ಲವ್ ಯಾತ್ರಿ ವಿವಾದ: ಸಲ್ಮಾನ್ ಖಾನ್ ವಿರುದ್ಧ ಎಫ್ಐಆರ್ ದಾಖಲು!

ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ಎಫ್ಐಆರ್ ದಾಕಲಾಗಿದೆ. ಸಲ್ಮಾನ್ ಖಾನ್ ಹೋಮ್ ಪ್ರೋಡಕ್ಷನ್ ನಡಿ ತಯಾರಾಗುತ್ತಿರುವ, ಸಲ್ಮಾನ್ ಖಾನ್ ಅಳಿಯ ಆಯುಷ್ ಶರ್ಮಾ ಹಾಗೂ ವಾರಿನಾ ಹುಸೈನ್....
ಲವ್ ಯಾತ್ರಿ
ಲವ್ ಯಾತ್ರಿ
Updated on
ಮುಜಾಫರ್ ಪುರ್: ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ಎಫ್ಐಆರ್ ದಾಕಲಾಗಿದೆ. ಸಲ್ಮಾನ್ ಖಾನ್ ಹೋಮ್  ಪ್ರೋಡಕ್ಷನ್ ನಡಿ   ತಯಾರಾಗುತ್ತಿರುವ,  ಸಲ್ಮಾನ್ ಖಾನ್  ಅಳಿಯ ಆಯುಷ್ ಶರ್ಮಾ ಹಾಗೂ ವಾರಿನಾ ಹುಸೈನ್ ಅಭಿನಯಿಸುತ್ತಿರುವ ಲವ್ ರಾತ್ರಿ  ಚಿತ್ರಕ್ಕೆ ಸಂಬಂಧಿಸಿ ಈ ಎಫ್ಐಆರ್ ದಾಖಲು ಮಾಡಲಾಗಿದೆ.
ಚಿತ್ರದಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆಆಗುವ ಅಂಶಗಳಿದೆ ಎಂದು ಆರೋಪಿ ಸಲ್ಮಾನ್ ಖಾನ್  ಹಾಗೂ ಇತರೆ ಏಳು ಮಂದಿಯ ಮೇಲೆ ಎಫ್ಐಆರ್  ದಾಖಲಿಸುವಂತೆ  ಮುಜಾಫರ್ ಪುರ ನ್ಯಾಯಾಲಯ ಸೆಪ್ಟೆಂಬರ್ 12ರಂದು ಆದೇಶಿಸಿತ್ತು. ಇದರಂತೆ ಶುಕ್ರವಾರ ನಗರದ ಮಿಥನ್ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನವರಾತ್ರಿಯ ಪವಿತ್ರ ಉತ್ಸವವನ್ನು ಚಲನಚಿತ್ರದ ಶೀರ್ಷಿಕೆಯು ವಿರೂಪಗೊಳಿಸಿದೆಎಂದು ಆರೋಪಿಸಿರುವ ವಕೀಲ ಸುಧೀರ್ ಕುಮಾರ್ ಓಜಾ ಅವರ ದೂರಿನ ಮೇರೆಗೆ ನ್ಯಾಯಾಲಯ ಆದೇಶವನ್ನು ಜಾರಿಗೆ ತಂದಿದೆ
ಚಲನಚಿತ್ರದ ಪ್ರೋಮೋಗಳಲ್ಲಿ ಅಶ್ಲೀಲತೆಯಿದ್ದು ಇದು ಹಿಂದೂಗಳ ಭಾವನೆಗೆ ಹಾನಿಯನ್ನುಂಟು ಮಾಡುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು. 
ಅಕ್ಟೋಬರ್ 5 ರಂದು ಬಿಡುಗಡೆಯಾಗುವ ಚಲನಚಿತ್ರವನ್ನು ನಿರ್ಮಿಸುತ್ತಿರುವ ಖಾನ್ - ಕೆಲ ದಿನಗಳ ಹಿಂದೆ ಟ್ವಿಟ್ಟರ್ ನಲ್ಲಿ ಘೋಷಿಸಿದ ಶೀರ್ಷಿಕೆಯನ್ನು ’ಲವ್ ರಾತ್ರಿ’ ಇಂದ ’ಲವ್ ಯಾತ್ರಿ’ ಎಂದು ಬದಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com