ಪುರುಷನೊಬ್ಬನ ಪರಾಕ್ರಮ, ಅವನ ಸುತ್ತಲಿನ ಪರಿಸರದಿಂದ ಅವನ ಸಮತೋಲನದ ಚೌಕಟ್ಟು ಭಯದಿಂದ ತಲ್ಲಣಗೊಳ್ಳುವುದನ್ನು ದಾಸ್ ಸ್ತ್ರೀ ಪರ ನೋತದಿಂದ ಕಾಣುತ್ತಾರೆ.ಮೆಂಟೋ ಒಬ್ಬ ಕಲಾವಿದನಾಗಿ ಅವನಿಗೆ ಹಿಂದೂ-ಮುಸ್ಲಿಂ ವಿಭಜನ, ಭಾರತ-ಪಾಕಿಸ್ತಾನ ವಿಭಜನೆ ಹೇಗೆ ಕಾಣಿಸಿದೆ ಎನ್ನುವುದನ್ನು ದಾಸ್ ತಮ್ಮ ಈ ಚಿತ್ರದಲ್ಲಿ ತೊರಿಸಿದ್ದಾರೆ.ವಿಭಜನೆಗಾಗಿ ಮಿಡಿದ ಅವನ ಮನ, ಅನುಭವಿಸಿದ ನೋವು, ಮತಿವಿಕಲ್ಪ ಹೀಗೆ ನಾನಾ ವಿಧದ ವಿಚಾರಗಳು ಚಿತ್ರದಲ್ಲಿದೆ.