ನವದೆಹಲಿ: ನಿನ್ನೆಯಷ್ಟೇ ಬೆಂಗಳೂರಿನಲ್ಲಿ ದೀಪಿಕಾ ಪಡುಕೋಣೆ ಜೊತೆಗೆ ಆರತಕ್ಷತೆ ಕಾರ್ಯಕ್ರಮ ಮುಗಿಸಿದ ಬಾಲಿವುಡ್ ನಟ ರಣವೀರ್ ಸಿಂಗ್ , ತಾವೂ ಅಭಿನಯಿಸಿರುವ 'ಸಿಂಬಾ' ಚಿತ್ರದ ನಿರ್ದೇಶಕ ರೋಹಿತ್ ಶೆಟ್ಟಿ ಜೊತೆಗಿನ ಅನುಭವವನ್ನು ಹಂಚಿಕೊಂಡಿದ್ದಾರೆ.
ಭಾಯಿ ಈಸ್ ಬಾಯ್ ಎಂಬ ಅಡಿಬರಹದಲ್ಲಿ ರೋಹಿತ್ ಶೆಟ್ಟಿಗೆ ಅಭಿನಂದನೆ ಸಲ್ಲಿಸಿ ವಿಡಿಯೋ ಶೇರ್ ಮಾಡಿದ್ದಾರೆ.
ರೋಹಿತ್ ಶೆಟ್ಟಿ ನಿರ್ದೇಶನದ ಸಾಂಬಾ ಸಿನಿಮಾ ಚಿತ್ರೀಕರಣದ ಕೊನೆಯ ದಿನ ಹೇಗೆ ಕಾಣಿಸಿಕೊಳ್ಳುತ್ತಿದ್ದರು ಎಂಬುದನ್ನು ಈ ವಿಡಿಯೋದಲ್ಲಿ ರಣವೀರ್ ವಿವರಿಸಿದ್ದಾರೆ.
ರೋಹಿತ್ ಶೆಟ್ಟಿ ಅವರೊಂದಿಗೆ ಕೆಲಸ ಮಾಡುವ ಅವಕಾಶಕ್ಕಾಗಿ ಕಾಯುತ್ತಿದ್ದೆ. ಆ ಸುರ್ವಣಕಾಶವನ್ನು ಅಂತಿಮವಾಗಿ ಪಡೆದೆ. ನಾನು ಏನು ನಿರೀಕ್ಷೆ ಮಾಡಿದ್ದೇನೂ ಅದಕ್ಕಿಂತಲೂ ಸಾವಿರ ಪಟ್ಟು ಹೆಚ್ಚಿಗೆ ಸಿಕ್ಕಿತು. ರೋಹಿತ್ ಶೆಟ್ಟಿ ಅವರ ಅತ್ಯಂತ ದೊಡ್ಡ ಅಭಿಮಾನಿ ಆಗಿರುವುದಾಗಿ ರಣವೀರ್ ಹೇಳಿದ್ದಾರೆ.
ಮುಂಬೈಯಲ್ಲಿ ರಣವೀರ್ ಅವರ ಆರತಕ್ಷತೆ ಕಾರ್ಯಕ್ರಮ ಮುಗಿದ ಬಳಿಕ ಡಿಸೆಂಬರ್ 3 ರಂದು ಸಿಂಬಾ ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ.ಸಿಂಬಾ ತೆಲುಗು ಚಿತ್ರ ಟೆಂಪರ್ ಚಿತ್ರದ ರಿಮೇಕ್ ಆಗಿದ್ದು, ಡಿಸೆಂಬರ್ 28 ರಂದು ತೆರೆ ಮೇಲೆ ಮೂಡಿಬರಲಿದೆ.
Advertisement