಮಂಗಳವಾರ ಭಟ್ಟಾಚಾರ್ಯ ಅವರ ಟ್ವಿಟ್ಟರ್ ಖಾತೆ ಅಮಾನತುಗೊಂಡಿತ್ತು. ಅವರು ಸಲ್ಲದ, ಅವಹೇಳನಕಾರಿ ಭಾಷೆ ಬಳಸಿದ್ದಾರೆ ಎಂದು ಹಲವರು ಪ್ರತಿಕ್ರಿಯಿಸಿದ್ದ ಹಿನ್ನೆಲೆಯಲ್ಲಿ ಖಾತೆಯನ್ನು ಅಮಾನತ್ತು ಮಾಡಲಾಗಿತ್ತು.