ಈ ಸಂಬಂಧ ಟ್ವೀಟ್ ಮಾಡಿರುವ ಅಕ್ಷಯ್ ಕುಮಾರ್, ಕೆಲವು ದಿನಗಳ ಹಿಂದೆ ಕಣ್ಮೀರು ತರಿಸಿದ್ದ ವಿಷಯ ಮತ್ತೆ ಈಗ ಖುಷಿಗೆ ಕಾರಣವಾಗಿದೆ, ಮುಟ್ಟಿನ ದಿನಗಳ ಸ್ವಚ್ಛತೆಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಸ್ಯಾನಿಟರಿ ಪ್ಯಾಡ್ ಗಳಿಗೆ ತೆರಿಗೆ ವಿನಾಯಿತಿ ನೀಡಿರುವುದು ಸಂತೋಷದಾಯಕ ವಿಚಾರ ಎಂದು ಟ್ವೀಟ್ ಮಾಡಿದ್ದಾರೆ, ದೇಶದ ಕೋಟ್ಯಾಂಟತರ ಮಹಿಳೆಯರು ಸದ್ದಿಲ್ಲದೆ ತಮ್ಮ ಕೃತಜ್ಞತೆ ಸಲ್ಲಿಸುತ್ತಾರೆ ಎಂದು ಹೇಳಿದ್ದಾರೆ.