ಕಂಗನಾ ರಣಾವತ್
ಕಂಗನಾ ರಣಾವತ್

ಅಶ್ವಿನಿ ತಿವಾರಿ ನಿರ್ದೇಶನದ ಚಿತ್ರದಲ್ಲಿ ಕಬಡ್ಡಿ ಆಟಗಾರ್ತಿಯಾಗಿ ಕಂಗನಾ ರಣಾವತ್!

ಅಶ್ವಿನಿ ಅಯ್ಯರ್ ತಿವಾರಿ ನಿರ್ದೇಶನದ "ಪಂಗಾ" ಚಿತ್ರದಲ್ಲಿ ಕಂಗನಾ ರಣಾವತ್ ಓರ್ವ ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
Published on
ಮುಂಬೈ: ಅಶ್ವಿನಿ ಅಯ್ಯರ್ ತಿವಾರಿ ನಿರ್ದೇಶನದ "ಪಂಗಾ" ಚಿತ್ರದಲ್ಲಿ ಕಂಗನಾ ರಣಾವತ್ ಓರ್ವ ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ತಿವಾರಿ ತಾನು ಮುಂದಿನ ಚಿತ್ರದ ಬಗೆಗೆ ಮಂಗಳವಾರ ಟ್ವೀಟ್ ಮಾಡಿದ್ದು  ಪಂಜಾಬಿ ಗಾಯಕಿ,  ನಟಿ ಜಸ್ಸಿ ಗಿಲ್ ಹಾಗು ಹಿರಿಯ ನಟಿ ನೀನಾ ಗುಪ್ತಾ ಸಘ ಪ್ರಮುಖ ಪಾತ್ರದಲ್ಲಿದ್ದಾರೆ ಎಂದು ತಿಳಿಸಿದರು.
"ನನ್ನ ಪ್ರೀತಿಪಾತ್ರರು ನನ್ನ ಮೇಲಿಟ್ಟ  ನಂಬಿಕೆಯೇ ನನ್ನಲ್ಲಿ ಪ್ರತಿಫಲನವಾಗಿದೆ. "ಪಂಗಾ" ಚಿತ್ರದಲ್ಲಿನ ಕಂಗನಾ ರಣಾವತ್, ಜಸ್ಸಿ ಗಿಲ್, ನೀನಾ ಗುಪ್ತಾ, ಅವರುಗಳು, ನಿರ್ಮಾಪಕ ಸಂಸ್ಥೆ ಫೋಕ್ಸ್ ಸ್ಟಾರ್ ಹಿಂದಿ ಈ ಚಿತ್ರದ ಬೆಂಬಲಕ್ಕಿದ್ದಾರೆ. 2019 ರಲ್ಲಿ ಚಿತ್ರ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ"  ಅಶ್ವಿನಿ ಅಯ್ಯರ್ ತಿವಾರಿ ಟ್ವಿಟ್ ಮಾಡಿದ್ದಾರೆ.
ಚಿತ್ರಕಥೆಯು ಪ್ರೇಕ್ಷಕರಲ್ಲಿ ನಗು, ಅಳು, ಕನಸು ಎಲ್ಲವನ್ನೂ ಮೂಡಿಸಬಲ್ಲದು.ಒಟ್ಟಾರೆ ಕಥೆ ಹೃದಯಕ್ಕೆ ಹತ್ತಿರವಾಗಿರುವಂತೆ ಇರಲಿದೆ. ಎಂದು ನಿರ್ಮಾಣ ಸಂಸ್ಥೆ ಫೋಕ್ಸ್ ಸ್ಟಾರ್ ಹಿಂದಿ ಹೇಳಿಕೆ ನಿಡಿದೆ.
"ನನ್ನ ಕುಟುಂಬವು ನನ್ನ ಬಲವಾದ ಶಕ್ತಿಯಾಗಿದ್ದು ಯಾವಾಗಲೂ ನನ್ನ ಕಷ್ಟ, ಸುಖಗಳಲ್ಲಿ ಬೆಂಬಲಕ್ಕೆ ನಿಲ್ಲುತ್ತದೆ.ಈ ಚಿತ್ರದಲ್ಲಿ ನನ್ನ ಪಾತ್ರ ನನ್ನ ನೈಜ ಭಾವನೆಗೆ ತೀರಾ ಹತ್ತಿರವಾಗಿದೆ. ಅಷ್ಟೇ ಅಲ್ಲದೆ ಅಶ್ವಿನಿ ವಿಭಿನ್ನ ಶೈಲಿಯ ಚಿತ್ರಗಳಿಗಾಗಿ ಹೆಸರಾದವರು.ನನಗೆ ಅವರ ಇತ್ತೀಚಿನ ಚಿತ್ರ "ಬರೇಲಿ ಕಿ ಬರ್ಫಿ" ಬಹಳ ಮೆಚ್ಚುಗೆಯಾಗಿದೆ" ಕಂಗನಾ ಹೇಳಿದರು.
"ಪಂಗಾ" ದಲ್ಲಿ ನನಗೆ ಸಿಕ್ಕಿರುವ ಪಾತ್ರ ನಿಜಕ್ಕೂ ಸವಾಲೊಡ್ಡುವಂತಹುದು. ಇದೇ ಮೊದಲ ಬಾರಿಗೆ ನಾನು ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತಿದ್ದೇನೆ.ಇದೇ ವೇಳೆ ನಾನು ಅಶ್ವಿನಿ ಹಾಗೂ ಫೋಕ್ಸ್ ಸ್ಟಾರ್ ಹಿಂದಿ ತಂಡದಿಂಡ ಕೆಲವು ಅಪೂರ್ವ ಕ್ಷಣಗಳನ್ನು ಎದುರು ನೋಡುತ್ತಿದ್ದೇನೆ." ನಟಿ ಹೇಳಿದ್ದಾರೆ.
ಬಾಲಿವುಡ್ ಚಿತ್ರ "ಹ್ಯಾಪಿ ಫಿರ್ ಭಾಗ್ ಜಾಯೇಗಿ" ಚಿತ್ರದಲ್ಲಿ ನಟಿಸಿರುವ ಜಸ್ಸಿ ಸಹ "ಪಂಗಾ" ಚಿತ್ರದ ಕುರಿತಂತೆ ಕುತೂಹಲ ಹೊಂದಿದ್ದಾರೆ. ಇನ್ನು ಹಿರಿಯ ನಟಿ ನೀನಾ ಸಹ ಚಿತ್ರೀಕರಣ ಪ್ರಾರಂಭವಾಗುವುದನೇ ಕಾಯುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com