ಆರಾಧ್ಯಗೆ ಮುಜುಗರ ತರುವಂತಹ ಯಾವುದೇ ಚಿತ್ರವನ್ನು ಮಾಡುವುದಿಲ್ಲ: ಅಭಿಷೇಕ್ ಬಚ್ಚನ್

ತಮ್ಮ ವೃತ್ತಿ ಜೀವನದಲ್ಲಿ ಸಿನಿಮಾದಲ್ಲಿ ನಟಿಸುವಾಗ ಮಗಳು ಆರಾಧ್ಯಗೆ ಮುಜುಗರ ತರುವಂತಹ ...
ಅಭಿಷೇಕ್ ಬಚ್ಚನ್
ಅಭಿಷೇಕ್ ಬಚ್ಚನ್
Updated on

ಮುಂಬೈ: ತಮ್ಮ ವೃತ್ತಿ ಜೀವನದಲ್ಲಿ ಸಿನಿಮಾದಲ್ಲಿ ನಟಿಸುವಾಗ ಮಗಳು ಆರಾಧ್ಯಗೆ ಮುಜುಗರ ತರುವಂತಹ ಯಾವುದೇ ಸನ್ನಿವೇಶಗಳಲ್ಲಿ ಅಭಿನಯಿಸುವುದಿಲ್ಲ ಎಂದು ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಹೇಳಿದ್ದಾರೆ.

ನನ್ನ ವೃತ್ತಿ ಜೀವನದಲ್ಲಿ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಮಗಳು ಆರಾಧ್ಯಳನ್ನು ಗಮನದಲ್ಲಿರಿಸಿಕೊಂಡು ಆರಿಸಿಕೊಳ್ಳುತ್ತೇನೆ, ಅವಳಿಗೆ ನಾಚಿಕೆಯಾಗುವಂತಹ, ಮುಜುಗರವಾಗುವಂತಹ ಚಿತ್ರಗಳನ್ನು ಆರಿಸುವುದಿಲ್ಲ ಎನ್ನುತ್ತಾರೆ.

ಜಾಗ್ರನ್ ಸಿನಿಮಾ ಶೃಂಗಸಭೆಯಲ್ಲಿ ಪತ್ರಕರ್ತ ಮಾಯಾಂಕ್ ಶೇಖರ್ ಜೊತೆ ಸಂವಾದದ ವೇಳೆ ಅಭಿಷೇಕ್ ಬಚ್ಚನ್, ತಮ್ಮ ಬಯಕೆಯ ವೃತ್ತಿಯನ್ನು ಮಗಳು ಆರಾಧ್ಯ ಆಯ್ಕೆ ಮಾಡಿಕೊಳ್ಳಬೇಕೆಂದು ತಾವಾಗಲಿ, ತಮ್ಮ ಪತ್ನಿ ಐಶ್ವರ್ಯಾ ರೈಯಾಗಲಿ ಆಕೆಯ ಮೇಲೆ ಒತ್ತಡ ಹಾಕುವುದಿಲ್ಲ. ದೊಡ್ಡವಳಾದ ಮೇಲೆ ಆಕೆಯ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು.

ಇಂದಿಗೂ, ಮುಂದೆಯೂ ಇನ್ನು 20 ವರ್ಷ ಕಳೆದರೂ ನಮ್ಮ ಮಗಳು ಇಚ್ಛೆಪಟ್ಟ ಕೆಲಸವನ್ನು, ವೃತ್ತಿಯ ಕ್ಷೇತ್ರವನ್ನು ನಾನು ಮತ್ತು ಐಶ್ವರ್ಯಾ ಬೆಂಬಲಿಸುತ್ತೇವೆ, ನಮ್ಮ ಪೋಷಕರು ಕೂಡ ನಮ್ಮನ್ನು ಆ ರೀತಿಯೇ ಬೆಳೆಸಿದರು ಎನ್ನುತ್ತಾರೆ.

ಪೋಷಕರಾಗಿ ನಮ್ಮ ಮಕ್ಕಳು ಒಳ್ಳೆಯವರಾಗಿ ಬೆಳೆಯಬೇಕು ಎಂಬುದು ಪ್ರತಿಯೊಬ್ಬರಿಗೂ ಇರುತ್ತದೆ. ಆರಾಧ್ಯಳ ನಿರ್ಧಾರ ಸಂಪೂರ್ಣ ಅವಳದ್ದೇ ಆಯ್ಕೆಯಾಗಿರುತ್ತದೆ. ನಾವು ಅವಳ ಮೇಲೆ ಒತ್ತಡ ಹೇರುವುದಿಲ್ಲ. ಆಕೆ ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೂ ನಮಗೆ ಸಂತೋಷ, ಅದಕ್ಕೆ ನಮ್ಮ ಸಂಪೂರ್ಣ ಒಪ್ಪಿಗೆಯಿರುತ್ತದೆ ಎನ್ನುತ್ತಾರೆ.

ತಮ್ಮ ಪೋಷಕರಾದ ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ವೃತ್ತಿಯನ್ನು ವೈಯಕ್ತಿಕ ಜೀವನದೊಂದಿಗೆ ಎಂದಿಗೂ ತರುತ್ತಿರಲಿಲ್ಲ. ನಮ್ಮ ತಂದೆ ಇನ್ಸಾನಿಯತ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಅದೇ ವೇಷಭೂಷಣದಲ್ಲಿ ಮನೆಗೆ ಬಂದಿದ್ದರು. ಪೊಲೀಸ್ ಇನ್ಸ್ ಪೆಕ್ಟರ್ ವೇಷದಲ್ಲಿ ಮನೆಗೆ ಊಟಕ್ಕೆ ಬಂದಿದ್ದರು. ಅದು ಬಿಟ್ಟರೆ ನಾವು ಮನೆಯಲ್ಲಿ ಸಿನಿಮಾ ಕಲಾವಿದರ ಮಕ್ಕಳಾಗಿ ಬೆಳೆದಿಲ್ಲ, ಸಾಮಾನ್ಯವಾಗಿ ಬೆಳೆದಿದ್ದೇವೆ ಎಂದರು.

ನಮ್ಮ ಮನೆಗೆ ಸಿನಿಮಾ ಮ್ಯಾಗಜಿನ್ ತರಲು ಬಿಡುತ್ತಿರಲಿಲ್ಲ. ಪತ್ರಕರ್ತರನ್ನು ನಮ್ಮ ತಂದೆ ಜೊತೆ ಬರಲು, ಮನೆಗೆ ಬಂದು ಭೇಟಿ ಮಾಡಲು ನಾನು ಮತ್ತು ನನ್ನ ಅಕ್ಕ ಚಿಕ್ಕವಳಿರುವಾಗ ಬಿಡುತ್ತಿರಲಿಲ್ಲ. ಅನೇಕ ವರ್ಷಗಳವರೆಗೆ ನಮಗೆ ಚಿತ್ರೋದ್ಯಮದ ಬಗ್ಗೆ ಏನೂ ಗೊತ್ತಾಗುತ್ತಿರಲಿಲ್ಲ. ಸಾಮಾನ್ಯ ಜೀವನವನ್ನು ನಾವು ಪಾಲಿಸಿಕೊಂಡು ಬಂದಿದ್ದೆವು.
ಸಣ್ಣವರಿದ್ದಾಗ ಸಿನಿಮಾ ಉದ್ಯಮದ ಮಂದಿಯ ಮಕ್ಕಳೇ ಸ್ನೇಹಿತರಾಗಿದ್ದರು. ಹೃತಿಕ್ ರೋಷನ್, ಆದಿತ್ಯ, ಉದಯ್ ಚೋಪ್ರಾ ಮೊದಲಾದವರ ಜೊತೆ ಆಟವಾಡುತ್ತಾ ಸಾಮಾನ್ಯರಾಗಿಯೇ ಬೆಳೆದಿದ್ದೆವು ಎಂದು ಬಾಲ್ಯದ ದಿನಗಳನ್ನು ನೆನಪಿಸಿಕೊಂಡರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com