ಮಂಗಳೂರು ಬೆಡಗಿ ಜೊತೆ ಕೆ.ಎಲ್ ರಾಹುಲ್ ಡೇಟಿಂಗ್: ಬಾಲಿವುಡ್ ನಟನ ಪುತ್ರಿ ಜೊತೆ ಲವ್ವಿ ಡವ್ವಿ?

ಕ್ರಿಕೆಟರ್ ಕೆಎಲ್ ರಾಹುಲ್ ವಿಶ್ವಕಪ್‌ಗಾಗಿ ಇಂಗ್ಲೆಂಡ್ ಗೆ ಹೋಗಿದ್ದಾರೆ. ಆದರೆ ಈ ಕಡೆ ಬಾಲಿವುಡ್ ನಲ್ಲಿ ಮಾತ್ರ ಕೆಎಲ್ ರಾಹುಲ್ ಗರ್ಲ್ ಫ್ರೆಂಡ್ ಬಗ್ಗೆ ಚರ್ಚೆಯಾಗುತ್ತಿದೆ...
ಅತಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್
ಅತಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್
ನವದೆಹಲಿ:  ಕ್ರಿಕೆಟರ್ ಕೆಎಲ್ ರಾಹುಲ್ ವಿಶ್ವಕಪ್‌ಗಾಗಿ ಇಂಗ್ಲೆಂಡ್ ಗೆ ಹೋಗಿದ್ದಾರೆ. ಆದರೆ ಈ ಕಡೆ ಬಾಲಿವುಡ್ ನಲ್ಲಿ ಮಾತ್ರ ಕೆಎಲ್ ರಾಹುಲ್ ಗರ್ಲ್ ಫ್ರೆಂಡ್ ಬಗ್ಗೆ ಚರ್ಚೆಯಾಗುತ್ತಿದೆ.
ಕ್ರಿಕೆಟಿಗ ಕೆ ಎಲ್ ರಾಹುಲ್ ಮತ್ತು ಸುನಿಲ್ ಶೆಟ್ಟೆ ಮಗಳು ಅತಿಯಾ ಶೆಟ್ಟಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್‌ನ ಗಲ್ಲಿಗಲ್ಲಿಗಳಲ್ಲಿ ಹರಿದಾಡತೊಡಗಿದೆ. ಇಷ್ಟು ದಿನ ಗುಟ್ಟಾಗಿದ್ದ ರಾಹುಲ್-ಅತಿಯಾ ಸುತ್ತಾಟ ಇದೀಗ ಜಗಜ್ಜಾಹೀರಾಗಿದೆ ಎನ್ನಲಾಗುತ್ತಿದೆ. 
ರಾಹುಲ್ ಮತ್ತು ಅತಿಯಾ ಲವ್‌ಗೆ ಬಿದ್ದಿರುವುದು ಪಕ್ಕಾ ಎನ್ನಲಾಗುತ್ತಿದೆ. ಈ ವರ್ಷದ ಫೆಬ್ರವರಿಯಿಂದಲೂ ಅವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ ಅವರಿಬ್ಬರನ್ನೂ ಚೆನ್ನಾಗಿ ಬಲ್ಲ ಆಪ್ತರು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದರೂ ಹೊರಗೆಲ್ಲೂ ಕಾಣಿಸಿಕೊಳ್ಳದೇ ಗುಟ್ಟನ್ನು ಗೌಪ್ಯವಾಗಿರಿಸಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com