ಮುಂಬಯಿ: ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ವಿರುದ್ಧ ಹರಿಹಾಯ್ದಿದ್ದಾರೆ.
ಕ್ರಿಮನಲ್ ಮನಸ್ಥಿತಿ ಉಳ್ಳ ರಾಜ್ ಠಾಕ್ರೆಯಿಂದ ಅಂದಿನಿಂದ ಇಂದಿನವರೆಗೂ ಹಲವು ಹಿಂಸಾಚಾರಗಳು ನಡೆಯುತ್ತಿವೆ, ಹೀಗಾಗಿ ಅವರಿಗೆ ಯಾವುದೇ ಸ್ಛಾನಮಾನ ಸಿಕ್ಕಿಲ್ಲ ಎಂದು ದೂರಿದ್ದಾರೆ.
2008 ರಲ್ಲಿ ನಾನಾ ಪಾಟೇಕರ್ ಜೊತೆಗಿನ ಶೂಟಿಂಗ್ ಬಹಿಷ್ಕರಿಸಿ ನಾನು ಹೊರ ಬರುವಾಗ ನನ್ನ ಕಾರಿನ ಮೇಲೆ ಮಾಡಿದ ಹಲ್ಲೆಗೊ ರಾಜ್ ಠಾಕ್ರೆಗೂ ನಂಟಿದೆ ಎಂದು ಆರೋಪಿಸಿದ್ದಾರೆ,
ನನ್ನ ಕಾರಿನ ಮೇಲೆ ಕೆಲವು ಗೂಂಡಾಗಳು ದಾಳಿ ನಡೆಸಿದ್ದರು ನನ್ನ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು.ಇದಕ್ಕೆ ರಾಜ್ ಠಾಕ್ರೆ ಕಾರಣ ಎಂದು ದೂರಿದ್ದಾರೆ.
2008 ರಲ್ಲಿ ಶೂಟಿಂಗ್ ಸೆಟ್ ನಿಂದ ಬೇಸರಿಸಿಕೊಂಡು ಹೊರಡುವ ವೇಳೆ ತನುಶ್ರೀ ಕಾರಿನ ಮೇಲೆ ದಾಳಿ ನಡೆದಿದ್ದ ವಿಡಿಯೋ ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ರಾಜ್ ಠಾಕ್ರೆ ಒಬ್ಬ ಗೂಂಡಾ, ರಾಜ್ ಠಾಕ್ರೆ ಅವರಂತ ಗೂಂಡಾಗಳು ಅವರ ಪಕ್ಷದಲ್ಲಿ ಇನ್ನೂ ಅನೇಕ ಮಂದಿ ಇದ್ದಾರೆ, ಮಹಿಳೆಯ ಮೇಲೆ ದಾಳಿ ನಡೆಸುವ ವ್ಯಕ್ತಿ ನಾಯಕ ಆಗಲು ಹೇಗೆ ಸಾಧ್ಯ ಎಂದು ಕಿಡಿಕಾರಿದ್ದಾರೆ.