ಹಸ್ತಮೈಥುನವೆಂದರೆ ನಿಮ್ಮ ದೇಹ ಮತ್ತು ಲೈಂಗಿಕತೆಯ ಮೇಲೆ ನಿಮ್ಮದೇ ಅಧಿಕಾರ: ಸ್ವರ ಭಾಸ್ಕರ್

ಹಿಂದಿಯ ಇತ್ತೀಚಿನ ಯಶಸ್ವಿ ಚಿತ್ರ 'ವೀರೆ ಡಿ ವೆಡ್ಡಿಂಗ್' ನಲ್ಲಿ ಹಸ್ತಮೈಥುನ ದೃಶ್ಯಕ್ಕೆ ನಟಿ ಸ್ವರ ಭಾಸ್ಕರ್ ...
ಸ್ವರ ಭಾಸ್ಕರ್
ಸ್ವರ ಭಾಸ್ಕರ್

ಮುಂಬೈ: ಹಿಂದಿಯ ಇತ್ತೀಚಿನ ಯಶಸ್ವಿ ಚಿತ್ರ 'ವೀರೆ ಡಿ ವೆಡ್ಡಿಂಗ್' ನಲ್ಲಿ ಹಸ್ತಮೈಥುನ ದೃಶ್ಯಕ್ಕೆ ನಟಿ ಸ್ವರ ಭಾಸ್ಕರ್ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಟ್ರಾಲ್ ಆಗಿರುವುದು ಗೊತ್ತೇ ಇದೆ.

ಈ ಬಗ್ಗೆ ಇದೀಗ ಸ್ವತಃ ಸ್ವರ ಭಾಸ್ಕರ್ ಅವರೇ ಪ್ರತಿಕ್ರಿಯೆ ನೀಡಿದ್ದು, ಸಿನಿಮಾದಲ್ಲಿ ಒಬ್ಬಳು ಹುಡುಗಿ ಸ್ವಯಂ ತೃಪ್ತಿಪಡಿಸಿಕೊಳ್ಳಲು ಹಸ್ತಮೈಥುನ ಆಕೆಗೆ ಸಿಕ್ಕಿದ ಅಧಿಕಾರ ಎಂದು ಭಾವಿಸುತ್ತೇನೆ ಎನ್ನುತ್ತಾರೆ.

ಚಿತ್ರದಲ್ಲಿ ಸಾಕ್ಷಿ ಎಂಬ ಪಾತ್ರ ಮಾಡಿರುವ ಸ್ವರಾಗೆ ಟ್ವಿಟ್ಟರ್ ನಲ್ಲಿ ಒಬ್ಬರು, ಸಿನಿಮಾದಲ್ಲಿ ಹಸ್ತಮೈಥುನ ಮಾಡಿಕೊಳ್ಳುವುದು ಸಶಕ್ತೀಕರಣ ಮತ್ತು ಮಹಿಳೆಗೆ ಸಿಕ್ಕಿದ ಅಧಿಕಾರ ಹೇಗಾಗುತ್ತದೆ, ಅಷ್ಟಕ್ಕೂ ಹಸ್ತ ಮೈಥುನ ಕ್ರಿಯೆ ಸಾರ್ವಜನಿಕವಾಗಿ ಇರಬಾರದು, ಅದು ಖಾಸಗಿ ವಿಷಯ, ನಾಲ್ಕು ಗೋಡೆಯ ಮಧ್ಯೆ ಇರಬೇಕು ಎಂದು ಪ್ರತಿಕ್ರಿಯೆ ನೀಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಸ್ವರ ಭಾಸ್ಕರ್, ಚಿತ್ರದಲ್ಲಿ ಸಾಕ್ಷಿ ತನ್ನ ಖಾಸಗಿ ಬೆಡ್ ರೂಂನಲ್ಲಿ ಹಸ್ತಮೈಥುನ ಮಾಡಿಕೊಳ್ಳುತ್ತಾಳೆಯೇ ಹೊರತು ಸಾರ್ವಜನಿಕವಾಗಿ ಅಲ್ಲ. ಹಸ್ತಮೈಥುನವೆಂದರೆ ನಿಮ್ಮ ದೇಹವನ್ನು ಲೈಂಗಿಕತೆಗೆ ಒಗ್ಗಿಸಿಕೊಳ್ಳುವುದು. ಅದುವೇ ಸಶಕ್ತೀಕರಣ ಮತ್ತು ಸಿಗುವ ಅಧಿಕಾರ ಎಂದು ಹೇಳಿದ್ದಾರೆ.

ಶಶಾಂಕ್ ಘೋಷ್ ನಿರ್ದೇಶನದ ವೀರೆ ಡಿ ವೆಡ್ಡಿಂಗ್ ಚಿತ್ರದಲ್ಲಿ ಹಸ್ತಮೈಥುನಕ್ಕೆ ಸ್ವರಾ ಭಾಸ್ಕರ್ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗಿವೆ. ಇದರಲ್ಲಿ ಕರೀನಾ ಕಪೂರ್ ಖಾನ್, ಸೋನಮ್ ಕಪೂರ್, ಅಹುಜಾ ಮತ್ತು ಶಿಖಾ ತಲ್ಸನಿಯಾ ಕೂಡ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ಟೀಕೆಗಳಿಗೆ ಸ್ವರಾಳ ಆತ್ಮೀಯ ಗೆಳತಿಯಾಗಿರುವ ಸೋನಂ ಕಪೂರ್ ಅವರ ಪರವಾಗಿ ನಿಂತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com