ಕೃಷ್ಣಮೃಗ ಬೇಟೆ: ನಟ ಸಲ್ಮಾನ್ ಅರ್ಜಿ ವಿಚಾರಣೆ ಜುಲೈ 17ಕ್ಕೆ ಮುಂದೂಡಿಕೆ

1998ರ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಐದು ವರ್ಷ ಜೈಲು ಶಿಕ್ಷೆಯನ್ನು ಪ್ರಶ್ನಿಸಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಅರ್ಜಿಯನ್ನು ಇಂದು ಜೋಧ್ ಪುರ್ ನ್ಯಾಯಾಲಯ ಜುಲೈ 17ರವರೆಗೆ ಮುಂಮೂಡಿದೆ.
ಸಲ್ಮಾನ್  ಖಾನ್
ಸಲ್ಮಾನ್ ಖಾನ್
ಜೋಧ್ ಪುರ(ರಾಜಸ್ಥಾನ): 1998ರ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಐದು ವರ್ಷ ಜೈಲು ಶಿಕ್ಷೆಯನ್ನು ಪ್ರಶ್ನಿಸಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಅರ್ಜಿಯನ್ನು ಇಂದು ಜೋಧ್ ಪುರ್ ನ್ಯಾಯಾಲಯ ಜುಲೈ 17ರವರೆಗೆ ಮುಂಮೂಡಿದೆ.
ಬಾಲಿವುಡ್ ನಟನಿಗೆ ಏಪ್ರಿಲ್ 7ರಂದು ಜಾಮೀನು ನೀಡಿದ್ದ ನ್ಯಾಯಾಲಯ ಆ ಸಮಯ ನೀಡಿದ್ದ ನಿರ್ದೇಶನದಂತೆ ಸಲ್ಮಾನ್ ಖಾನ್ ಇಂದು ನ್ಯಾಯಾಧೀಶರ ಮುಂದೆ ಹಾಜರಿದ್ದರು.ಪ್ರತಿವಾದಿ ವಕೀಲರು ಪ್ರಕರಣದ ಕುರಿತು ವಾದ ಮಂಡನೆಗಾಗಿ ಸಮಯ ಕೋರಿದ್ದ ಕಾರಣ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಚಂದ್ರ ಕುಮಾರ್ ಸಾಂಗರಾ ವಿಚಾರಣೆಯನ್ನು  ಮುಂದೂಡಿ ಆದೇಶಿಸಿದ್ದಾರೆ.
ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಎರಡು ದಿನ ಜೋಧ್ ಪುರ್ ಜೈಲಿನಲ್ಲಿದ್ದು ಏ.7ಕ್ಕೆ ಜಾಮೀನು ಪಡೆದು ಹೊರಬಂದಿದ್ದರು.
ಹಮ್ ಸಾಥ್ ಸಾಥ್ ಹೇ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ನಡೆದಿದ್ದ ಬೇಟೆ ಪ್ರಕರಣ ಇದಾಗಿದ್ದು, ಸಲ್ಮಾನ್ ಮಾತ್ರವಲ್ಲದೇ, ಸೈಫ್ ಅಲಿ ಖಾನ್, ಟಬು, ಸೋನಾಲಿ ಬೇಂದ್ರೆ, ನೀಲಂ ಕೂಡ ಆರೋಪಿಗಳಾಗಿದ್ದಾರು. ಆದರೆ ಇತರೆ ಆರೋಪಿಗಳನ್ನು ಕೋರ್ಟ್ ಖುಲಾಸೆಗೊಳಿಸಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com