ಐಐಎಫ್ಎ 2018: ಇರ್ಫಾನ್ ಖಾನ್, ಶ್ರೀದೇವಿ ಅತ್ಯುತ್ತಮ ನಟ, ನಟಿ

ಅದ್ದೂರಿ ತಾರಾ ಮೇಳ, ಝಗಮಗಿಸುವ ದೀಪಗಳ ಭವ್ಯ ಬೆಳಕಿನೊಂದಿಗೆ 19ನೇ ಭಾರತೀಯ ...
ಇರ್ಫಾನ್ ಖಾನ್, ಶ್ರೀದೇವಿ, ವಿದ್ಯಾ ಬಾಲನ್
ಇರ್ಫಾನ್ ಖಾನ್, ಶ್ರೀದೇವಿ, ವಿದ್ಯಾ ಬಾಲನ್
Updated on

ಬ್ಯಾಂಕಾಂಕ್: ಅದ್ದೂರಿ ತಾರಾ ಮೇಳ, ಝಗಮಗಿಸುವ ದೀಪಗಳ ಭವ್ಯ ಬೆಳಕಿನೊಂದಿಗೆ 19ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರಂಭ ಏರ್ಪಟ್ಟಿತು. ವಿದ್ಯಾ ಬಾಲನ್ ನಟನೆಯ 'ತುಮ್ಹಾರಿ ಸುಲು'ಗೆ 2017ನೇ ಸಾಲಿನ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿದೆ.

ಮಧ್ಯಮ ವರ್ಗದ ಗೃಹಿಣಿ ತಡರಾತ್ರಿಯ ರೇಡಿಯೊ ಶೋ ನಡೆಸಿಕೊಟ್ಟ ನಂತರ ಜೀವನದಲ್ಲಿ ಆದ ಬದಲಾವಣೆ ಬಗ್ಗೆ ಚಿತ್ರದಲ್ಲಿ ತೋರಿಸಲಾಗಿದೆ. ಬ್ಯಾಂಕಾಕ್ ನ ಸಿಯಾಮಿ ನಿರಮಿತ್ ಥಿಯೇಟರ್ ನಲ್ಲಿ ಕಳೆದ ರಾತ್ರಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಿರ್ದೇಶಕ ಕರಣ್ ಜೋಹರ್ ಮತ್ತು ನಟ ರಿತೇಶ್ ದೇಶ್ ಮುಖ್ ನಿರೂಪಕರಾಗಿದ್ದರು.

ಹಿಂದಿ ಮೀಡಿಯಂ ಚಿತ್ರದ ನಟನೆಗಾಗಿ ಇರ್ಫಾನ್ ಖಾನ್ ಗೆ ಅತ್ಯುತ್ತನ ನಟ ಪ್ರಶಸ್ತಿ ಸಂದಿತು. ಈ ಚಿತ್ರದಲ್ಲಿ, ದೆಹಲಿಯ ಪ್ರತಿಷ್ಠಿತ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಮಗನನ್ನು ಸೇರಿಸಲು ಪ್ರಯತ್ನಿಸುತ್ತಿರುವ ತಂದೆಯ ಪಾತ್ರದಲ್ಲಿ ಇರ್ಫಾನ್ ಖಾನ್ ಅಭಿನಯಿಸಿದ್ದಾರೆ.

ಅವರ ಪರವಾಗಿ ಹೈದರ್ ಚಿತ್ರದ ಸಹ ನಟಿ ಶ್ರದ್ಧಾ ಕಪೂರ್ ಪ್ರಶಸ್ತಿ ಸ್ವೀಕರಿಸಿದರು.
ಇರ್ಫಾನ್ ಖಾನ್ ಅವರೊಂದಿಗೆ ಜಗ್ಗಾ ಜಸೂಸ್ ನಿಂದ ರಣ್ಬೀರ್ ಕಪೂರ್, ಮುಕ್ತಿ ಭವಾನ್ ನಿಂದ ಆದಿಲ್ ಹುಸೇನ್, ನ್ಯೂಟನ್ ಚಿತ್ರಕ್ಕಾಗಿ ರಾಜ್ ಕುಮಾರ್ ರಾವ್ ಮತ್ತು ಟಾಯ್ಲೆಟ್: ಏಕ್ ಪ್ರೇಮ್ ಕಥಾ ಚಿತ್ರದಿಂದ ರಾಜ್ ಕುಮಾರ್ ರಾವ್ ನಾಮಾಂಕಿತಗೊಂಡಿದ್ದರು.

ಮಾಮ್ ಚಿತ್ರದಲ್ಲಿ ಪ್ರತೀಕಾರ ತೀರಿಸುವ ಮಹಿಳೆಯ ಪಾತ್ರದಲ್ಲಿ ಗಮನಸೆಳೆದ ನಟಿ ಶ್ರೀದೇವಿಯವರಿಗೆ ಉತ್ತಮ ನಟಿ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಯಿತು. ಅವರ ಪತಿ ಬೋನಿ ಕಪೂರ್ ಪ್ರಶಸ್ತಿ ಪಡೆದರು. ವಿದ್ಯಾಬಾಲನ್, ಬದ್ರಿನಾಥ್ ಕಿ ದುಲ್ಹನಿಯಾ ಚಿತ್ರದಲ್ಲಿ ಆಲಿಯಾ ಭಟ್, ಸೀಕ್ರೆಟ್ ಸೂಪರ್ ಸ್ಟಾರ್ ಚಿತ್ರದಿಂದ ಜರಿಯಾ ವಾಸಿಮ್ ಮತ್ತು ಶುಭ ಮಂಗಳ ಸಾವದಾನ್ ಚಿತ್ರದಿಂದ ಭೂಮಿ ಪಡ್ನೇಕರ್ ಸ್ಪರ್ಧೆಯಲ್ಲಿದ್ದರು.

ಹಿಂದಿ ಮೀಡಿಯಂ ಚಿತ್ರದ ನಿರ್ದೇಶನಕ್ಕಾಗಿ ಸೈಕತ್ ಚೌಧರಿಯವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿತು. ಸೂಪರ್ ಸ್ಟಾರ್ ಚಿತ್ರದಲ್ಲಿ ಉತ್ತಮ ನಟನೆಗಾಗಿ ಮೆಹರ್ ವಿಜ್ ಅತ್ಯುತ್ತಮ ಪೋಷಕ ನಟಿ ಮತ್ತು ಮಾಮ್ ಚಿತ್ರದಲ್ಲಿನ ಅಭಿನಯಕ್ಕಾಗಿ ನವಾಜುದ್ದೀನ್ ಸಿದ್ದಿಖಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಸ್ವೀಕರಿಸಿದರು.

ಹಿರಿಯ ನಟಿ ರೇಖಾ ಅವರಿಂದ ಪ್ರಶಸ್ತಿ ಸ್ವೀಕರಿಸಿದ ನವಾಜುದ್ದೀನ್ ಸಿದ್ದಿಖಿ ನಟಿ ಶ್ರೀದೇವಿಯವರನ್ನು ನೆನೆದು ಭಾವುಕರಾದರು.

ಈ ವರ್ಷ ಆಸ್ಕರ್ ಪ್ರಶಸ್ತಿಗೆ ನಾಮಾಂಕಿತಗೊಂಡಿದ್ದ ನ್ಯೂಟನ್ ಚಿತ್ರ ಅತ್ಯುತ್ತಮ ಕಥೆ ಪ್ರಶಸ್ತಿ ನಿರ್ದೇಶಕ ಮಾಸುರ್ಕರ್ ಅವರಿಗೆ ಲಭಿಸಿತು. ನಟರಾದ ದಿಯಾ ಮಿರ್ಜಾ ಮತ್ತು ರಾಜ್ ನಾಯಕ್ ಪ್ರಶಸ್ತಿ ನೀಡಿದರು.

ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿ ಅಮಾಲ್ ಮಲ್ಲಿಕ್, ತನಿಶ್ಕ್ ಬಗ್ಚಿ ಮತ್ತು ಅಖಿಲ್ ಸಚ್ ದೇವ್ ಅವರಿಗೆ ಲಭಿಸಿದೆ. ಬಾಲಿವುಡ್ ದಂತಕಥೆಗಳಾದ ಶ್ರೀದೇವಿ, ವಿನೋದ್ ಖನ್ನಾ ಮತ್ತು ಶಶಿ ಕಪೂರ್ ಅವರಿಗೆ ಗೌರವ ನಮನ ಸಲ್ಲಿಸಲಾಯಿತು.

ವೃತ್ತಿ ಜೀವನದಲ್ಲಿ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಅನುಪಮ್ ಖೇರ್ ಅವರಿಗೆ ಅದ್ವಿತೀಯ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಟ ಅನಿಲ್ ಕಪೂರ್ ಸೇರಿದಂತೆ ಬಾಲಿವುಡ್ ಚಿತ್ರರಂಗದ ಅನೇಕ ಖ್ಯಾತನಾಮರು ಸಮಾರಂಭದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com