ಮೊಘಲ್ ಎ ಆಜಾಂ ಗೆ ಇಲ್ಲದ ವಿರೋಧ, ನಿಷೇಧ ಪದ್ಮಾವತಿಗೆ ಯಾಕೆ?: ರಾಹುಲ್ ರವೈಲ್

ಮೊಘಲ್-ಎ-ಆಜಾಂ ಗೆ ಇಲ್ಲದ ವಿರೋಧ, ನಿಷೇಧ ಪದ್ಮಾವತಿ ಚಿತ್ರಕ್ಕೆ ಯಾಕೆ ಎಂದು ಚಿತ್ರ ನಿರ್ದೇಶಕ ಹಾಗೂ ಪಣಜಿಯಲ್ಲಿ ನಡೆಯುತ್ತಿರುವ 48ನೇ ಐಎಫ್‌ಎಫ್‌ಐ ಪನೋರಮಾ ವಿಭಾಗದ ಜ್ಯೂರಿ ಮುಖ್ಯಸ್ಥ...
ಪದ್ಮಾವತಿ
ಪದ್ಮಾವತಿ
ಪಣಜಿ: ಮೊಘಲ್-ಎ-ಆಜಾಂ ಗೆ ಇಲ್ಲದ ವಿರೋಧ, ನಿಷೇಧ ಪದ್ಮಾವತಿ ಚಿತ್ರಕ್ಕೆ ಯಾಕೆ ಎಂದು ಚಿತ್ರ ನಿರ್ದೇಶಕ ಹಾಗೂ ಪಣಜಿಯಲ್ಲಿ ನಡೆಯುತ್ತಿರುವ 48ನೇ ಐಎಫ್‌ಎಫ್‌ಐ ಪನೋರಮಾ ವಿಭಾಗದ ಜ್ಯೂರಿ ಮುಖ್ಯಸ್ಥ ರಾಹುಲ್ ರವೈಲ್ ಪ್ರಶ್ನಿಸಿದ್ದು, ಪದ್ಮಾವತಿ ಚಿತ್ರದ ಪರ ನಿಂತಿದ್ದಾರೆ. 
ಪದ್ಮಾವತಿ ಚಿತ್ರವನ್ನು ಹಳೆಯ ಮೊಘಲ್-ಎ-ಆಜಂ ಚಿತ್ರಕ್ಕೆ ಹೋಲಿಕೆ ಮಾಡಿರುವ ರಾಹುಲ್ ರವೈಲ್, ಪದ್ಮಾವತಿಯಂತೆಯೇ ಮೊಘಲ್-ಎ-ಆಜಾಂ ನಲ್ಲಿಯೂ ಇತಿಹಾಸಕ್ಕೆ ಸಂಬಂಧಿಸಿದಂತೆ ಹಲವು ವ್ಯತ್ಯಾಸಗಳಿದ್ದವು, ಆ ಚಿತ್ರದಲ್ಲಿನ ಅನಾರ್ಕಲಿ ಸಂಪೂರ್ಣವಾದ ಕಾಲ್ಪನಿಕ ಪಾತ್ರ, ಇತಿಹಾಸದಲ್ಲಿ ಅನಾರ್ಕಲಿ ಅಸ್ತಿತ್ವದಲ್ಲಿಯೇ ಇಲ್ಲ. ಒಂದು ವೇಳೆ ಮೊಘಲ್-ಎ-ಆಜಾಂ ಇಂದು ಬಿಡುಗಡೆಯಾದರೆ ಅದನ್ನೂ ನಿಷೇಧಿಸುತ್ತಾರೆಯೇ ಎಂದು ರವೈಲ್ ಪ್ರಶ್ನಿಸಿದ್ದಾರೆ. 
ಬನ್ಸಾಲಿ ಸಾಕಷ್ಟು ಶ್ರಮ ಹಾಕಿ ಪದ್ಮಾವತಿ ಚಿತ್ರವನ್ನು ಮಾಡಿದ್ದಾರೆ. ಇತಿಹಾಸಕ್ಕೆ ಅಪಚಾರವಾಗಂತೆ ಚಿತ್ರವನ್ನು ಮಾಡುವ ಸ್ವಾತಂತ್ರ್ಯ ಬನ್ಸಾಲಿಗೆ ಇದೆ ಎಂದು ರಾಹುಲ್ ರವೈಲ್ ಹೇಳಿದ್ದಾರೆ. ಇದೇ ವೇಳೆ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಿರುವ ಬನ್ಸಾಲಿ ಅವರ ನಿರ್ಧಾರವನ್ನು ರಾಹುಲ್ ಪ್ರಶಂಸಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com