ಅಗಲಿದ ಬಾಲಿವುಡ್ ಹೀರೋಗೆ ಗೌರವ: ಗ್ರಾಮವೊಂದಕ್ಕೆ ನಟ ಇರ್ಫಾನ್ ಖಾನ್ ಹೆಸರಿಟ್ಟ ಗ್ರಾಮಸ್ಥರು

ಇತ್ತೀಚಿಎಗೆ ನಿಧನರಾದ ಬಾಲಿವುಡ್ ನಟ ಇರ್ಫಾನ್ ಖಾನ್ ಅಗಲಿಕೆಯಿಂದ ಬಾಲಿವುಡ್ ಚಿತ್ರರಂಗ ಒಬ್ಬ ಒಳ್ಳೆಯ ಪ್ರತಿಭಾನ್ವಿತ ನಟನನ್ನು ಕಳೆದುಕೊಂಡಿತ್ತು. ಆದರೆ ಇರ್ಫಾನ್ ಖಾನ್ ಮೃತಪಟ್ಟಿದ್ದರೂ ಅವರ ಕೆಲಸಗಳನ್ನು ಮರೆಯಲಾಗುವುದಿಲ್ಲ.
ಇರ್ಫಾನ್ ಖಾನ್
ಇರ್ಫಾನ್ ಖಾನ್
Updated on

ಇತ್ತೀಚಿಎಗೆ ನಿಧನರಾದ ಬಾಲಿವುಡ್ ನಟ ಇರ್ಫಾನ್ ಖಾನ್ ಅಗಲಿಕೆಯಿಂದ ಬಾಲಿವುಡ್ ಚಿತ್ರರಂಗ ಒಬ್ಬ ಒಳ್ಳೆಯ ಪ್ರತಿಭಾನ್ವಿತ ನಟನನ್ನು ಕಳೆದುಕೊಂಡಿತ್ತು. ಆದರೆ ಇರ್ಫಾನ್ ಖಾನ್ ಮೃತಪಟ್ಟಿದ್ದರೂ ಅವರ ಕೆಲಸಗಳನ್ನು ಮರೆಯಲಾಗುವುದಿಲ್ಲ. ಅದಕ್ಕೆ ಸಾಕ್ಷಿ ಎಂಬಂತೆ  ನಟ ಇನ್ನೂ ಲಕ್ಷಾಂತರ ಜನರ ಹೃದಯದಲ್ಲಿ ಜೀವಂತವಿದ್ದಾರೆ. ಇದಲ್ಲದೆ ಮಹಾರಾಷ್ಟ್ರದ ಗ್ರಾಮವೊಂದಕ್ಕೆ ಇರ್ಫಾನ್ ಖಾನ್ ಅವರ ಹೆಸರನ್ನೇ ಇಟ್ಟು ಮರುನಾಮಕರಣ ಮಾಡಲಾಗಿದೆ. ಈ ಮೂಲಕ ಅಲ್ಲಿನ ಜನರು ಅಗಲಿದ ನಟನಿಗೆ ಕೃತಜ್ಞತೆ ತೋರಿದ್ದಾರೆ.

ಇಗತ್ಪುರಿ ಗ್ರಾಮದಲ್ಲಿ ವಾಸಿಸುವ ಜನರ ಜೀವನದಲ್ಲಿ ನಟ ಇರ್ಫಾನ್ ಖಾನ್ ಒಂದು ಮಹತ್ವದ ಬದಲಾವಣೆ ತಂದಿದ್ದಾರೆ. ಅಲ್ಲದೆ ಅವರ ಅಭಿವೃದ್ದಿಗಾಗಿ ದುಡಿದಿದ್ದಾರೆ. ಹಾಗಾಗಿ ಅಲ್ಲಿನ ಜನರು ತಮ್ಮ ಗ್ರಾಮದ ಹೆಸರನ್ನು ಇರ್ಫಾನ್ ಖಾನ್ ಎಂದು ಬದಲಿಸಲು ನಿರ್ಧರಿಸಿದ್ದರು. ಅಲ್ಲಿನ ದೀನದಲಿತ ಕುಟುಂಬಗಳಿಗೆ ಸೇರಿದ ಹಲವಾರು ವಿದ್ಯಾರ್ಥಿಗಳ ಜೀವವನ್ನು ಬದಲಿಸಿದ ಇರ್ಫಾನ್ ಅವರ ಪಾಲಿಗೆ "ಹೀರೋ" ಆಗಿದ್ದು ಆ ಕಾರಣಕ್ಕೆ ಗ್ರಾಮಕ್ಕೆ "ಹೀರೋ-ಚಿ-ವಾಡಿ" ಎಂದು ಮರುನಾಮಕರಣ ಮಾಡಲಾಗಿದೆ. ಈ ಬಗ್ಗೆ ಇಗತ್‌ಪುರಿಯ ಜಿಲ್ಲಾ ಪರಿಷತ್‌ನ ಸದಸ್ಯರಾದ ಗೋರಖ್ ಬೊಡ್ಕೆ ಖಾಸಗಿ ವಾಹಿನಿಯೊಂದಕ್ಕೆ ವಿವರ ನೀಡಿದ್ದಾರೆ.

ಇದು ನಟನಿಗೆ ಸಿಕ್ಕ ಅತ್ಯುತ್ತಮ ಗೌರವವೆನ್ನದೆ ಬೇರೆ ಮಾತಿಲ್ಲ. ಮರಾಠಿಯಲ್ಲಿ ಹೀರೋ-ಚಿ-ವಾಡಿ ಎಂದರೆ ವೀರನ ನೆರೆಹೊರೆ ಎಂಬ ಅರ್ಥವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com