ತನುಶ್ರೀ ದತ್ತ - ನಾನಾ ಪಾಟೇಕರ್
ಬಾಲಿವುಡ್
ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ನಟಿ ತನುಶ್ರೀ ಕಾರಿನ ಮೇಲೆ ದಾಳಿ, 2008ರ ವಿಡಿಯೋ ಈಗ ವೈರಲ್
2008ರಲ್ಲಿ ಬಾಲಿವುಡ್ ಹಿರಿಯ ನಟ ಹಾಗೂ ನಿರ್ಮಾಪಕ ನಾನಾ ಪಾಟೇಕರ್ ಅವರ ವಿರುದ್ಧ ಲೈಂಗಿಕ...
2008ರಲ್ಲಿ ಬಾಲಿವುಡ್ ಹಿರಿಯ ನಟ ಹಾಗೂ ನಿರ್ಮಾಪಕ ನಾನಾ ಪಾಟೇಕರ್ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಗ್ಲಾಮರಸ್ ನಟಿ ತನುಶ್ರೀ ದತ್ತ ಅವರ ಕಾರಿನ ಮೇಲೆ ದಾಳಿ ನಡೆದಿದ್ದು, ಘಟನೆಯ ವಿಡಿಯೋ ಈಗ ವೈರಲ್ ಆಗಿದೆ.
10 ವರ್ಷಗಳ ಹಿಂದೆ ಸಿನಿಮಾ ಸೆಟ್‌ವೊಂದರಲ್ಲಿ ನಾನಾ ಪಾಟೇಕರ್ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದರು. ಈ ಬಗ್ಗೆ ತಾವು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರೂ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ನಟಿ ಆರೋಪಿಸಿದ್ದಾರೆ.
ನಾನು ನಾನಾ ಪಾಟೇಕರ್ ಅವರ ವಿರುದ್ಧ ದೂರ ದಾಖಲಿಸಲು ಪ್ರಯತ್ನಿಸಿದಾಗ ಮಹಾರಾಷ್ಟ್ರ ನವನಿರ್ಮಾಣ್ ಸೇನಾ ಸದಸ್ಯರು ನನ್ನ ಕಾರಿನ ಮೇಲೆ ದಾಳಿ ಮಾಡಿದರು. ಪೊಲೀಸ್ ಠಾಣೆಗೆ ದೂರು ಕೊಡಲು ಹೋದಾಗ ಆಗಲೇ ನಾನಾ ಪಾಟೇಕರ್ ಕೌಂಟರ್ ಎಫ್‌ಐಆರ್ ರೆಡಿ ಮಾಡಿಟ್ಟರು ಎಂದು ತನುಶ್ರೀ ತಮ್ಮ ಅಳಲು ತೋಡಿಕೊಂಡಿದ್ದಾರೆ.
ತನುಶ್ರೀ ಕಾರಿನ ಮೇಲೆ ದಾಳಿ ನಡೆದ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ಸದ್ದು ಮಾಡುತ್ತಿದೆ.
ಹಾರ್ನ್ ಓಕೆ ಪ್ಲೀಸ್ ಎಂಬ ಸಿನಿಮಾದಲ್ಲಿ ನಾನು ಒಬ್ಬಳೇ ಐಟಂ ಸಾಂಗ್‌ಗೆ ಡಾನ್ಸ್ ಮಾಡಬೇಕಿತ್ತು. ಆಗ ಅಲ್ಲಿದ್ದ ನಾನಾ ಪಾಟೇಕರ್ ನನ್ನನ್ನು ತಬ್ಬಿಕೊಂಡು ಅಶ್ಲೀಲ ದೃಶ್ಯವೊಂದರಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸಿದರು ಮತ್ತು ನನ್ನೊಂದಿಗೆ ಸೆಕ್ಸಿ ಡಾನ್ಸ್ ಮಾಡಿದರು. ಆ ಸಂದರ್ಭ ತುಂಬಾ ಅಸಹನೀಯವಾಗಿತ್ತು ಎಂದು ತನುಶ್ರೀ ದತ್ತ ದೂರಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ