ಕಮರ್ಷಿಯಲ್ ಚಿತ್ರಗಳಲ್ಲಿ ನನಗೆ ಅವಕಾಶ ಸಿಗುತ್ತಿಲ್ಲ: ರಾಧಿಕಾ ಆಪ್ಟೆ

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ವೆಬಿನಾರ್ ಸರಣಿ ಕಾರ್ಯಕ್ರಮ ಇಂಡಲ್ಜ್ ಟೈಮ್ ಪಾಸ್ ನಲ್ಲಿ ಪತ್ರಕರ್ತೆ ಕಾವೇರಿ ಬಂಬ್ಜೈ ಜೊತೆ ಬಾಲಿವುಡ್ ನಟಿ ರಾಧಿಕಾ ಆಪ್ಟೆ ಮಾತನಾಡಿದ್ದರು.ಸಹಜವಾಗಿ ಅವರ ವೃತ್ತಿ, ಬಾಲಿವುಡ್, ವಿದೇಶಿ ಚಿತ್ರಗಳಲ್ಲಿ ಅಭಿನಯದ ಬಗ್ಗೆ ಮಾತುಕತೆಗಳು ಹೊರಳಿದವು.
ರಾಧಿಕಾ ಆಪ್ಟೆ
ರಾಧಿಕಾ ಆಪ್ಟೆ
Updated on

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನ ವೆಬಿನಾರ್ ಸರಣಿ ಕಾರ್ಯಕ್ರಮ ಇಂಡಲ್ಜ್ ಟೈಮ್ ಪಾಸ್ ನಲ್ಲಿ ಪತ್ರಕರ್ತೆ ಕಾವೇರಿ ಬಂಬ್ಜೈ ಜೊತೆ ಬಾಲಿವುಡ್ ನಟಿ ರಾಧಿಕಾ ಆಪ್ಟೆ ಮಾತನಾಡಿದ್ದರು.ಸಹಜವಾಗಿ ಅವರ ವೃತ್ತಿ, ಬಾಲಿವುಡ್, ವಿದೇಶಿ ಚಿತ್ರಗಳಲ್ಲಿ ಅಭಿನಯದ ಬಗ್ಗೆ ಮಾತುಕತೆಗಳು ಹೊರಳಿದವು.

ಈ ಸಂದರ್ಭದಲ್ಲಿ ರಾಧಿಕಾ ಆಪ್ಟೆ ಹೇಳಿದ್ದಿಷ್ಟು: ಎಂಟು ವರ್ಷಗಳ ಕಾಲ ಹಗಲಿರುಳು ಕೆಲಸ ಮಾಡಿದ ನಂತರ ವಿಶ್ರಾಂತಿ ಪಡೆಯದಿರುವುದು ಒಳ್ಳೆಯದು ಎನಿಸುತ್ತಿದೆ. ವೈಯಕ್ತಿಕವಾಗಿ ನನಗೆ ದೂರು ಹೇಳಲು ಏನೂ ಇಲ್ಲ, ಆದರೆ ಸುತ್ತಲೂ ಏನು ನಡೆಯುತ್ತಿದೆ ಅದರಿಂದ ಸಾಕಷ್ಟು ಅನನುಕೂಲವಾಗಿದೆ ಎಂದು ಲಂಡನ್ ನಲ್ಲಿ ಲಾಕ್ ಡೌನ್ ಸಮಯ ಕಳೆಯುತ್ತಿದ್ದೇನೆ ಎಂದರು.

ರಾಧಿಕಾ ಈ ಸಮಯವನ್ನು ಹಲವು ಸ್ಕ್ರಿಪ್ಟ್ ಬರೆಯುವುದರಲ್ಲಿ ಕಳೆಯುತ್ತಿದ್ದಾರಂತೆ. ಅವರ ನಿರ್ದೇಶನದ ಕಿರುಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಗೆ ಹೋಗುತ್ತಿದೆ. ಸಹನಾ ಗೋಸ್ವಾಮಿ ಮತ್ತು ಗುಲ್ಶನ್ ದೇವಯ್ಯ ನಟಿಸಿದ್ದಾರೆ. ಕಳೆದ ವರ್ಷ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಧಿಕಾ ಮಿಂಚಿದ್ದರು. ದ ವೆಡ್ಡಿಂಗ್ ಗೆಸ್ಟ್, ದ ಆಶ್ರಮ್, ಲಿಬರ್ಟ್:ಎ ಕಾಲ್ ಟು ಸ್ಪೈ ಎಂಬ ವಿದೇಶಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ, ಆದರೆ ಅದರಿಂದ ಹೆಚ್ಚಿನ ಅವಕಾಶಗಳು ಸಿಕ್ಕಿದೆ ಎಂದು ಅನಿಸುತ್ತಿಲ್ಲವಂತೆ. ಕಮರ್ಷಿಯಲ್ ಚಿತ್ರಗಳಿಗೆ ನಾನು ಹೊಂದಿಕೆಯಾಗುವುದಿಲ್ಲ ಎಂಬ ಅಭಿಪ್ರಾಯ ಇನ್ನೂ ಇದೆ ಎನ್ನುತ್ತಾರೆ ರಾಧಿಕಾ ಆಪ್ಟೆ.

ನಾನು ಸಾಮಾನ್ಯೀಕರಿಸಿ ಈ ವಿಚಾರ ಹೇಳುತ್ತಿದ್ದೇನೆ ಎನಿಸಬಹುದು. ಆದರೆ ಭಾರತದಲ್ಲಿ, ನಟರ ವಿಷಯಕ್ಕೆ ಬಂದಾಗ ನಾವು ರಾಜಿ ಮಾಡಿಕೊಳ್ಳುತ್ತೇವೆ. ನಾವು ಉತ್ತಮ ತಂತ್ರಜ್ಞರನ್ನು ಆಯ್ಕೆ ಮಾಡಿಕೊಳ್ಳುತ್ತೇವೆ, ಆದರೆ ಚಿತ್ರದ ಮುಖ್ಯ ಪಾತ್ರದ ವಿಷಯಕ್ಕೆ ಬಂದಾಗ, ದೊಡ್ಡ ನಟರನ್ನು ಆರಿಸಿಕೊಳ್ಳುತ್ತೇವೆ. ಇಲ್ಲಿ ಅಭಿನಯ ನಗಣ್ಯವಾಗುತ್ತದೆ. ಕೊರೋನಾ ಲಾಕ್‌ಡೌನ್ ನಾನು ನಿಜವಾಗಿಯೂ ಏನು ಮಾಡಬೇಕೆಂದು ನನಗೆ ಆಶ್ಚರ್ಯ ತಂದಿದೆ. ಈ ಹಂತದಲ್ಲಿ ವೃತ್ತಿ ಬದಲಾವಣೆ ಮಾಡಿದರೂ ಅಚ್ಚರಿಯಿಲ್ಲ, ನಾನು ರೆಸ್ಟೋರೆಂಟ್ ಸಹ ಪ್ರಾರಂಭಿಸಬಹುದು ಎಂದು ನಗುತ್ತಾ ಹೇಳಿದರು.

ರಾಧಿಕಾ ಆಪ್ಟೆ ನಾಳೆಗಳ ಬಗ್ಗೆ ಯೋಚಿಸುವುದಿಲ್ಲವಂತೆ. ನಾಳೆ ಏನಾಗುತ್ತದೆ ಎಂಬುದು ಸಹ ಗೊತ್ತಿಲ್ಲ ಎಂದು ಮಾತು ಮುಗಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com