ಮುಂಬೈ: ಹಿರಿಯ ಬಾಲಿವುಡ್ ನಟ ಅನುಪಮ್ ಖೇರ್ ಅಭಿನಯದ ಖೀರ್ ಕಿರು ಚಿತ್ರ ವ್ಯಾಂಕೋವರ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಅಂತರಾಷ್ಟ್ರೀಯ ಕಿರು ಚಿತ್ರ ಪ್ರಶಸ್ತಿ ಪಡೆದಿದೆ.
ಈ ಕುರಿತು ಅನುಪಮ್ ಖೇರ್ ಅವರು ಇಂದು ಟ್ವೀಟ್ ಮಾಡಿದ್ದು, ನಮ್ಮ ಕಿರು ಚಿತ್ರ 'ಖೀರ್' ಅತಿ ದೊಡ್ಡ ಪ್ರಶಸ್ತಿ ಪಡೆದಿದೆ. ವ್ಯಾಂಕೋವರ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಖೀರ್ ಗಾಗಿ ನಾವು ಅತ್ಯುತ್ತಮ ಅಂತರಾಷ್ಟ್ರೀಯ ಕಿರು ಚಿತ್ರ ಪ್ರಶಸ್ತಿ ಪಡೆದಿದ್ದೇವೆ ಎಂದು ಹೇಳಿದ್ದಾರೆ.
ಸೂರ್ಯ ಬಾಲಕೃಷ್ಣನ್ ನಿರ್ದೇಶನದ ಈ ಕಿರು ಚಿತ್ರದಲ್ಲಿ ನತಾಶ ರಸ್ತೋಗಿ, ಅಭಿಮಾನ್ಯು ಚವ್ಲಾ ಹಾಗೂ ಸ್ತುತಿ ದಿಕ್ಷಿತ್ ಅವರು ಸಹ ಅಭಿನಯಿಸಿದ್ದಾರೆ. 'ಖೀರ' ಹಿರಿಯ ದಂಪತಿಗಳ ಪ್ರೇಮಕಥೆಯನ್ನು ಒಳಗೊಂಡಿದೆ.
ಖೀರ್ ಕಿರು ಚಿತ್ರವನ್ನು ಈ ವರ್ಷ ಪ್ರೇಮಿಗಳ ದಿನಕ್ಕು ಮುನ್ನಾದಿನ ಯೂಟ್ಯೂಬ್ ಚಾನಲ್ ನಲ್ಲಿ ಹೊಸ್ಟ್ ಮಾಡಲಾಗಿತ್ತು.