ಐಶ್ವರ್ಯ ರೈಗೆ ಹೃದಯಸ್ಪರ್ಶಿ ಪತ್ರ ಬರೆದ ಹಿರಿಯ ನಟಿ ರೇಖಾ

ವಿಶ್ವಸುಂದರಿ, ಬಚ್ಚನ್ ಸೊಸೆ ಐಶ್ವರ್ಯಾ ರೈ ಚಿತ್ರರಂಗಕ್ಕೆ ಬಂದು ಎರಡು ದಶಕಗಳು ಕಳೆದಿವೆ...
ರೇಖಾ-ಐಶ್ವರ್ಯಾ ರೈ
ರೇಖಾ-ಐಶ್ವರ್ಯಾ ರೈ
Updated on

ನವದೆಹಲಿ: ವಿಶ್ವಸುಂದರಿ, ಬಚ್ಚನ್ ಸೊಸೆ ಐಶ್ವರ್ಯಾ ರೈ ಚಿತ್ರರಂಗಕ್ಕೆ ಬಂದು ಎರಡು ದಶಕಗಳು ಕಳೆದಿವೆ. ಈ ಸಂದರ್ಭದಲ್ಲಿ ಬಾಲಿವುಡ್ ಹಿರಿಯ ನಟಿ ಬಿಗ್ ಬಿ ಅಮಿತಾಬ್ ಬಚ್ಚನ್ ಅವರೊಂದಿಗೆ ಅನೇಕ ಚಿತ್ರಗಳಲ್ಲಿ ಜೋಡಿಯಾಗಿ ನಟಿಸಿದ ರೇಖಾ ಐಶ್ ಗೆ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ. ಅದನ್ನು ಖ್ಯಾತ ಮ್ಯಾಗಜಿನ್ ಪ್ರಕಟಿಸಿದೆ.

ಪತ್ರದಲ್ಲಿ ಐಶ್ವರ್ಯಾ ರೈಯನ್ನು ರೇಖಾ ಹೊಗಳಿ ಬರೆದಿದ್ದಾರೆ.'' ನಿನ್ನಂಥ ಸಾಮರಸ್ಯದಿಂದ ಬದುಕುವ ಮಹಿಳೆ ಉತ್ಸಾಹದಲ್ಲಿ ಹರಿಯುವ ನದಿಯಂತೆ, ಯಾವತ್ತಿಗೂ ಒಂದು ಕಡೆ ನಿಂತ ನೀರಿನಂತಲ್ಲ. ಯಾವುದೇ ತೋರಿಕೆಯಿಲ್ಲದೆ ತನಗೆ ಬೇಕಾದಲ್ಲಿಗೆ ಹೋಗುತ್ತಾಳೆ ಮತ್ತು ತನ್ನ ಗುರಿಯ ಸ್ಥಳಕ್ಕೆ ತಲುಪುತ್ತಾಳೆ, ಅದನ್ನು ಅವಳಿಗಾಗಿಯೇ ನಿರ್ಧರಿತವಾದ ಮತ್ತು ಅವಳಿಗಾಗಿಯೇ ಇರುವ ಜಾಗಕ್ಕೆ ಬಂದು ಸೇರುತ್ತಾಳೆ.

ಜನರು ನೀನು ಏನು ಹೇಳಿದೆ, ನೀನು ಏನು ಮಾಡಿದೆ ಎಂಬುದನ್ನು ಮರೆಯಬಹುದು, ಆದರೆ ಅವರು ಏನು ನಿನ್ನ ಬಗ್ಗೆ ಭಾವಿಸುವಂತೆ ಮಾಡಿದ್ದಾರೆ ಅದನ್ನು ಮರೆಯಲು ಸಾಧ್ಯವಿಲ್ಲ. ಎಲ್ಲಾ ಸದ್ಗುಣಗಳಿಗೆ ಧೈರ್ಯ ಮುಖ್ಯ ಎಂಬುದಕ್ಕೆ ಜೀವಂತ ಉದಾಹರಣೆ ನೀನು, ಧೈರ್ಯವಿಲ್ಲದಿದ್ದರೆ ಬೇರೆ ಯಾವುದೇ ಸದ್ಗುಣಗಳನ್ನು ನೀನು ನಿರಂತರವಾಗಿ ಮಾಡಲು ಸಾಧ್ಯವಿಲ್ಲ. ನಿನ್ನ ಅಗಾಧ ಶಕ್ತಿ ಮತ್ತು ನಿಷ್ಕಲ್ಮಷವಾದ ಶುದ್ಧ ಶಕ್ತಿ ನೀನು ಮಾತನಾಡುವ ಮೊದಲೇ ನಿನ್ನನ್ನು ಪರಿಚಯ ಮಾಡಿಕೊಡುತ್ತದೆ.

ಅಷ್ಟೇ ಅಲ್ಲದೆ ರೇಖಾ ತಮ್ಮ ಸುದೀರ್ಘ ಪತ್ರದಲ್ಲಿ ಐಶ್ವರ್ಯಾ ರೈ ತನ್ನ ಜೀವನ ಮತ್ತು ವೃತ್ತಿಯಲ್ಲಿ ಪಟ್ಟ ಕಷ್ಟಗಳು ಮತ್ತು ಜೀವನದಲ್ಲಿ ತೆಗೆದುಕೊಂಡ ಕಠಿಣ ನಿರ್ಧಾರಗಳ ಕುರಿತು ಕೂಡ ಬರೆದಿದ್ದಾರೆ. ಬೇರೆ ಮಹಿಳೆಯರು ತುಳಿಯದ ಹಾದಿಯನ್ನು ಐಶ್ವರ್ಯಾ ತುಳಿದಿದ್ದಾರೆ ಎಂದಿದ್ದಾರೆ ರೇಖಾ.

ಪ್ರಸ್ತುತತೆ ಜೊತೆ ಕೃತಜ್ಞತೆಯಿಂದ ಬಾಳುವುದು ನೀನು ಮಾಡಿರುವ ತಪ್ಪು. ನೀನು ಪ್ರೀತಿಸುವುದನ್ನೆ ಆಯ್ಕೆಮಾಡಿಕೊಂಡೆ. ಅದನ್ನು ಎಷ್ಟು ಚೆನ್ನಾಗಿ ಮಾಡಿದೆಯೆಂದರೆ ಜನರು ನಿನ್ನನ್ನು ಅಗಾಧವಾಗಿ ಪ್ರೀತಿಸುವಷ್ಟು. ನೀನು ನೀನಾಗಿರುವುದು ಸಾಕು, ಯಾರಿಗೂ ಸಾಬೀತುಪಡಿಸಬೇಕಾದ್ದಿಲ್ಲ. ನಾವು ಉಸಿರಾಡಿಕೊಂಡು ಇರುವಾಗಲಲ್ಲ ನಮ್ಮ ಜೀವನವನ್ನು ಲೆಕ್ಕಹಾಕುವುದು. ನಮ್ಮ ಉಸಿರಾಟ ನಿಂತಾಗ.

ಹೀಗೆ ಬರೆದಿರುವ ರೇಖಾ ಐಶ್ವರ್ಯಾ ಪುತ್ರಿ ಆರಾಧ್ಯಳನ್ನು ಕೂಡ ಪತ್ರದಲ್ಲಿ ನಮೂದಿಸಿದ್ದಾರೆ. ನಿನ್ನ ಜೀವನ ಸಾಕಷ್ಟು ಉದ್ದವಿದೆ. ಅನೇಕ ಅಡೆತಡೆಗಳನ್ನು ಎದುರಿಸಿ ಫಿಯೊನಿಕ್ಸ್ ನಂತೆ ಎದ್ದು ಬಂದಿದ್ದೀಯಾ. ಶಾಂತ ಚಂದಿರನ ಮುಖದಂತಿರುವ ಹುಡುಗಿಯ ಮೇಲೆ ನನ್ನ ಕಣ್ಣು ಬಿದ್ದಾಗ ನನ್ನ ಉಸಿರಾಟವನ್ನೇ ಕದ್ದುಕೊಂಡಂತಾಯಿತು ನನಗೆ, ಇದನ್ನು ಪದಗಳಲ್ಲಿ ವರ್ಣಿಸಲಸದಳ ಎಂದು ಐಶ್ವರ್ಯಾಳನ್ನು ಹೊಗಳಿದ್ದಾರೆ.

ನೀನು ನಿಭಾಯಿಸಿರುವ ಪಾತ್ರಗಳಿಗೆಲ್ಲ ನಿನ್ನ ಕೈಯಿಂದ ಸಾಧ್ಯವಾದಷ್ಟರ ಮಟ್ಟಿಗೆ ಅತ್ಯುತ್ತಮವಾದದ್ದನ್ನೇ ನೀಡಿದ್ದೀಯಾ. ಆದರೆ ಅದೆಲ್ಲಕ್ಕಿಂತಲೂ ಅತ್ಯುತ್ತಮವಾದದ್ದು ನೀನು ನಿಭಾಯಿಸುತ್ತಿರುವ ಅಮ್ಮನ ಪಾತ್ರ. ನಿನ್ನ ಜೀವನದಲ್ಲಿ ಆರಾಧ್ಯ ನಿಜಕ್ಕೂ ಸಂತೋಷ, ಸಂಭ್ರಮದ ಸಂಗ್ರಹ. ನಿನ್ನ ಮ್ಯಾಜಿಕ್ ನ್ನು ಉಳಿಸಿಕೊಂಡು ನಿನ್ನ ಸುತ್ತಮುತ್ತಲಿನವರಿಗೆ ಹರಡುತ್ತಿರು. ಐಶ್ವರ್ಯ ರೈ ಬಚ್ಚನ್ ಳ ಎರಡು ದಶಕ ವಾಹ್? ಲವ್ ಯು, ಸುದೀರ್ಘ ಕಾಲ ಬಾಳು ನಿನ್ನ ರೇಖಾ ಅಮ್ಮ ಎಂದು ಪತ್ರಕ್ಕೆ ಪೂರ್ಣವಿರಾಮ ಹಾಕಿದ್ದಾರೆ.

ಐಶ್ವರ್ಯಾ ರೈ ರೇಖಾ ಅವರನ್ನು ಸಂಬೋಧಿಸುವುದು ರೇಖಾ ಮಾ ಎಂದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com