ಅಭಿನಂದನ್ ವರ್ತಮಾನ್-ವೀಣಾ ಮಲಿಕ್
ಬಾಲಿವುಡ್
ಅಭಿನಂದನ್ ವರ್ತಮಾನ್ ಕುರಿತು ವ್ಯಂಗ್ಯವಾಡಿದ ಕನ್ನಡದ 'ಸಿಲ್ಕ್' ಚಿತ್ರ ನಟಿ ವೀಣಾ!
ಪಾಕಿಸ್ತಾನ ಎಫ್-16 ಯುದ್ಧ ವಿಮಾನವಗಳನ್ನು ಹಿಮ್ಮೆಟ್ಟಿಸಿ ಒಂದು ಯುದ್ಧ ವಿಮಾನವನ್ನು ಹೊಡೆದುರುಳಿಸಿ ನಂತರ ಆಕಸ್ಮಿಕವಾಗಿ ಗಡಿ ನಿಯಂತ್ರಣ ರೇಖೆ ದಾಟಿ ಪಾಕ್ ಸೇನೆಯ...
ಪಾಕಿಸ್ತಾನ ಎಫ್-16 ಯುದ್ಧ ವಿಮಾನವಗಳನ್ನು ಹಿಮ್ಮೆಟ್ಟಿಸಿ ಒಂದು ಯುದ್ಧ ವಿಮಾನವನ್ನು ಹೊಡೆದುರುಳಿಸಿ ನಂತರ ಆಕಸ್ಮಿಕವಾಗಿ ಗಡಿ ನಿಯಂತ್ರಣ ರೇಖೆ ದಾಟಿ ಪಾಕ್ ಸೇನೆಯ ವಶದಲ್ಲಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಕುರಿತು ಕನ್ನಡದ ಸಿಲ್ಕ್ ಚಿತ್ರದಲ್ಲಿ ನಟಿಸಿದ್ದ ನಟಿ ವ್ಯಂಗ್ಯವಾಡಿದ್ದಾರೆ.
ಸಿಲ್ಕ್ ಚಿತ್ರದ ನಟಿ ವೀಣಾ ಮಲಿಕ್ ಅಭಿನಂದನ್ ಅವರನ್ನು ಅಣಕಿಸುತ್ತಾ ಟ್ವೀಟ್ ಮಾಡಿದ್ದಾರೆ. ಎರಡೂ ದೇಶಗಳ ನಡುವೆ ಬಿಗುವಿನ ವಾತಾವರಣ ನಿರ್ಮಾಣವಾಗಿರುವ ಇತಂಹ ಪರಿಸ್ಥಿತಿಯಲ್ಲಿ ಪಾಕಿಸ್ತಾನ ನಟಿ ವೀಣಾ ಮಲಿಕ್ ವ್ಯಂಗ್ಯವಾಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಅಭಿನಂದನ್ ರನ್ನು ಪಾಕ್ ಸೇನೆ ಬಂಧಿಸಿರುವ ಫೋಟೋವನ್ನು ಟ್ವೀಟ್ ಮಾಡಿರುವ ವೀಣಾ ಮಲಿಕ್ ಅವರು ಈಗಷ್ಟೇ ಬಂದಿದ್ದೀರಿ, ನಿಮಗೆ ತುಂಬಾ ಚೆನ್ನಾಗಿ ಅತಿಥಿ ಸರ್ಕಾರ ನಡೆಯಲಿದೆ ಎಂದು ಟ್ವೀಟ್ ಮಾಡಿದ್ದರು.
ಇದಕ್ಕೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ತಿರುಗೇಟು ನೀಡಿದ್ದು ವೀಣಾ ನಿಮಗೆ ನಾಚಿಕೆಯಾಗಬೇಕು. ನಿಮ್ಮ ಕೆಟ್ಟ ಮನಸ್ಥಿತಿ ಹಾಗೂ ಸಣ್ಣ ಬುದ್ಧಿ. ನಮ್ಮ ಸೈನ್ಯದ ಅಧಿಕಾರಿ ನಮ್ಮ ಹೀರೋ. ಪಾಕ್ ನ ಬಂಧನದಲ್ಲಿದ್ದರೂ ನಮ್ಮ ಅಧಿಕಾರಿಯ ಸ್ವಾಭಿಮಾನ ಕೊಂಚವೂ ಕಡಿಮೆಯಾಗಿಲ್ಲ. ಪಾಕ್ ನ ಸೇನಾಧಿಕಾರಿಗಳು ನಮ್ಮ ಅಧಿಕಾರಿಯನ್ನು ಪ್ರಶ್ನಿಸುವಾಗ ಕೊಂಚ ಸನ್ನಡತೆ ತೋರಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
Abhi Abhi Tu Ayo Ho...Achi Mehmaan Nawazi Ho GI Aap Ki
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ