ಅತಿ ಹೆಚ್ಚು ಸಂಭಾವನೆ ಪಡೆದ ವಿಶ್ವದ ಸೆಲೆಬ್ರಿಟಿಗಳ ಫೋರ್ಬ್ಸ್ ಪಟ್ಟಿಯಲ್ಲಿ ಅಕ್ಷಯ್, ಸಲ್ಮಾನ್
ವಿಶ್ವದಲ್ಲಿ 100 ಅತಿ ಹೆಚ್ಚು ಸಂಭಾವನೆ ಪಡೆಯುವ ಮನರಂಜನೆಗಾರರಲ್ಲಿ ಬಾಲಿವುಡ್ ನಟರಾದ ಅಕ್ಷಯ್ ಕುಮಾರ್ ಮತ್ತು ಸಲ್ಮಾನ್ ಖಾನ್ ಸ್ಥಾನ ಪಡೆದಿದ್ದಾರೆ. ಫೋರ್ಬ್ಸ್ ನಿಯತಕಾಲಿಕೆ ಪಟ್ಟಿ ಬಿಡುಗಡೆ ಮಾಡಿದ್ದು ಅಮೆರಿಕಾದ ಬಾಕ್ಸರ್ ಫ್ಲಾಯ್ಡ್ ಮೇವೆದರ್ ಮೊದಲ ಸ್ಥಾನದಲ್ಲಿದ್ದಾರೆ.
2018ನೇ ಸಾಲಿನ ವಿಶ್ವದಲ್ಲಿ ಅತಿ ಹೆಚ್ಚು ಸಂಭಾವನೆ ಗಳಿಸುವ ಸೆಲೆಬ್ರಿಟಿಗಳ ಫೋರ್ಬ್ಸ್ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ 76ನೇ ಸ್ಥಾನದಲ್ಲಿದ್ದರೆ ಸಲ್ಮಾನ್ ಖಾನ್ 82ನೇ ಸ್ಥಾನ ಪಡೆದಿದ್ದಾರೆ.
ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಸೆಲೆಬ್ರಿಟಿಗಳು ಕಳೆದೊಂದು ವರ್ಷದಲ್ಲಿ 6.3 ಶತಕೋಟಿ ಪೂರ್ವತೆರಿಗೆ ಪಾವತಿಸಿದ್ದಾರೆ ಮತ್ತು 11 ಸೂಪರ್ ಸ್ಟಾರ್ ಗಳು 100 ದಶಲಕ್ಷಕ್ಕೂ ಅಧಿಕ ತೆರಿಗೆ ಕಳೆದೆರಡು ವರ್ಷಗಳಲ್ಲಿ ಪಾವತಿಸಿದ್ದಾರೆ ಎಂದು ಫೋರ್ಬ್ಸ್ ಹೇಳಿದೆ.
ಅಕ್ಷಯ್ ಕುಮಾರ್ ಕಳೆದ ವರ್ಷ 40.5 ಮಿಲಿಯನ್ ಡಾಲರ್ ಸಂಪಾದಿಸಿದ್ದಾರೆ. ಅವರ ಟಾಯ್ಲೆಟ್: ಏಕ್ ಪ್ರೇಮ್ ಕಥಾದಂತಹ ಸಾಮಾಜಿಕ ಕಳಕಳಿಯ ಸಿನಿಮಾ ಮತ್ತು ಪ್ಯಾಡ್ ಮ್ಯಾನ್ ನಂತಹ ಸಿನಿಮಾ ಸರ್ಕಾರದ ಶುಚಿತ್ವದ ಕಾಳಜಿ ಕುರಿತು ಸಮಾಜದ ಜನತೆಗೆ ಸಂದೇಶ ನೀಡುತ್ತದೆ. ಈ ಸಿನಿಮಾಗಳು ಅವರಿಗೆ ಜನಪ್ರಿಯ ಮತ್ತು ಯಶಸ್ಸು ತಂದುಕೊಟ್ಟಿವೆ. ಅಲ್ಲದೆ ಸುಮಾರು 20 ಬ್ರಾಂಡ್ ಗಳ ರಾಯಭಾರಿ ಕೂಡ ಆಗಿದ್ದಾರೆ.
ಸಲ್ಮಾನ್ ಖಾನ್ ಅವರ ಕಳೆದ ವರ್ಷದ ಆದಾಯ 37.7 ದಶಲಕ್ಷ ಡಾಲರ್ ಆಗಿದೆ. ಬಾಲಿವುಡ್ ನ ಪ್ರಮುಖ ನಟರಾಗಿರುವ ಸಲ್ಮಾನ್ ಖಾನ್ ಟೈಗರ್ ಜಿಂದಾ ಹೈಯಂತಹ ಹಿಟ್ ಚಿತ್ರವನ್ನು ಕಳೆದ ವರ್ಷ ನೀಡಿದ್ದರು.
ಅತಿ ಹೆಚ್ಚು ಸಂಭಾವನೆ ಗಳಿಸಿದ ಸೆಲೆಬ್ರಿಟಿಗಳಲ್ಲಿ ಜಾರ್ಜ್ ಕೂನಿ ದ್ವಿತೀಯ ಸ್ಥಾನದಲ್ಲಿ, ರಿಯಾಲಿಟಿ ಟಿವಿ ಸ್ಟಾರ್ ಮತ್ತು ಉದ್ಯಮಿ ಕೈಲೀ ಜೆನ್ನರ್ (ಮೂರನೇ), ಸಾಕರ್ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೊ (10), ಪಾಪ್ ತಾರೆ ಕೇಟಿ ಪೆರಿ (19), ಟೆನಿಸ್ ಐಕಾನ್ ರೋಜರ್ ಫೆಡರರ್ (23), ಗಾಯಕ ಬೆಯೋನ್ಸ್ (35), ಲೇಖಕ ಜೆ.ಕೆ. ರೌಲಿಂಗ್ (42) ಮತ್ತು ಗಾಲ್ಫ್ ಟೈಗರ್ ವುಡ್ಸ್ (66) ಇದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ