ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಚಿತ್ರ ನಿರ್ದೇಶಕ ಮೃಣಾಲ್ ಸೇನ್ ನಿಧನ್ರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.
"ಏಕ್ ದಿನ್ ಅಚಾನಕ್", "ಪದಾತಿಕ್", "ಮೃಗಯಾ " ದಂತಹಾ ಪ್ರಸಿದ್ದ ಚಿತ್ರಗಳನ್ನು ನೀಡಿದ್ದ ಸೇನ್ ಭೌನಿಪೋರ್ ನಿವಾಸದಲ್ಲಿ ನಿಧನರಾದರು ಎಂದು ಎ ಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಕಳೆದ ವರ್ಷ ಅವರ ಪತ್ನಿ ನಿಧನರಾದರು ಮತ್ತು ಅವರ ಪುತ್ರ ಕುನಾಲ್ ಸೇನ್ ಅವರು ಚಿಕಾಗೋದಲ್ಲಿ ನೆಲೆಸಿದ್ದಾರೆ
2003 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಇತ್ತು.
ಅವರ ಸಮಕಾಲೀನರಾದ ಸತ್ಯಜಿತ್ ರೇ ಮತ್ತು ರಿತ್ವಿಕ್ ಘಾಟಕ್ ಅವರೊಂದಿಗೆ, ಅವರು ಜಾಗತಿಕ ಹಂತದಲ್ಲಿ ಬಂಗಾಳಿ ಸಮಾನಾಂತರ ಸಿನಿಮಾದ ಮಹಾನ್ ರಾಯಭಾರಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು.
Dadasaheb Phalke awardee film maker Mrinal Sen passed away at the age of 95 at his residence today.