ಶಾರುಖ್ ಖಾನ್
ಶಾರುಖ್ ಖಾನ್

ನನ್ನ ಬಾಲ್ಯದ ನೆನಪುಗಳ ಒಂದು ಭಾಗವೇ ಕಳೆದು ಹೋಯಿತು: ಅಟಲ್ ನಿಧನಕ್ಕೆ ಶಾರುಖ್ ನೋವು

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಬಾಲಿವುಡ್ ನಟ ಶಾರುಖ್ ಖಾನ್ ಸಂತಾಪ ಸೂಚಿಸಿದ್ದಾರೆ. ತನ್ನ ಬಾಲ್ಯದ ನೆನಪುಗಳು ಕಳೆದು ...
Published on
ಮುಂಬಯಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಬಾಲಿವುಡ್ ನಟ ಶಾರುಖ್ ಖಾನ್ ಸಂತಾಪ ಸೂಚಿಸಿದ್ದಾರೆ. ತನ್ನ ಬಾಲ್ಯದ ನೆನಪುಗಳು ಕಳೆದು ಹೋಯಿತು ಎಂದು ಟ್ವೀಟ್ ಮಾಡಿದ್ದಾರೆ.
ಆರೋಗ್ಯ ಸಮಸ್ಯೆಯಿಂದಾಗಿ ಕಳೆದೊಂದು ದಶಕದಿಂದ ಸಾರ್ವಜನಿಕ ಜೀವನದಿಂದ ದೂರವೇ ಉಳಿದಿದ್ದ, ವಾಜಪೇಯಿ ಗುರುವಾರ ಸಂಜೆ  ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ವಾಜಪೇಯಿ ಸಾವಿನ ಬಗ್ಗೆ ನಟ ಶಾರುಖ್ ಖಾನ್ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ. ದೆಹಲಿಯಲ್ಲಿ ವಾಜಪೇಯಿ ಅವರ ಭಾಷಣ ಇದ್ದಾಗ ನನ್ನ ತಂದೆ ತಪ್ಪದೇ ಅಲ್ಲಿಗೆ ಕರೆದುಕೊಂಡು ಹೋಗುತ್ತಿದ್ದರು.  ಅವರ ಭಾಷಣ ಕೇಳುತ್ತಾ ಅವರನ್ನು ನೋಡುತ್ತಾ ನಾನು ಬೆಳೆದೆ. 
ವರ್ಷಗಳು ಕಳೆದ ನಂತರ ಅವರ ಜೊತೆ ಕಾಲ ಕಳೆಯುವ ಅವಕಾಶ ದೊರೆಯಿತು,  ಆ ವೇಳೆ ನಾನು ಮತ್ತು ಅವರು ಕವಿತೆ, ಸಿನಿಮಾ, ರಾಜಕೀಯ ಹಾಗೂ ನಮ್ಮ ಮಂಡಿನೋವಿನ ಬಗ್ಗೆ ಮಾತನಾಡುತ್ತಿದ್ದೆವು, ಅವರ ಕವಿತೆಯೊಂದಕ್ಕೆ ನಟನೆ ಮಾಡುವ ಅವಕಾಶ ಕೂಡ ಸಿಕ್ಕತು.
ವಾಜಪೇಯಿ ಅವರನ್ನು ಬಾಪ್ ಜೀ ಎಂದು ಕರೆಯಲಾಗುತ್ತಿದ್ದರು. ದೇಶ ಅತಿ ದೊಡ್ಡ ನಾಯಕನನ್ನು ಕಳೆದು ಕೊಂಡಿದೆ. ವಯಕ್ತಿಕವಾಗಿ ನಾನು ನನ್ನ ಬಾಲ್ಯಕಳೆದುಕೊಂಡಿದ್ದೇನೆ, ಅವರ ನಗುಮೊಗವನ್ನು ನೋಡುತ್ತಾ ಹಾಗೂ ಅವರ ಕವಿತೆಗಳನ್ನು ಓದುತ್ತಾ ನಾನು ಬೆಳೆದೆ ಎಂದು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com