2004ರಲ್ಲಿ ಪದ್ಮಶ್ರೀ,2016ರಲ್ಲಿ ಪದ್ಮ ಭೂಷಣ ಪ್ರಶಸ್ತಿಗಳು ಖೇರ್ ಗೆ ಸಂದಿವೆ. ಕೇಂಜ್ರ ಚಲನಚಿತ್ರ ಪ್ರಮಾಣ ಮಂಡಳಿ ಮತ್ತು ರಾಷ್ಟ್ರೀಯ ನಾಟಕ ಶಾಲೆಯ ಅಧ್ಯಕ್ಷ ಸ್ಥಾನವನ್ನು ಹೊಂದಿದ್ದರು.
ಎಫ್ ಟಿಐಐಯ ಅಧ್ಯಕ್ಷರಾಗಿ ಚೌಹಾಣ್ ಅವರಿದ್ದಾಗ ವಿವಾದವಾಗಿದ್ದವು. ವಿದ್ಯಾರ್ಥಿಗಳು ಸುಮಾರು 140 ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರು. ಚೌಹಾಣ್ ಅವರ ನೇಮಕಾತಿ ರಾಜಕೀಯ ಪ್ರೇರಿತವಾಗಿದ್ದು ಅವರು ಆ ಹುದ್ದೆಗೆ ಯೋಗ್ಯ ವ್ಯಕ್ತಿಯಲ್ಲ ಎಂದು ಆರೋಪಿಸಿದ್ದರು.
ಖೇರ್ ಅವರ ನೇಮಕಕ್ಕೆ ಬಾಲಿವುಡ್ ನ ಹಲವರು ಶುಭಾಶಯ ತಿಳಿಸಿದ್ದಾರೆ. ಅವರ ಪತ್ನಿ ಬಿಜೆಪಿ ಸಂಸದೆ ಕಿರ್ರನ್ ಖೇರ್ ಪ್ರತಿಕ್ರಿಯೆ ನೀಡಿ, ಎಫ್ ಟಿಐಐಯ ಅಧ್ಯಕ್ಷ ಸ್ಥಾನ ಸವಾಲಾಗಿದೆ. ಆದರೆ ತಮ್ಮ ಪತಿಗೆ ವಿದ್ಯಾರ್ಥಿಗಳ ಜೊತೆಗೂಡಿ ಕೆಲಸ ಮಾಡುವುದು ಇಷ್ಟದ ವಿಷಯ. ಅವರು ಉತ್ತಮ ಶಿಕ್ಷಕರು ಮತ್ತು ಪ್ರತಿಭೆಯುಳ್ಳ ವ್ಯಕ್ತಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.