ಆಕೆ ಸ್ವತಃ ಹೆಮ್ಮೆಪಟ್ಟುಕೊಂಡಾಗ ನನಗೆ ಹೆಮ್ಮೆಯಾಗುತ್ತದೆ: ಪುತ್ರಿ ಬಗ್ಗೆ ಶಾರೂಕ್ ಖಾನ್

ನನ್ನ ಮಗಳು ಅವಳ ಬಗ್ಗೆ ಹೆಮ್ಮೆ ಪಟ್ಟುಕೊಂಡಾಗ ಮತ್ತು ಆಕೆ ಮಾಡುವ ಕೆಲಸವನ್ನು ಹೆಮ್ಮೆಯಿಂದ ...
ವೋಗ್ ಮುಖಪುಟದಲ್ಲಿ ಸುಹಾನಾ ಖಾನ್
ವೋಗ್ ಮುಖಪುಟದಲ್ಲಿ ಸುಹಾನಾ ಖಾನ್
Updated on

ಮುಂಬೈ: ನನ್ನ ಮಗಳು ಅವಳ ಬಗ್ಗೆ ಹೆಮ್ಮೆ ಪಟ್ಟುಕೊಂಡಾಗ ಮತ್ತು ಆಕೆ ಮಾಡುವ ಕೆಲಸವನ್ನು ಹೆಮ್ಮೆಯಿಂದ ಪ್ರೀತಿಸಿದಾಗ ನನಗೆ ನನ್ನ ಮಗಳ ಬಗ್ಗೆ ಹೆಮ್ಮೆಯೆನಿಸುತ್ತದೆ ಎಂದು ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ಹೇಳಿದ್ದಾರೆ.

ವೋಗ್ ಇಂಡಿಯಾ ಆಗಸ್ಟ್ ಸಂಚಿಕೆಯ ಮುಖಪುಟದಲ್ಲಿ ಶಾರೂಕ್ ಖಾನ್ ಮಗಳು ಸುಹಾನಾ ಖಾನ್ ಫೋಟೋ ಪ್ರಕಟವಾಗಿದ್ದು ಆಕೆಯ ಮೊದಲ ಸಂದರ್ಶನ ಕೂಡ ಪ್ರಕಟವಾಗಿದೆ. ಕಳೆದ ರಾತ್ರಿ ಮುಂಬೈಯಲ್ಲಿ ನಡೆದ ವೋಗ್ ಬ್ಯೂಟಿ ಅವಾರ್ಡ್ಸ್ 2018ರ ಸಮಾರಂಭದಲ್ಲಿ ಶಾರೂಕ್ ಖಾನ್ ಸಂಚಿಕೆಯನ್ನು ಬಿಡುಗಡೆ ಮಾಡಿದರು.

ವೋಗ್ ಮುಖಪುಟದಲ್ಲಿ ಸುಹಾನಾ ಫೋಟೋ ಪ್ರಕಟವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ 52 ವರ್ಷದ ತಂದೆ ಸೂಪರ್ ಸ್ಟಾರ್ ಶಾರೂಕ್ ಖಾನ್, ಆಕೆ ನನ್ನ ಮಗಳು ಹೌದು, ಆದರೆ ಅವಳ ಕಠಿಣ ಶ್ರಮ, ಕೆಲಸ ಮತ್ತು ಪ್ರತಿಭೆಯಿಂದ ಗುರುತಿಸಿಕೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿ ಅವಳು ಕೆಲಸ ಮಾಡಲಿದ್ದಾಳೆ, ನನ್ನ ಜೀವನದಲ್ಲಿ ಹಲವು ಅದ್ಭುತ ಮಹಿಳೆಯರ ಜೊತೆ ಒಡನಾಟ ಹೊಂದಿದ್ದೇನೆ. ಅವರ ಪೈಕಿ ನನ್ನ 18 ವರ್ಷದ ಮಗಳು ಕೂಡ ಸೇರುತ್ತಾಳೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.

ಆಕೆಗೆ 18 ವರ್ಷ, ಲವ್ಲಿಯಾಗಿದ್ದಾಳೆ, ತುಂಬಾ ಸೂಕ್ಷ್ಮ ಮನಸ್ಸಿನ ಮುದ್ದಾದ ಮತ್ತು ತೀವ್ರ ನಾಚಿಕೆ ಸ್ವಭಾವದ ಹುಡುಗಿಯಾದರೂ ಕೂಡ ಅಷ್ಟೇ ಗಟ್ಟಿ ಮನಸ್ಸಿನವಳು. ವೋಗ್ ಮ್ಯಾಗಜಿನ್ ನಲ್ಲಿ ಆಕೆ ಕಾಣಿಸಿಕೊಳ್ಳಲು ಕಾರಣರಾದ ಎಲ್ಲರಿಗೂ ಮತ್ತು ಆಕೆ ಇಷ್ಟು ಸುಂದರವಾಗಿ ಕಾಣಿಸಲು ಸಹಕಾರಿಯಾದವರಿಗೆ ಧನ್ಯವಾದಗಳು ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com