'ಪಿಎಂ ನರೇಂದ್ರ ಮೋದಿ' ಚಿತ್ರ ಬಿಡುಗಡೆಗೆ ಚುನಾವಣಾ ಆಯೋಗ ಅನುಮತಿ

ಏಪ್ರಿಲ್ 5ರಂದು ಬಿಡುಗಡೆಗೆ ನಿಗದಿಯಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀವನಾಧಾರಿತ “ಪಿಎಂ ನರೇಂದ್ರ ಮೋದಿ” ಚಿತ್ರಕ್ಕೆ ಚುನಾವಣಾ ಆಯೋಗ ಹಸಿರುನಿಶಾನೆ ತೋರಿದೆ.
'ಪಿಎಂ ನರೇಂದ್ರ ಮೋದಿ' ಚಿತ್ರ ಬಿಡುಗಡೆಗೆ ಚುನಾವಣಾ ಆಯೋಗ ಅನುಮತಿ
'ಪಿಎಂ ನರೇಂದ್ರ ಮೋದಿ' ಚಿತ್ರ ಬಿಡುಗಡೆಗೆ ಚುನಾವಣಾ ಆಯೋಗ ಅನುಮತಿ
ನವದೆಹಲಿ: ಏಪ್ರಿಲ್ 5ರಂದು ಬಿಡುಗಡೆಗೆ ನಿಗದಿಯಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀವನಾಧಾರಿತ “ಪಿಎಂ ನರೇಂದ್ರ ಮೋದಿ” ಚಿತ್ರಕ್ಕೆ ಚುನಾವಣಾ ಆಯೋಗ ಹಸಿರುನಿಶಾನೆ ತೋರಿದೆ.
ಏಪ್ರಿಲ್‌ 5 ರಂದು ಚಿತ್ರ ಬಿಡುಗಡೆಗೆ ಚುನಾವಣಾ ಆಯೋಗ ಅನುಮತಿ ನೀಡಿದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿದೆ. ಆದರೆ ಈ ವಿಷಯದಲ್ಲಿ ಚುನಾವಣಾ ಆಯೋಗ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.
ಆದಾಗ್ಯೂ ಈ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಹೈಕೋರ್ಟ್‌ನಲ್ಲಿ ಸೋಮವಾರ ವಿಚಾರಣೆ ಸಂದರ್ಭದಲ್ಲಿ ಈ ಚಲನಚಿತ್ರ ಬಿಡುಗಡೆ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುವುದಿಲ್ಲ ಎಂದು ಆಯೋಗದ ಪರ ವಕೀಲರು ವಾದ ಮಂಡಿಸಿದ್ದರು. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈ ಚಿತ್ರದ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ವೇಳೆ ಆಯೋಗದ ವಕೀಲರು ವಾದ ಮಂಡಿಸಿದ್ದರು.
ಆದಾಗ್ಯೂ ಚುನಾವಣಾ ಆಯೋಗ ಈ ಸಂಬಂಧ ತೀರ್ಮಾನ ಕೈಗೊಳ್ಳುತ್ತದೆ ಎಂದು ಹೇಳಿ ನ್ಯಾಯಾಲಯ ಅರ್ಜಿಯನ್ನು ಇತ್ಯರ್ಥಪಡಿಸಿತ್ತು.
ಏಪ್ರಿಲ್‌ ಐದರಂದು ಚಿತ್ರ ಬಿಡುಗಡೆಯಾಗಬೇಕೇ ಅಥವಾ ಬೇಡವೇ ಎಂಬುದನ್ನು ಕೇಂದ್ರೀಯ ಚಲನಚಿತ್ರ ಪ್ರಮಾಣೀಕೃತ ಮಂಡಳಿ ನಿರ್ಧಾರ ಕೈಗೊಳ್ಳಬೇಕೇ  ಹೊರತು ಚುನಾವಣಾ ಆಯೋಗವಲ್ಲ ಎಂದು ಆಯೋಗದ ವಕೀಲರು ಹೇಳಿದ್ದರು.
ಇದಕ್ಕೂ ಮೊದಲು, ಚುನಾವಣೆಯ ವೇಳೆ ಚಿತ್ರ ಬಿಡುಗಡೆ ಮಾಡುವುದಕ್ಕೆ ಕಾಂಗ್ರೆಸ್‌ ಸೇರಿದಂತೆ ಹಲವು ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು.
ಲೋಕಸಭಾ ಚುನಾವಣೆಯಲ್ಲಿ ಲಾಭ ಪಡೆಯಲು ಈ ಚಿತ್ರ ನಿರ್ಮಿಸಲಾಗಿದೆ. ಚಿತ್ರ ಬಿಡುಗಡೆಯ ದಿನಾಂಕವನ್ನು ಮುಂದೂಡಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿತ್ತು.
ಪ್ರಧಾನಿ ಮೋದಿ ಅವರ ಪಾತ್ರದಲ್ಲಿ ನಟಿಸಿರುವ ನಟ ವಿವೇಕ್‌ ಒಬೆರಾಯ್ ಕೂಡ ಬುಧವಾರ ಚಿತ್ರ ಬಿಡುಗಡೆಯ ದಿನಾಂಕ ಮುಂದೂಡುವ ಬೇಡಿಕೆಯನ್ನು ತಳ್ಳಿ ಹಾಕಿದ್ದರು.ಇಂತಹ ಸಾಧಾರಣ ಚಿತ್ರದ ವಿರುದ್ಧ ಪಿಐಎಲ್‌ ಹಾಕುವ ಮೂಲಕ ಅಭಿಷೇಕ್‌ ಸಿಂಘ್ವಿ ಮತ್ತು ಕಪಿಲ್ ಸಿಬಲ್‌ ತಮ್ಮ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ಅಥವಾ ಚೌಕಿದಾರನ ದಂಡಕ್ಕೆ ಅವರು ಹೆದರುತ್ತಿದ್ದಾರಾ ಎಂಬುದು ಗೊತ್ತಾಗುತ್ತಿಲ್ಲ ಎಂದು ಅವರು ಹೇಳಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com