ನೂತನ ಅಧ್ಯಕ್ಷ ಅನುಪಮ್ ಖೇರ್ ಗೆ ಬಹಿರಂಗ ಪತ್ರ ಬರೆದ ಎಫ್ ಟಿಐಐ ವಿದ್ಯಾರ್ಥಿ ಸಂಘ

ಹಿರಿಯ ಬಾಲಿವುಡ್ ನಟ ಹಾಗೂ ಪುಣೆಯ ಭಾರತೀಯ ಚಲನಚಿತ್ರ ಮತ್ತು ಟೆಲಿವಿಷನ್‌ ಸಂಸ್ಥೆ(ಎಫ್‌ಟಿಐಐ) ನೂತನ ಅಧ್ಯಕ್ಷ ಅನುಪಮ್‌ ಖೇರ್‌....
ಅನಪಮ್ ಖೇರ್
ಅನಪಮ್ ಖೇರ್
ಮುಂಬೈ: ಹಿರಿಯ ಬಾಲಿವುಡ್ ನಟ ಹಾಗೂ ಪುಣೆಯ ಭಾರತೀಯ ಚಲನಚಿತ್ರ ಮತ್ತು ಟೆಲಿವಿಷನ್‌ ಸಂಸ್ಥೆ(ಎಫ್‌ಟಿಐಐ) ನೂತನ ಅಧ್ಯಕ್ಷ ಅನುಪಮ್‌ ಖೇರ್‌ ಅವರಿಗೆ ಎಫ್ ಟಿಐಐ ವಿದ್ಯಾರ್ಥಿ ಸಂಘ ಗುರುವಾರ ಬಹಿರಂಗ ಪತ್ರ ಬರೆದಿದ್ದು, ಸಂಸ್ಥೆಯ ಮೇಲೆ ಪರಿಣಾಮ ಬೀರುವ ವಿಷಗಳ ಕುರಿತು ಖೇರ್ ಅವರ ಗಮನ ಸೆಳೆದಿದ್ದಾರೆ. 
ಎಫ್ ಟಿಐಐ ವಿದ್ಯಾರ್ಥಿ ಸಂಘದ ಅಧ್ಯಕ್ಷ ರೋಬಿನ್ ಜೋಯ್ ಹಾಗೂ ಪ್ರಧಾನ ಕಾರ್ಯದರ್ಶಿ ರೋಹಿತ್ ಕುಮಾರ್ ಅವರು ಸಹಿ ಮಾಡಿದ ಪತ್ರವನ್ನು ಎಫ್ ಟಿಐಐ ವಿಸ್ಡಂ ಟ್ರೀ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಲಾಗಿದ್ದು, ಹಣಕ್ಕಾಗಿ ದೇಶದ ಪ್ರಮುಖ ಚಲನಚಿತ್ರ ಸಂಸ್ಥೆ ನಿಧಾನವಾಗಿ ಅಲ್ಪಾವಧಿಯ ಕ್ರ್ಯಾಶ್ ಕೋರ್ಸ್ ಗಳನ್ನು ನಡೆಸುವ ಸಂಸ್ಥೆಯಾಗಿ ಮಾರ್ಪಡುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
ಅಂತಹ ಅಲ್ಪಾವಧಿಯ ಕೋರ್ಸುಗಳನ್ನು ನಡೆಸುವುದರಿಂದ ಚಲನಚಿತ್ರ ನಿರ್ಮಾಣದ ಬಗ್ಗೆ ಹೆಚ್ಚು ಜ್ಞಾನವನ್ನು ನೀಡಲು ಸಾಧ್ಯವಿಲ್ಲ ಎಂದು ನಾವು ಪ್ರಾಮಾಣಿಕವಾಗಿ ನಂಬುತ್ತೇವೆ. ಉದಾಹರಣೆಗೆ, "ಟೆಲಿವಿಷನ್ ಗಾಗಿ ಫಿಕ್ಷನ್ ರೈಟಿಂಗ್ ನಲ್ಲಿ ಕಿರು ಕೋರ್ಸ್ ಅನ್ನು 20 ದಿನಗಳ ಕಾಲ ನಡೆಸಲಾಗುತ್ತಿದೆ ಮತ್ತು ಇದಕ್ಕಾಗಿ ವಿದ್ಯಾರ್ಥಿಗಳಿಗೆ ರು 20,000 ಶುಲ್ಕ ವಿಧಿಸಲಾಗುತ್ತದೆ. ಆದರೆ ಇದು ಅಲ್ಪಾವಧಿಯ ಕೋರ್ಸ್ ಆಗಿದ್ದು, ಸಮಾಜದ ಕೆಲವು ವರ್ಗದ ವಿದ್ಯಾರ್ಥಿಗಳಿಗೆ ತುಂಬಾ ಹೊರೆಯಾಗುತ್ತಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ. 
ನಿನ್ನೆಯಷ್ಟೇ ಅನುಪಮ್ ಖೇರ್ ಅವರನ್ನು ಎಫ್ ಟಿಐಐ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಗಜೇಂದ್ರ ಚೌಹಾಣ್‌ ಅವರ ಸ್ಥಾನಕ್ಕೆ ಖೇರ್‌ ನೇಮಕೊಗೊಂಡಿದ್ದು, ಚೌಹಾಣ್‌ ಅವರ ಅವಧಿ ಮಾರ್ಚ್‌ನಲ್ಲಿ ಅಂತ್ಯಗೊಂಡಿತ್ತು. ಅಧಿಕಾರ ಅವಧಿಯಲ್ಲಿ ಚೌಹಾಣ್‌ ಹಲವು ವಿವಾದಕ್ಕೆ ಒಳಗಾಗಿದ್ದರು. ಚೌಹಾಣ್‌ ಅವರ ನೇಮಕವನ್ನು ರದ್ದುಪಡಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಮುಷ್ಕರ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com