ಶ್ರೀದೇವಿ ಅಗಲಿ ಇಂದಿಗೆ ಒಂದು ವರ್ಷ; ನೆಚ್ಚಿನ ಸೀರೆ ಆನ್ ಲೈನ್ ನಲ್ಲಿ ಹರಾಜು

ಬಾಲಿವುಡ್ ದಂತಕಥೆ, ಮೊದಲ ಮಹಿಳಾ ಸೂಪರ್ ಸ್ಟಾರ್ ಶ್ರೀದೇವಿ ಅಗಲಿ ಭಾನುವಾರಕ್ಕೆ ಒಂದು ವರ್ಷ...
ಶ್ರೀದೇವಿ
ಶ್ರೀದೇವಿ
ಬೆಂಗಳೂರು: ಬಾಲಿವುಡ್ ದಂತಕಥೆ, ಮೊದಲ ಮಹಿಳಾ ಸೂಪರ್ ಸ್ಟಾರ್ ಶ್ರೀದೇವಿ ಅಗಲಿ ಭಾನುವಾರಕ್ಕೆ ಒಂದು ವರ್ಷ. ಕಳೆದ ವರ್ಷ ಫೆಬ್ರವರಿ 24ರಂದು ದುಬೈಯ ಖಾಸಗಿ ಹೊಟೇಲ್ ನಲ್ಲಿ ಬಾತ್ ಟಬ್ ಗೆ ಬಿದ್ದು ಮೃತಪಟ್ಟಿದ್ದರು. ತಮ್ಮ ಸಂಬಂಧಿಕರ ಮದುವೆಗೆ ಹೋಗಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದ್ದು, ಈ ಸುದ್ದಿ ಎಲ್ಲರನ್ನೂ ಆಘಾತಕ್ಕೀಡುಮಾಡಿತ್ತು.
ತಮ್ಮ ನಟನೆ, ನೃತ್ಯ, ಸೌಂದರ್ಯದ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಮನಸೂರೆಗೊಂಡಿದ್ದ ಶ್ರೀದೇವಿಯವರಿಗೆ ನೇರಳೆ ಬಣ್ಣದ ಕೋಟಾ ಸೀರೆಗಳೆಂದರೆ ಬಹಳ ಅಚ್ಚುಮೆಚ್ಚು. ಇದೀಗ ಅವರ ಮೊದಲ ಪುಣ್ಯತಿಥಿಯ ಅಂಗವಾಗಿ ಅವರ ಪತಿ ಬೋನಿ ಕಪೂರ್ ಶ್ರೀದೇವಿಯವರು ಉಡುತ್ತಿದ್ದ ನೇರಳೆ ಕೋಟಾ ಸೀರೆಗಳನ್ನು ಹರಾಜಿಗಿಟ್ಟಿದ್ದಾರೆ. ಹರಾಜಿನಲ್ಲಿ ಸಂಪಾದನೆಯಾದ ಹಣವನ್ನು ಕನ್ಸರ್ನ್ ಇಂಡಿಯಾ ಫೌಂಡೇಶನ್ ಎಂಬ ಚಾರಿಟೇಬಲ್ ಟ್ರಸ್ಟ್ ಗೆ ನೀಡಲು ಕುಟುಂಬದವರು ನಿರ್ಧರಿಸಿದ್ದಾರೆ. ಇದೊಂದು ಚಾರಿಟೇಬಲ್ ಟ್ರಸ್ಟ್ ಆಗಿದ್ದು ಇದು ಮಹಿಳೆ, ಮಕ್ಕಳು, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸುತ್ತದೆ.
ಹ್ಯಾಂಡಿಕ್ರಾಫ್ಟ್ ಉತ್ಪನ್ನ ವೆಬ್ ಸೈಟ್ ಪೆರಿಸೆರಾದಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು ಕ್ಷಣಕ್ಷಣದ ಮಾಹಿತಿ ಸಿಗುತ್ತದೆ. ಆರಂಭಿಕ ಮೊತ್ತ 40 ಸಾವಿರದಿಂದ ಆರಂಭವಾದ ಬಿಡ್ಡಿಂಗ್ ಈಗಾಗಲೇ 1,30,000ಕ್ಕೆ ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com