ಬಾಲಿವುಡ್ ಬಿಗ್ ಬಿ ನಟ ಅಮಿತಾಬ್ ಬಚ್ಚನ್ ಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪುರಸ್ಕಾರ ಲಭಿಸಿದೆ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಅಮಿತಾಬ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪುಇರಸ್ಕಾರ ನೀಡುವ ಘೋಷಣೆ ಮಾಡಿದ್ದಾರೆ.
"2 ತಲೆಮಾರುಗಳಿಂದ ಮನರಂಜನೆ ಕ್ಷೇತ್ರದಲ್ಲಿ ಹೆಸರಾಗಿರುವ ಸಾಕಷ್ಟು ಪ್ರೇರಣಾತ್ಮಕ ಕೆಲಸದಲ್ಲಿ ತೊಡಗಿರುವ ಬಾಲಿವುಡ್ ದಂತಕಥೆ ಮಿತಾಬ್ ಬಚ್ಚನ್ ಅವರನ್ನು ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.ಈ ಆಯ್ಕೆಯನ್ನು ಇಡೀ ದೇಶ ಮತ್ತು ಅಂತರರಾಷ್ಟ್ರೀಯ ಸಮುದಾಯವು ಸಂಭ್ರಮದಿಂದ ಸ್ವಾಗತಿಸಿದೆ.ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. " ಜಾವಡೇಕರ್ ಹೇಳಿದ್ದಾರೆ.
ಭಾರತೀಯ ಚಿತ್ರರಂಗದ ಪಿತಾಮಹ ದಾದಾಸಾಹೇಬ್ ಫಾಲ್ಕೆ ಹೆಸರಿನಲ್ಲಿ ಈ ಪುರಸ್ಕಾರ ನೀಡಲಾಗುತ್ತದೆ.
ಕನ್ನಡದ ವರನಟ ಡಾ. ರಾಜ್ ಕುಮಾರ್ ಸೇರಿ ಬಾಲಿವುಡ್ ದಿಗ್ಗಜರಾದ ವಿನೋದ್ ಖನ್ನಾ, ಮನೋಜ್ ಕುಮಾರ್, ಶಶಿ ಕಪೂರ್,ಮನ್ನಾ ಡೇ ಇನ್ನೂ ಹಲವರು ಈ ಪ್ರತಿಷ್ಠಿತ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
Advertisement