ಆಸ್ಕರ್ ಅವಾರ್ಡ್ಸ್ ಗೆ ಶಾರುಖ್ ಖಾನ್, ತಬು ಸೇರಿ 928 ಹೊಸ ಸದಸ್ಯರಿಗೆ ಆಹ್ವಾನ

ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್, ತಬು ಮತ್ತು ಹಿರಿಯ ನಟ ನಾಸೀರುದ್ದೀನ್ ಷಾ ಸೇರಿದಂತೆ ದಾಖಲೆಯ 928 ಮಂದಿ ಹೊಸ ಸದಸ್ಯರನ್ನು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸ್ ಆಹ್ವಾನಿಸಿದೆ.
ಶಾರೂಖ್ ಖಾನ್
ಶಾರೂಖ್ ಖಾನ್
ಲಾಸ್ ಎಂಜಲೀಸ್ : ಬಾಲಿವುಡ್ ಸೂಪರ್ ಸ್ಟಾರ್  ಶಾರುಖ್ ಖಾನ್, ತಬು ಮತ್ತು ಹಿರಿಯ ನಟ ನಾಸೀರುದ್ದೀನ್ ಷಾ  ಸೇರಿದಂತೆ ದಾಖಲೆಯ 928 ಮಂದಿ ಹೊಸ ಸದಸ್ಯರನ್ನು  ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸ್ ಆಹ್ವಾನಿಸಿದೆ.  ಆಸ್ಕರ್ಸ್ ಹಿಂದಿರುವ ಈ ಸಂಸ್ಥೆಯು ಪ್ರಶಸ್ತಿ ಪ್ರಧಾನ ಸಮಾರಂಭದ ಆಕರ್ಷಣೆ  ಹೆಚ್ಚಿಸಲು ಪ್ರಯತ್ನಿಸುತ್ತಿದೆ.
ಹೊಸ ಸದಸ್ಯರು ಮತ್ತಷ್ಟು ಆಕರ್ಷಣೆಯನ್ನು  ಹೆಚ್ಚಿನ ರೀತಿಯಲ್ಲಿ ಹೆಚ್ಚಿಸಲಿದ್ದಾರೆ ಎಂದು ಪ್ರಕಟಣೆಯೊಂದರಲ್ಲಿ ಅಕಾಡೆಮಿ ಹೇಳಿದೆ, ಅದರ ಶೇ. 49 ರಷ್ಟು ಮಂದಿ ಸ್ತ್ರೀಯರು ಮತ್ತು 38 ರಷ್ಟು  ಪುರುಷರು ಬಣ್ಣದ ಲೋಕಕ್ಕೆ ಸೇರಿದವರಾಗಿದ್ದಾರೆ. 59 ದೇಶಗಳ ಕಲಾವಿದರನ್ನು  ಹೊಸ ಸದಸ್ಯರಾಗಿ ಆಹ್ವಾನಿಸಲಾಗಿದೆ.
ಹೊಸ ಆಹ್ವಾನಿತರ ಪಟ್ಟಿಯಲ್ಲಿ ನಟಿ ತಬು, ಮಾಧುರಿ ದೀಕ್ಷಿತ್, ವಿರಾಸತ್ ಸಹ ನಾಯಕ ಅನಿಲ್ ಕಾಪೂರ್ ಮತ್ತು ನಟಿ ಆಲಿ ಫಜಾಲ್ ಸೇರಿದಂತೆ ಹಲವು ಭಾರತೀಯರಿಗೆ ಆದ್ಯತೆ ನೀಡಲಾಗಿದ್ದು,  ಬೆಂಗಾಲಿ ಖ್ಯಾತ ನಟಿ ಸುಮಿತ್ರಾ ಚಟರ್ಜಿ, ಮತ್ತು ಮದಾಬಿ ಮುಖರ್ಜಿ ಕೂಡಾ ಆಹ್ವಾನಿತರ ಪಟ್ಟಿಯಲ್ಲಿದ್ದಾರೆ.
ಯಶ್ ರಾಜ್ ಫಿಲಂಸ್ ನ ಆದಿತ್ಯ ಚೋಪ್ರ, ನಿರ್ಮಾಪಕ ಗುನಿತ್ ಮೊಂಗಾ,  ಛಾಯಾಗ್ರಾಹಕ ಅನಿಲ್ ಮೆಹತಾ, ಕಸ್ಟೂಮ್ ಡಿಸೈನರ್ ಡಾಲಿ ಅಹ್ಲುವಾಲಿಯಾ, ಮನಿಶ್ ಮಲ್ಹೋತ್ರಾ,  ಸುಬ್ರತ್ ಚಕ್ರಾಬೊರ್ಟಿ, ಅಮಿತ್ ರಾಯ್  ಕೂಡಾ ಹೊಸ ಸದ್ಯಸರ ಪಟ್ಟಿಯಲ್ಲಿದ್ದಾರೆ.
ದಂಗಲ್ ಸಂಪಾದಕ ಬಾಲು ಸಲೂಜಾ, ಸಂಗೀತಗಾರ ಉಷಾ ಕಣ್ಣ, ಸ್ನೇನಾ ಕನ್ ವಾಲ್ಕರ್   ಭಾರತದ ಸಂಗೀತ ವಿಭಾಗವನ್ನು ಪ್ರತಿನಿಧಿಸುತ್ತಿದ್ದಾರೆ.ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್. ರೆಹಮಾನ್ , ನಟ ಇರ್ಪಾನ್ ಖಾನ್  , ಅಮಿತಾಬ್ ಬಚ್ಚನ್, ಮತ್ತು ಅಮೀರ್ ಖಾನ್ ಈಗಾಗಲೇ ಅಕಾಡೆಮಿಯ ಸದಸ್ಯರಾಗಿದ್ದಾರೆ.
ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಹರ್ವೆ ವೆಯಿನ್ಸ್ ಟೈನ್ ಲೈಂಗಿಕ ಕಿರುಕುಳ ಪ್ರಕರಣ ಹಾಲಿವುಡ್ ನಿಂದ ಬರುವ ಮಹಿಳೆಯರ  ವರ್ಣಿಸಲಾಗಿತ್ತು.
ಇದನ್ನು ಬದಲಾಯಿಸುವ ಸಲುವಾಗಿ ಅಕಾಡೆಮಿ ಈ ಬಾರಿ ತನ್ನ ಸದಸ್ಯರ ಮೂಲಕ ವೈವಿದ್ಯತೆಯನ್ನು ಹೆಚ್ಚಿಸಲು ನಿರ್ಧರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com