ಬಾಲಿವುಡ್ ನಟ ಜಿತೇಂದ್ರ ನನ್ನ ಮೇಲೆ ಅತ್ಯಾಚಾರ ನಡೆಸಿದ್ದರು: ಸೋದರ ಸಂಬಂಧಿ ಆರೋಪ

ಬಾಲಿವುಡ್ ಹಿರಿಯ ನಟ ಜಿತೇಂದ್ರ ಅವರ ವಿರುದ್ಧ ಅವರ ಸೋದರ ಸಂಬಂಧಿ ಮಹಿಳೆ ಲೈಂಗಿಕ ಕಿರುಕುಳ ಆರೋಪ...
ತಮ್ಮ ಪುತ್ರ ತುಶಾರ್ ಕಪೂರ್ ಜೊತೆ ಜಿತೇಂದ್ರ
ತಮ್ಮ ಪುತ್ರ ತುಶಾರ್ ಕಪೂರ್ ಜೊತೆ ಜಿತೇಂದ್ರ
Updated on
ಶಿಮ್ಲಾ: ಬಾಲಿವುಡ್ ಹಿರಿಯ ನಟ ಜಿತೇಂದ್ರ ಅವರ ವಿರುದ್ಧ ಅವರ ಸೋದರ ಸಂಬಂಧಿ ಮಹಿಳೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಅದು ಕೂಡ 47 ವರ್ಷಗಳ ನಂತರ. ಈ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ.
ಜಿತೇಂದ್ರ ಅವರ ಮೂಲ ಹೊಸರು ರವಿ ಕಪೂರ್. ಅವರ ಸೋದರ ಮಾವನ ಮಗಳು ಇದೀಗ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವುದಲ್ಲದೆ ಹಿಮಾಚಲ ಪ್ರದೇಶ  ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ. ಅದರ ಒಂದು ಪ್ರತಿ ಐಎಎನ್ಎಸ್ ಸುದ್ದಿ ಸಂಸ್ಥೆಗೆ ಲಭ್ಯವಾಗಿದೆ.
ದೂರಿನಲ್ಲಿ ಮಹಿಳೆ, ಘಟನೆ 1971ರ ಜನವರಿಯಲ್ಲಿ ನಡೆಯಿತು, ನಾನು ಆಗ 18 ವರ್ಷ ವಯಸ್ಸದವಳಾಗಿದ್ದೆ. ಜಿತೇಂದ್ರ ಅವರ ವಯಸ್ಸು 28 ಆಗಿತ್ತು. ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಜಿತೇಂದ್ರ ನನ್ನನ್ನು ದೆಹಲಿಯಿಂದ ಶಿಮ್ಲಾಗೆ ಕರೆದುಕೊಂಡು ಹೋಗಿದ್ದರು.ಶಿಮ್ಲಾದಲ್ಲಿ ರಾತ್ರಿ ಉಳಿದುಕೊಳ್ಳಲು ಕೋಣೆ ಬುಕ್ ಮಾಡಿದ್ದರು.
ರಾತ್ರಿಯಾದ ನಂತರ ರೂಂನಲ್ಲಿ ಪ್ರತ್ಯೇಕವಾಗಿದ್ದ ಬೆಡ್ ಗಳು ಹತ್ತಿರ ತಂದು ಜೋಡಿಸಿ ನನ್ನ ಮೇಲೆ ಬಲವಂತವಾಗಿ ಅತ್ಯಾಚಾರ ನಡೆಸಿದ್ದರು ಎಂದು ಆರೋಪಿಸಿದ್ದಾರೆ.
ಮಹಿಳೆಯರ ವಿರುದ್ಧ ನಡೆಯುತ್ತಿರುವ ಲೈಂಗಿಕ ಕಿರುಕುಳ, ಅತ್ಯಾಚಾರ, ಹಲ್ಲೆ ಇತ್ಯಾದಿಗಳನ್ನು ಖಂಡಿಸಿ ನಡೆಯುತ್ತಿರುವ ಮಿ ಟು ಅಭಿಯಾನದ ಸಂದರ್ಭದಲ್ಲಿ ಮಹಿಳೆ ಜಿತೇಂದ್ರ ವಿರುದ್ಧ ಈ ಆರೋಪ ಮಾಡಿದ್ದಾರೆ. ಪ್ರಖ್ಯಾತ ಪುರುಷರಿಂದ ತಾವು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರೆ ಅದನ್ನು ಧೈರ್ಯವಾಗಿ ಹೇಳಿಕೊಳ್ಳುವ ಅಭಿಯಾನ ಮಿ ಟು ಆಗಿದೆ. 
ಹಾಲಿವುಡ್ ನ ಹಲವು ಪ್ರಖ್ಯಾತ ಪುರುಷರಿಂದ ಲೈಂಗಿಕ ಕಿರುಕುಳಕ್ಕೆ ಒಶಗಾಗಿದ್ದೇವೆ ಎಂದು ಹಲವು ನಟಿಯರು ಇದುವರೆಗೆ ಹೇಳಿಕೊಂಡಿದ್ದರೆ ಬಾಲಿವುಡ್ ನಲ್ಲಿ ಇದುವರೆಗೆ ಯಾರೂ ಹೇಳಿಕೊಂಡಿರಲಿಲ್ಲ.
75 ವರ್ಷದ ಜಿತೇಂದ್ರ ಅವರು ಹಿಂದಿ ಚಲನ ಚಿತ್ರ ಉದ್ಯಮದಲ್ಲಿ ಚಿರಪರಿಚಿತರು. ನಿರ್ಮಾಪಕ, ನಟರಾಗಿ ಹೆಸರು ಗಳಿಸಿದವರು. ಅವರ ಪುತ್ರಿ ಎಕ್ತಾ ಕಪೂರ್ ನಿರ್ಮಾಪಕಿ ಹಾಗೂ ನಿರ್ದೇಶಕಿ, ಪುತ್ರ ತುಶಾರ್ ಬಾಲಿವುಡ್ ನಟ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com