ಅಮಲಾ ಶಂಕರ್
ಅಮಲಾ ಶಂಕರ್

ಕೊಲ್ಕೋತಾ: ಪ್ರಸಿದ್ದ ನೃತ್ಯ ಸಂಯೋಜಕಿ ಅಮಲಾ ಶಂಕರ್ ನಿಧನ

ಪ್ರಸಿದ್ದ ನೃತ್ಯಪಟು ಮತ್ತು ನೃತ್ಯ ಸಂಯೋಜಕಿ ಅಮಲಾ ಶಂಕರ್‌ ಅವರು ವಯೋಸಹಜ ಕಾಯಿಲೆಗಳಿಂದಾಗಿ ಶುಕ್ರವಾರ ಮುಂಜಾನೆ ನಿಧನ ಹೊಂದಿದ್ದಾರೆ.
Published on

ಕೊಲ್ಕೋತಾ: ಪ್ರಸಿದ್ದ ನೃತ್ಯಪಟು ಮತ್ತು ನೃತ್ಯ ಸಂಯೋಜಕಿ ಅಮಲಾ ಶಂಕರ್‌ ಅವರು ವಯೋಸಹಜ ಕಾಯಿಲೆಗಳಿಂದಾಗಿ ಶುಕ್ರವಾರ ಮುಂಜಾನೆ ನಿಧನ ಹೊಂದಿದ್ದಾರೆ.

101 ವರ್ಷ ವಯಸ್ಸಿನ ಅವರು, ನಿದ್ದೆಯಲ್ಲಿದ್ದಾಗಲೇ  ಹೃದಯಾಘಾತವಾಗಿತ್ತು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ. 90ರ ವಯಸ್ಸಿನವರೆಗೂ ಚಟುವಟಿಕೆಯಿಂದಲೇ ಇದ್ದ ಅಮಲಾ ಅವರು, ಕಲಾಕ್ಷೇತ್ರದ ಸಾಧನೆಗಾಗಿ ಪಶ್ಚಿಮ ಬಂಗಾಳ ಕೊಡಮಾಡುವ ‘ಬಂಗ ಭೂಷಣ’ ಪ್ರಶಸ್ತಿಯನ್ನು 2011ರಲ್ಲಿ ಪಡೆದಿದ್ದರು. ಅಮಲಾ ಅವರ ನಿಧನದಿಂದ ನೃತ್ಯಕ್ಷೇತ್ರಕ್ಕೆ ಭರಿಸಲಾಗದ ನಷ್ಟ ಉಂಟಾಗಿದೆ’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

1919 ರಲ್ಲಿ ಜನಿಸಿದ್ದ ಅಮಲಾ 1931 ರಲ್ಲಿ ಉದಯ ಶಂಕರ್ ಅವರ ಡ್ಯಾನ್ಸ್ ಗ್ರೂಪ್ ಸೇರಿದರು. ನಂತರ ದೇಶ ವಿದೇಶಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದರು. ಈ ವಿಷಯವನ್ನು ಅಮಲಾ ಶಂಕರ್ ಅವರ ಮೊಮ್ಮಗಳು ಹಾಗೂ ನಟು ಶ್ರೀನಂದ ಶಂಕರ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com