ಐಶ್ವರ್ಯಾ ರೈ ಬಚ್ಚನ್
ಬಾಲಿವುಡ್
ಇನ್ಸ್ಟಾಗ್ರಾಮ್ ಗೆ ಕಾಲಿಟ್ಟ ಐಶ್ವರ್ಯಾ ರೈ ಬಚ್ಚನ್; ಮೊದಲ ಪೋಸ್ಟ್ ಮಗಳು ಆರಾಧ್ಯಗೆ ಅರ್ಪಣೆ
ಕೊನೆಗೂ ವಿಶ್ವ ಸುಂದರಿ, ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಸಾಮಾಜಿಕ ಮಾಧ್ಯಮಕ್ಕೆ ...
ನವದೆಹಲಿ: ಕೊನೆಗೂ ವಿಶ್ವ ಸುಂದರಿ, ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಸಾಮಾಜಿಕ ಮಾಧ್ಯಮಕ್ಕೆ ಕಾಲಿಟ್ಟಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಖಾತೆ ತೆರೆದಿದ್ದಾರೆ.
ಆಕರ್ಷಣೀಯ ತಾಯಿ ಎಂದು ಹೆಸರಾಗಿರುವ ಐಶ್ವರ್ಯಾ ರೈ ಇನ್ಸ್ಟಾಗ್ರಾಮ್ ನಲ್ಲಿನ ಮೊದಲ ಪೋಸ್ಟ್ ನ್ನು ತನ್ನ 6 ವರ್ಷದ ಮಗಳು ಆರಾಧ್ಯಗೆ ಅರ್ಪಿಸಿದ್ದಾರೆ.
ಮಗಳ ಫೋಟೋ ಷೇರ್ ಮಾಡಿ ಅದಕ್ಕೆ ಐಶ್ವರ್ಯಾ ನಾನು ಮತ್ತೆ ಹುಟ್ಟಿ ಬಂದೆ ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಇದೀಗ ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಕ್ಯಾನೆ ಚಲನಚಿತ್ರೋತ್ಸವ 2018ರಲ್ಲಿ ಭಾಗವಹಿಸಲು ಐಶ್ವರ್ಯಾ ತಮ್ಮ ಮಗಳೊಂದಿಗೆ ತೆರಳಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದರೆ ಐಶ್ವರ್ಯಾ ಫನ್ನೆ ಖಾನ್ ಚಿತ್ರದಲ್ಲಿ ಅನಿಲ್ ಕಪೂರ್ ಹಾಗೂ ರಾಜ್ ಕುಮಾರ್ ರಾವ್ ಅವರೊಂದಿಗೆ ನಟಿಸುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ