ಕೆಬಿಸಿ: ಅಂಗನವಾಡಿ ಕಾರ್ಯಕರ್ತೆ ಅದೃಷ್ಟ ಬದಲಾಯಿಸ್ತು ಆ ಒಂದು ಉತ್ತರ, ಅಮಿತಾಬ್ ಶೋನಲ್ಲಿ ಕೋಟಿ ಗೆದ್ರು!

ಟಿವಿಯಲ್ಲಿ ಬಿತ್ತರವಾಗುವ  ಕೆಲವು  ಕಾರ್ಯಕ್ರಮಗಳು ಜನಸಾಮಾನ್ಯರ ಮೇಲೆ ಭಾರಿ ಪ್ರಭಾವ ಬೀರುವ ಕಾರ್ಯಕ್ರಮಗಳಾಗಿವೆ. ಈ ಪೈಕಿ ಕೌನ್ ಬನೇಗಾ ಕರೋಡ್ ಪತಿ(ಕೆಬಿಸಿ) ಗಮನಾರ್ಹ ಕಾರ್ಯಕ್ರಮವಾಗಿದ್ದು...
ಬಬಿತಾ-ಅಮಿತಾಬ್ ಬಚ್ಚನ್
ಬಬಿತಾ-ಅಮಿತಾಬ್ ಬಚ್ಚನ್
Updated on

ಮುಂಬೈ: ಟಿವಿಯಲ್ಲಿ ಬಿತ್ತರವಾಗುವ  ಕೆಲವು  ಕಾರ್ಯಕ್ರಮಗಳು ಜನಸಾಮಾನ್ಯರ ಮೇಲೆ ಭಾರಿ ಪ್ರಭಾವ ಬೀರುವ ಕಾರ್ಯಕ್ರಮಗಳಾಗಿವೆ. ಈ ಪೈಕಿ ಕೌನ್ ಬನೇಗಾ ಕರೋಡ್ ಪತಿ(ಕೆಬಿಸಿ) ಗಮನಾರ್ಹ ಕಾರ್ಯಕ್ರಮವಾಗಿದ್ದು, ಸಾಮಾನ್ಯರನ್ನು ಕೋಟ್ಯಧಿಪತಿಯನ್ನಾಗಿ, ಲಕ್ಷಾಧಿಪತಿಗಳನ್ನಾಗಿಸುವ ಈ ಕಾರ್ಯಕ್ರಮ ಜನಸಾಮಾನ್ಯರಲ್ಲಿ ಭಾರಿ ಕ್ರೇಜ್ ಸೃಷ್ಟಿಸಿದೆ.
 
ಹಿಂದಿಯಲ್ಲಿ ಪ್ರಸಾರವಾಗುತ್ತಿರುವ ಈ ಕಾರ್ಯಕ್ರಮ ಈಗಾಗಲೇ 10 ಸೀಜನ್ ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, 11ನೇ ಸೀಜನ್ ವೀಕ್ಷಕರ ಮುಂದೆ ಬಂದಿದೆ. ಕಾರ್ಯಕ್ರಮ ನಿರೂಪಣೆ ಮಾಡುವ  ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಕಾರ್ಯಕ್ರಮದ ಯಶಸ್ಸಿಗೆ ಪ್ರಮುಖ ಕಾರಣವಾಗಿದ್ದಾರೆ.
 
ಪ್ರಸ್ತುತ ಪ್ರಸಾರವಾಗುತ್ತಿರುವ 11 ನೇ  ಆವೃತ್ತಿಯಲ್ಲಿ ಬಿಹಾರದ ಸನೋಜ್ ರಾಜ್ ಕೋಟಿ ರೂ. ಗೆದ್ದು ಮೊದಲ ಕೋಟ್ಯಾಧೀಶ್ವರ ಎಂಬ ದಾಖಲೆ ನಿರ್ಮಿಸಿದ್ದಾರೆ. ಹೊಸದಾಗಿ ಓರ್ವ ಮಹಿಳೆ ಕೋಟಿ ರೂಪಾಯಿ ಗೆದ್ದು ದಾಖಲೆ ಸೃಷ್ಟಿಸಿದ್ದಾರೆ.
 
ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಬಬಿತಾ ತಾಡೆ ಎಂಬ ಮಹಿಳೆ ಕೆಬಿಸಿಯಲ್ಲಿ ಕೋಟಿ ರೂಪಾಯಿ ಗೆದ್ದುಕೊಂಡಿದ್ದು... ಏಳು ಕೋಟಿ ರೂಪಾಯಿ ಪ್ರಶ್ನೆಯನ್ನು ಎದುರಿಸುತ್ತಿದ್ದಾರೆ.  ಈ ಕ್ರಮದಲ್ಲಿ ಬಬಿತಾ, ಮಾತನಾಡಿ ನಾನು ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಕೆಲಸ ಮಾಡಿ ತಿಂಗಳಿಗೆ 1,500 ರೂ. ಮಾತ್ರ ಸಂಪಾದಿಸುತ್ತೇನೆ. ಶಾಲೆಯಲ್ಲಿ ಮಕ್ಕಳಿಗಾಗಿ ಕಿಚಡಿ  ಮಾಡಿಕೊಡುತ್ತೇನೆ. ಇಷ್ಟು ದೊಡ್ಡ ಮೊತ್ತದ ಹಣ ಗಳಿಸುತ್ತೇನೆ ಎಂಬುದನ್ನು ನಾನು ಕನಸಿನಲ್ಲೂ ಊಹಿಸಿರಲಿಲ್ಲ ಎಂದು ಹೇಳಿದ್ದಾರೆ.

ಇಲ್ಲಿ ಗೆದ್ದ ಹಣದಿಂದ ನೀವು ಏನು ಮಾಡಬೇಕು ಎಂದು ಬಯಸುತ್ತಿರೀ.. ಎಂಬ ಬಿಗ್ ಬೀ ಪ್ರಶ್ನೆಗೆ .. ಒಂದು ಫೊನ್ ಖರೀದಿಸುತ್ತೇನೆ. ಪ್ರಸ್ತುತ, ನಮ್ಮ ಮನೆಯಲ್ಲಿರುವುದು ಒಂದು ಫೋನ್ ಮಾತ್ರ ಹಾಗಾಗಿ,  ಮತ್ತೊಂದು ಖರೀದಿಸುತ್ತೇನೆ ಎಂಬ ಆಕೆಯ ಉತ್ತರ ಕೇಳಿದ ಕೇಳಿದ ಅಮಿತಾಬ್ ಬಚ್ಚನ್ ಆಶ್ಚರ್ಯಚಕಿತರಾದರು. ಏಕೆಂದರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಹೆಚ್ಚಿನ ಮಂದಿ ಗೆಲುವು ಸಾಧಿಸಿ.. ಮನೆ ಖರೀದಿಸುತ್ತೇನೆ.. ಸಾಲ ತೀರಿಸುತ್ತೇನೆ ಎಂದು ಹೇಳುತ್ತಾರೆ. ಆದರೆ ಬಬಿತಾ ಮಾತ್ರ ತದ್ವಿರುದ್ಧವಾಗಿ ಫೋನ್ ಖರೀದಿಸಿಸುತ್ತೇನೆ ಎಂದಾಗ ಅಮಿತಾಬ್ ಬಚ್ಚನ್ ದಿಗ್ಬ್ರಮೆಗೊಳಗಾದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com