ಆಸ್ಕರ್ ನಂತಹ ಸಮಾರಂಭಗಳ ರೆಡ್ ಕಾರ್ಪೆಟ್ ಸಂಸ್ಕೃತಿ ಬೇಸರ ಹುಟ್ಟಿಸುತ್ತದೆ: ಶಬಾನಾ ಆಜ್ಮಿ

ಆಸ್ಕರ್ ನಂತಹ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಲ್ಲಿ ಚಿತ್ರಗಳ ಬಗ್ಗೆ ಚರ್ಚೆಗಳು ....
ಶಬಾನಾ ಆಜ್ಮಿ
ಶಬಾನಾ ಆಜ್ಮಿ
Updated on

ಮುಂಬೈ: ಆಸ್ಕರ್ ನಂತಹ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಲ್ಲಿ ಚಿತ್ರಗಳ ಬಗ್ಗೆ ಚರ್ಚೆಗಳು ನಡೆಯುವುದಕ್ಕಿಂತ ಹೆಚ್ಚಾಗಿ ಸೌಂದರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವುದು ನಿಜಕ್ಕೂ ಬೇಸರ ತರಿಸುತ್ತದೆ ಎಂದು ಬಾಲಿವುಡ್ ಹಿರಿಯ ನಟಿ ಶಬಾನಾ ಆಜ್ಮಿ ಅಭಿಪ್ರಾಯಪಟ್ಟಿದ್ದಾರೆ.

ಆಸ್ಕರ್ ಪ್ರದಾನ ಕಾರ್ಯಕ್ರಮ ನೋಡುವಾಗ, ಅಲ್ಲಿ ಸೌಂದರ್ಯದ ಮಾನದಂಡಗಳನ್ನು ನಿಗದಿಪಡಿಸುವುದು, ರೆಡ್ ಕಾರ್ಪೆಟ್ ಸಂಸ್ಕೃತಿ ಚಕಿತವುಂಟಾಗುತ್ತದೆ ಮತ್ತು ಕರುಣೆ ಕೂಡ ಆಗುತ್ತದೆ ಎಂದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಆಸ್ಕರ್ ರೆಡ್ ಕಾರ್ಪೆಟ್ ನ್ನು ನೋಡುವಾಗ ಸೌಂದರ್ಯದ ಮಾನದಂಡವನ್ನು ನಿಗದಿಪಡಿಸುವ ಹತಾಶೆಯ ಮನೋವೃತ್ತಿ ಬೇಸರವನ್ನು ಮತ್ತು ಅಚ್ಚರಿಯನ್ನು ತರುತ್ತದೆ. ನೀವು ನೀವಿದ್ದಂತೆ ಒಪ್ಪಿಕೊಳ್ಳದಿರುವ ಒತ್ತಡಕ್ಕೆ ಸಿಲುಕುವುದನ್ನು ನೋಡಿದರೆ ಮನಸ್ಸಿಗೆ ಬೇಸರವುಂಟಾಗುತ್ತದೆ ಎಂದು ಕೂಡ ಹೇಳಿದ್ದಾರೆ.

ಹಲವರಿಗೆ ಆಸ್ಕರ್ ಪ್ರಶಸ್ತಿ ಪ್ರದಾನವೆಂದರೆ ಹಾಲಿವುಡ್ ಚಿತ್ರರಂಗವನ್ನು ಸಂಭ್ರಮಿಸುವುದು ಮಾತ್ರವಲ್ಲ ಫ್ಯಾಶನ್ ಗುರಿಗಳನ್ನು ಮತ್ತು ಸೌಂದರ್ಯದ ಪ್ರವೃತ್ತಿಯನ್ನು ನಿಗದಿಪಡಿಸುವುದೆಂದರ್ಥ. 90ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ 4ರಂದು ಲಾಸ್ ಏಂಜಲಿಸ್ ನಲ್ಲಿ ನಡೆಯಿತು.

ಇದಕ್ಕೂ ಮುನ್ನ ಐಎಎನ್ಎಸ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಶಬಾನಾ ಆಜ್ಮಿ, ಕ್ಯಾನ್ಸ್ ಸೇರಿದಂತೆ ರೆಡ್ ಕಾರ್ಪೆಟ್ ಗಳಲ್ಲಿ ಪ್ರದರ್ಶನಗೊಳ್ಳುವ ಸಿನಿಮಾಗಳ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಗಳಾಗುವುದಿಲ್ಲ. ಬದಲಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವ ನಟಿಯರ ಉಡುಗೆ-ತೊಡುಗೆಗಳಿಗೆ ಹೆಚ್ಚು ಪ್ರಚಾರ ನೀಡಲಾಗುತ್ತದೆ. ನಟಿಯರು ತಮ್ಮ ಒಂದು ಕೈಯನ್ನು ಸೊಂಟದಲ್ಲಿ ಹಿಡಿದುಕೊಂಡು ನಿಲ್ಲುವ ಫೋಟೋಗಳು ರಾರಾಜಿಸುತ್ತವೆ. ನಟಿಯರು ಹಾಗೆ ನಿಲ್ಲುವುದು ಒಂದು ಆಕರ್ಷಕ ಭಂಗಿ ಎಂದು ಯಾರು ತೀರ್ಮಾನಿಸಿದರೆಂದು ಗೊತ್ತಾಗುವುದಿಲ್ಲ ಎನ್ನುತ್ತಾರೆ ಈ ಅನುಭವಿ ನಟಿ.

ಶಬಾನಾ ಆಜ್ಮಿ ಪ್ರಸ್ತುತ ತಮ್ಮ ನಾಟಕವಾದ ಕೈಫಿ ಔರ್ ಮೈನ್ ನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡುವ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಸಿಡ್ನಿಯಲ್ಲಿ ನಾಟಕ ಪ್ರದರ್ಶನಕ್ಕೆ ಜನರಿಂದ ಸಿಕ್ಕಿರುವ ಮೆಚ್ಚುಗೆಯಿಂದ ಖುಷಿಯಾಗಿರುವ ನಟಿ ಇಂದು ನ್ಯೂಜಿಲ್ಯಾಂಡ್ ನ ಆಕ್ಲೆಂಡ್ ನಲ್ಲಿ ನಡೆಯಲಿರುವ ಪ್ರದರ್ಶನ ಎದುರು ನೋಡುತ್ತಿರುವುದಾಗಿ ಕಳೆದ ಶುಕ್ರವಾರ ಟ್ವೀಟ್ ಮಾಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com