ಲೈಂಗಿಕ ದೌರ್ಜನ್ಯ ಬಗ್ಗೆ ಮುಕ್ತವಾಗಿ ಮಾತನಾಡಿದ ಐಶ್ವರ್ಯಾ ರೈ ಬಚ್ಚನ್

ಅಮೆರಿಕಾದ ಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಹಾಲಿವುಡ್ ನಲ್ಲಿ ಹಾರ್ವೆ ವೈನ್ಸ್ಟನ್ ಲೈಂಗಿಕ ಹಗರಣ...
ಐಶ್ವರ್ಯಾ ರೈ ಬಚ್ಚನ್
ಐಶ್ವರ್ಯಾ ರೈ ಬಚ್ಚನ್
Updated on

ನವದೆಹಲಿ: ಅಮೆರಿಕಾದ ಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಹಾಲಿವುಡ್ ನಲ್ಲಿ ಹಾರ್ವೆ ವೈನ್ಸ್ಟನ್ ಲೈಂಗಿಕ ಹಗರಣ ಬೆಳಕಿಗೆ ಬರುತ್ತಿದ್ದಂತೆ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ವಿಶ್ವಾದ್ಯಂತ ಚರ್ಚೆಯ ವಿಷಯವಾಗಿತ್ತು.

ಲೈಂಗಿಕ ದೌರ್ಜನ್ಯದ ವಿರುದ್ಧ ಮಿ ಟೂ ಎಂಬ ಅಭಿಯಾನವೊಂದು ಕಳೆದ ವರ್ಷದಿಂದ ಆರಂಭವಾಗಿ ಚಿತ್ರ ಜಗತ್ತನಲ್ಲೇ ಸಾಕಷ್ಟು ಚರ್ಚೆ ಉಂಟುಮಾಡಿತ್ತು. ಇದೇ ವೇದಿಕೆ ಮೂಲಕ  ಅನೇಕ ನಟಿಯರು ತಮಗೆ ಚಿತ್ರರಂಗದಲ್ಲಿ ಎದುರಾದ ಲೈಂಗಿಕ ದೌರ್ಜನ್ಯದ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು.

ಇದೀಗ ವಿಶ್ವ ಸುಂದರಿ ಬಾಲಿವುಡ್ ನಟಿ ಐಶ್ವರ್ಯಾ ರೈ ಸಿಡ್ನಿಯಲ್ಲಿ ಇತ್ತೀಚೆಗೆ ಮನಬಿಚ್ಚಿ ಮಾತನಾಡಿದ್ದಾರೆ.  ಯಾವುದೇ ಮಹಿಳೆಗೆ ಇಂತಹ ಅನುಭವಗಳಾದಾಗ ಅದನ್ನು ಹೇಳಿಕೊಳ್ಳಲು ಸಾಕಷ್ಟು ಮುಜುಗರ ಅನುಭವಿಸಬೇಕಾಗುತ್ತದೆ. ತಮಗಾದ ಕೆಟ್ಟ ಅನುಭವಗಳನ್ನು ಹಂಚಿಕೊಳ್ಳಲು ಇದೊಂದು ಒಳ್ಳೆಯ ವೇದಿಕೆಯಾಗಿದೆ.   ಇದರಲ್ಲಿ ಯಾವುದೇ ರೀತಿಯಾದ ನಿರ್ಬಂಧಗಳು ಇಲ್ಲ.  ಜೀವನದ ವಿಚಾರಗಳ ಬಗ್ಗೆ ಚರ್ಚೆ ಮಾಡಲು ಮುಕ್ತ ವೇದಿಕೆ ಎಂದು ಐಶ್ವರ್ಯ ಹೇಳಿದ್ದಾರೆ.

ಸಂಡೆ ಟೆಲಿಗ್ರಾಫ್ ಗೆ ಮಾತನಾಡಿದ ಐಶ್ವರ್ಯಾ, ಮಿ ಟೂ ಅಭಿಯಾನ ಎನ್ನುವುದು ಹಲವು ವಿಷಯಗಳ ಹಂಚಿಕೆ ಮತ್ತು ಚರ್ಚೆಗಳನ್ನು ಹುಟ್ಟುಹಾಕಿದೆ. ಜನರು ಈ ಬಗ್ಗೆ ಮಾತನಾಡುತ್ತಿರುವುದು ಒಳ್ಳೆಯದು. ಜಗತ್ತಿನಲ್ಲಿ ಒಂದು ಭಾಗಕ್ಕೆ ಈ ವಿಷಯ ಸೀಮಿತವಾಗಬಾರದು. ಇದು ಖಂಡಿತಾ ಉತ್ತಮ ನಡೆ, ಮುಂದುವರಿಯಬೇಕು. ಇದು ಕೇವಲ ಮನರಂಜನಾ ಮತ್ತು ವ್ಯಾಪಾರ ಉದ್ಯಮ ಕ್ಷೇತ್ರಗಳಿಗೆ ಸೀಮಿತವಾಗಬಾರದು. ಸಮಾಜದ ಎಲ್ಲಾ ಸ್ತರಗಳಲ್ಲಿ ಮತ್ತು ಎಲ್ಲಾ ಕ್ಷೇತ್ರಗಳಿಂದ ಇದು ಚರ್ಚೆಗೆ ಬರಬೇಕು ಎಂದಿದ್ದಾರೆ ಐಶ್ವರ್ಯಾ ರೈ ಬಚ್ಚನ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com