ನಂದಿತಾ ದಾಸ್
ನಂದಿತಾ ದಾಸ್

ತಂದೆ ಮೇಲೆ #MeToo ಆರೋಪ: MeTooಗೆ ನನ್ನ ಬೆಂಬಲ, ಆದ್ರೆ ನನ್ನ ತಂದೆ ಅಂತವರಲ್ಲ: ನಂದಿತಾ ದಾಸ್

ದೇಶಾದ್ಯಂತ #MeToo ಅಬ್ಬರ ಜೋರಾಗಿದೆ. ಆರೋಪ-ಪ್ರತ್ಯಾರೋಪಗಳು ನಡೆಯುತ್ತಿದ್ದು ಇದೀಗ ಚಿತ್ರಕಲಾವಿದ ಜತಿನ್ ದಾಸ್ ಮೇಲಿನ ಲೈಂಗಿಕ ಕಿರುಕುಳ ಆರೋಪಗಳ ಬಗ್ಗೆ ಅವರ...
Published on
ದೇಶಾದ್ಯಂತ #MeToo ಅಬ್ಬರ ಜೋರಾಗಿದೆ. ಆರೋಪ-ಪ್ರತ್ಯಾರೋಪಗಳು ನಡೆಯುತ್ತಿದ್ದು ಇದೀಗ ಚಿತ್ರಕಲಾವಿದ ಜತಿನ್ ದಾಸ್ ಮೇಲಿನ ಲೈಂಗಿಕ ಕಿರುಕುಳ ಆರೋಪಗಳ ಬಗ್ಗೆ ಅವರ ಪುತ್ರಿ, ನಟಿ, ನಿರ್ದೇಶಕಿ ನಂದಿತಾ ದಾಸ್ ಮೌನ ಮುರಿದಿದ್ದಾರೆ. 
#MeToo ಅಭಿಯಾನಕ್ಕೆ ತಾನು ಬೆಂಬಲ ನೀಡುತ್ತೇನೆ ಎಂದಿದ್ದಾರೆ. ಆದರೆ ನನ್ನ ತಂದೆ ವಿರುದ್ಧ ಮುಜುಗರಕ್ಕೀಡಾಗುವ ಸುಳ್ಳು ಆರೋಪಗಳು ಬಂದಿವೆ. ಅವೆಲ್ಲವನ್ನೂ ನನ್ನ ತಂದೆ ತಳ್ಳಿಹಾಕಿದ್ದಾರೆ. ಮಹಿಳೆಯರು/ಪುರುಷರು ಮಾತನಾಡಲು ಇದೇ ಸೂಕ್ತ ಸಮಯ. ಅವರು ಹೇಳುವ ಸಂಗತಿಗಳನ್ನು ನಾವು ಕೇಳಬೇಕು. ಆದರೆ ಆರೋಪಗಳು ಮಿ ಟೂ ಅಭಿಯಾನವನ್ನು ಅಡ್ಡದಾರಿ ಹಿಡಿಸುವಂತೆ ಇರಬಾರು ಎಂದು ನಂದಿತಾ ದಾಸ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. 
ಜತಿನ್ ದಾಸ್ ವಿರುದ್ಧ ನಿಷಾ ಬೋರಾ ಎಂಬ ಮಹಿಳೆ ಆರೋಪ ಮಾಡಿದ್ದು ತನ್ನ 14 ವರ್ಷ ವಯಸ್ಸಿನಲ್ಲಿ ಅವರು ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಆರೋಪಿಸಿದ್ದರು. ಇದಕ್ಕೆ ಜತಿನ್ ಸಹ ಪ್ರತಿಕ್ರಿಯಿಸಿದ್ದು ಆಕೆ ಅಸಭ್ಯವಾಗಿ ಮಾತನಾಡುತ್ತಿದ್ದಾರೆ. ನನಗೆ ಶಾಕ್ ಆಯಿತು. ಈಗ ಇಂತಹವು ನಡೆಯುತ್ತಲೇ ಇವೆ. ಆಕೆ ಯಾರು ಎಂದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com