ಉತ್ತರಾಖಂಡದ 7 ಜಿಲ್ಲೆಗಳಲ್ಲಿ 'ಕೇದಾರನಾಥ್' ಚಿತ್ರ ಪ್ರದರ್ಶನಕ್ಕೆ ನಿಷೇಧ

ಉತ್ತರಾಖಂಡದ ಏಳು ಜಿಲ್ಲೆಗಳಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಪುತ್ರಿ ಸಾರಾ ಅಲಿ ಖಾನ್ ಹಾಗೂ ಸುಶಾಂತ್​ ಸಿಂಗ್​...
ಕೇದಾರನಾಥ್ ಚಿತ್ರದ ಸ್ಟಿಲ್
ಕೇದಾರನಾಥ್ ಚಿತ್ರದ ಸ್ಟಿಲ್
ಡೆಹ್ರಾಡೂನ್: ಉತ್ತರಾಖಂಡದ ಏಳು ಜಿಲ್ಲೆಗಳಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಪುತ್ರಿ ಸಾರಾ ಅಲಿ ಖಾನ್ ಹಾಗೂ ಸುಶಾಂತ್​ ಸಿಂಗ್​ ರಜಪೂತ್ ಅಭಿನಯದ 'ಕೇದಾರನಾಥ್' ಚಿತ್ರ ಪ್ರದರ್ಶನಕ್ಕೆ ನಿಷೇಧ ಹೇರಲಾಗಿದೆ ಎಂದು ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ.
ಸಿನಿಮಾದಲ್ಲಿ ಹಿಂದುಗಳ ಭಾವನೆಗೆ ಧಕ್ಕೆ ಆಗುವ ಸಂಗತಿಗಳು ಇದ್ದು ಬಿಡುಗಡೆಯಾಗದಂತೆ ನಿಷೇಧ ವಿಧಿಸಬೇಕು ಎಂದು ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಎಡಿಜಿ(ಕಾನೂನು ಸುವ್ಯವಸ್ಥೆ) ಅಶೋಕ್ ಕುಮಾರ್ ಅವರು ಹೇಳಿದ್ದಾರೆ.
ಡೆಹ್ರಾಡೂನ್, ಹರಿದ್ವಾರ, ನೈನಿತಾಲ್, ಉಧಾಮ್ ಸಿಂಗ್ ನಗರ, ಪೂರಿ, ತೆಹ್ರಿ ಮತ್ತು ಅಲ್ಮೊರಾದಲ್ಲಿ ಚಿತ್ರ ಪ್ರದರ್ಶನಕ್ಕೆ ನಿಷೇಧ ಹೇರಲಾಗಿದೆ ಎಂದು ಎಡಿಜಿ ತಿಳಿಸಿದ್ದಾರೆ.
ಇಂದು ಬಿಡುಗಡೆಯಾಗಿರುವ ಕೇದಾರನಾಥ್​ ಚಿತ್ರದಲ್ಲಿ ಲವ್​ ಜಿಹಾದ್​ ಪರವಾಗಿ ಚಿತ್ರಿಸಲಾಗಿದ್ದು ಹಿಂದುಗಳ ಧಾರ್ಮಿಕ ಭಾವನೆಗೆ ನೋವುಂಟುಮಾಡುತ್ತದೆ. ಯಾವುದೇ ಕಾರಣಕ್ಕೂ ಚಿತ್ರ ಬಿಡುಗಡೆಯಾಗಬಾರದು ಎಂದು ಈ ಏಳು ಜಿಲ್ಲೆಗಳಲ್ಲಿ  ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.
ಕೇದಾರನಾಥ್​ ಸೈಫ್​ ಅಲಿ ಖಾನ್​ ಪುತ್ರಿ ಸಾರಾ ಅವರ ಚೊಚ್ಚಲ ಚಿತ್ರ. ಸತತ ಎರಡು ವರ್ಷಗಳ ಹಿಂದೆ ಕೇದಾರನಾಥ ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. 2013ರಲ್ಲಿ ಆ ಪಟ್ಟಣ ಪ್ರವಾಹಕ್ಕೆ ತುತ್ತಾಗಿರುವ ಕಥೆಯನ್ನು ಒಳಗೊಂಡಿದೆ. ಅಭಿಷೇಕ್​ ಕಪೂರ್ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com