ಪದ್ಮಾವತಿ ವಿವಾದ; ಚಿತ್ರೋದ್ಯಮ ಐಎಫ್ಎಫ್ಐ ಬಹಿಷ್ಕರಿಸಬೇಕು: ಶಬನಾ ಆಜ್ಮಿ

ಚಿತ್ರೋದ್ಯಮ ಭಾರತೀಯ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ(ಐಎಫ್ಎಫ್ಐ)ವನ್ನು ಬಹಿಷ್ಕರಿಸುವ ಮೂಲಕ ಪದ್ಮಾವತಿ.....
ಶಬನಾ ಆಜ್ಮಿ
ಶಬನಾ ಆಜ್ಮಿ
ಮುಂಬೈ: ಚಿತ್ರೋದ್ಯಮ ಭಾರತೀಯ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವ(ಐಎಫ್ಎಫ್ಐ)ವನ್ನು ಬಹಿಷ್ಕರಿಸುವ ಮೂಲಕ ಪದ್ಮಾವತಿ ಚಿತ್ರದ ನಿರ್ದೇಶ ಸಂಜಯ್ ಲೀಲಾ ಭನ್ಸಾಲಿ ಮತ್ತು ನಟಿ ದೀಪಿಕಾ ಪಡುಕೋಣೆಗೆ ಬೆದರಿಕೆ ಹಾಕುತ್ತಿರುವುದನ್ನು ಖಂಡಿಸಬೇಕು ಎಂದು ಬಾಲಿವುಡ್ ಹಿರಿಯ ನಟಿ ಶಬನಾ ಆಜ್ಮಿ ಅವರು ಶನಿವಾರ ಹೇಳಿದ್ದಾರೆ.
ಪದ್ಮಾವತಿ ಚಿತ್ರದ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಸ್ಮೃತಿ ಇರಾನಿ ಮೌನ ವಹಿಸಿರುವುದನ್ನು ಪ್ರಶ್ನಿಸಿದ ಶಬನಾ ಆಜ್ಮಿ ಅವರು, ದೇಶದಲ್ಲಿ "ಸಾಂಸ್ಕೃತಿಕ ವಿನಾಶ"ದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ.
ಸ್ಮೃತಿ ಇರಾನಿ ಅವರು ಬರಿ ಅಂತರಾಷ್ತ್ರೀಯ ಚಲನಚಿತ್ರೋತ್ಸವದ ದಿನಾಂಕ ನಿಗದಿ ಮಾಡುವುದರಿಂದ ಭಾರತೀಯ ಚಿತ್ರೋದ್ಯಮ ಮೆಚ್ಚುಗೆ ಗಳಿಸುತ್ತದೆ ಎಂದು ಭಾವಿಸಿದ್ದಾರೆ. ಹೀಗಾಗಿ ಪದ್ಮಾವತಿ ವಿವಾದದ ಬಗ್ಗೆ ಮೌನವಾಗಿದ್ದಾರೆ ಎಂದು ನಟಿ ವ್ಯಂಗ್ಯವಾಡಿದ್ದಾರೆ.
ಭಾರತೀಯ ಚಿತ್ರೋದ್ಯಮ ಒಗ್ಗಟ್ಟಾಗಿ ಪದ್ಮಾವತಿ ಚಿತ್ರವನ್ನು ಬೆಂಬಲಿಸಬೇಕು ಎಂದು ಟ್ಟೀಟ್ ಮಾಡಿರುವ ಆಜ್ಮಿ, ಇಡೀ ಚಿತ್ರೋದ್ಯಮ ಐಎಫ್ಎಫ್ಐ ಅನ್ನು ಬಹಿಷ್ಕರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com