ಬಾಲಿವುಡ್ ನಟ ಓಂ ಪುರಿ 70ನೇ ಜನ್ಮದಿನ: ಪತ್ನಿ, ಪುತ್ರನಿಂದ ಯೂಟ್ಯೂಬ್ ಚಾನೆಲ್ ಪ್ರಾರಂಭ

ದಿವಂಗತ ಬಾಲಿವುಡ್  ನಟ ಓಂ ಪುರಿ ಅವರ ಜನ್ಮದಿನಾಚರಣೆಯಂದು ಬಾಲಿವುಡ್ ನ ಗಣ್ಯಾತಿಗಣ್ಯರು ನಟನ ಸ್ಮರಣೆ ಮಾಡಿದ್ದಾರೆ.
ಓಂ ಪುರಿ
ಓಂ ಪುರಿ
Updated on

ದಿವಂಗತ ಬಾಲಿವುಡ್  ನಟ ಓಂ ಪುರಿ ಅವರ ಜನ್ಮದಿನಾಚರಣೆಯಂದು ಬಾಲಿವುಡ್ ನ ಗಣ್ಯಾತಿಗಣ್ಯರು ನಟನ ಸ್ಮರಣೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಓಂ ಪುರಿಯನ್ನು ನೆನಪಿಸಿಕೊಂಡ ನಿರ್ಮಾಪಕ ರಾಹುಲ್ ಮಿತ್ರ, 'ಬಹುಮುಖ, ಪ್ರತಿಭಾನ್ವಿತ, ವಿನಯವಂತ  ಅವರು ತಮ್ಮ ನಟನಾ ಚಾತುರ್ಯ ಮತ್ತ ಮಾನವೀಯ ಮನೋಭಾವದ ಮೂಲಕ ಲಕ್ಷಾಂತರ ಜನರನ್ನು ಮುಟ್ಟಿದ್ದರು." ಎಂದರು. 

ಬಾಲಿವುಡ್ ನಟ ನಿಖಿಲ್ ದ್ವಿವೇದಿ "'ನಿಸ್ಸಂದೇಹವಾಗಿ ಅತ್ಯುತ್ತಮವಾದ ಅಭಿನೇತ ಸರಳ ವ್ಯಕ್ತಿಯೂ ಆಗಿದ್ದರು. ಅವರ ಮಾತು ಹಾಗೂ ನಡವಳಿಕೆಗಳು ಕೆಲವೊಮ್ಮೆ ಅರ್ಥವಾಗದ ಕಾರಣ ನಿಂದನೆ,  ಅವಮಾನಕ್ಕೆ ಒಳಗಾಗಬೇಕಾಯಿತು. ಕೃತಜ್ಞತೆಯಿಲ್ಲದ ಸಮಾಜವು  ನಟನ ಕೊಡುಗೆಯನ್ನು  ಮರೆತಿದೆ. ' ಎಂದಿದ್ದಾರೆ.

ಓಂ ಪುರಿಯ 70 ನೇ ಜನ್ಮ ದಿನಾಚರಣೆಯಂದು, ಅವರ ಪತ್ನಿ ನಂದಿತಾ ಪುರಿ ಮತ್ತು ಮಗ ಇಶಾನ್ ಪುರಿ ಅವರು ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸುವ ಮೂಲಕ ಅವರ  ನೆನಪನ್ನು ಶಾಶ್ವತವಾಗಿಡಲು ಯೋಜಿಸಿದ್ದಾರೆ, ಇದನ್ನು'Puri Baatein' ಎಂದು ಕರೆಯಲಾಗುತ್ತದೆ.

ಯೂಟ್ಯೂಬ್ ಚಾನೆಲ್ ಅನ್ನು ಅನಾವರಣಗೊಳಿಸುವ ಮೊದಲು, ನಂದಿತಾ ಅವರು 'ದಿ ಓಂ ಪುರಿ ಫೌಂಡೇಶನ್' ಎಂಬ ಸಂಘಟನೆಯನ್ನು ಪ್ರಾರಂಭಿಸಿದ್ದರು, ಅದು ಜನರಿಗೆ ತಳ ಮಟ್ಟದಲ್ಲಿ  ಸಹಾಯ ಮಾಡಲು ಪ್ರಯತ್ನಿಸುತ್ತದೆ. ಕೋವಿಡ್ಪೀಡಿತ ಕುಟುಂಬಗಳಿಗೆ ಸಹಾಯ ಮಾಡುವಲ್ಲಿ ಅವರು ಸಕ್ರಿಯವಾಗಿ ಕೆಲಸ ಮಾಡಿದ್ದರು. 2017 ರಲ್ಲಿ ನಟನ ನಿಧನದ ನಂತರ ಈ ಸಂಸ್ಥೆ ಅಸ್ತಿತ್ವಕ್ಕೆ ಬಂದಿತು. 'Puri Baatein' ಯೂಟ್ಯೂಬ್ ಚಾನೆಲ್ ಅನ್ನು ಇಶಾನ್ ನಿರ್ಮಿಸಿರುವ ನಾಲ್ಕು ನಿಮಿಷಗಳ ಕಿರುಚಿತ್ರದಿಂದ ಉದ್ಘಾಟಿಸಲಾಗುತ್ತಿದೆ. ಚಲನಚಿತ್ರಗಳು ಮತ್ತು  ಓಂ ಪುರಿಯ ಜೀವನವನ್ನು ಚಾನೆಲ್ ಚರ್ಚಿಸುತ್ತದೆ. ಇದಲ್ಲದೆ, ಪ್ರಪಂಚದಾದ್ಯಂತದ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನ ಬಗ್ಗೆ ಮಾತನಾಡಲು ಅವಕಾಶ ನೀಡಲಾಗುತ್ತದೆ.

"ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳ ಮೂಲಕ ವಿಶ್ವದಾದ್ಯಂತದ ಅಭಿಮಾನಿಗಳು ಪ್ರಸಿದ್ಧ ನಟನನ್ನುನೆನಪಿಸಿಕೊಳ್ಳಲು ಇದು ಸಹಕಾರಿ. . ಓಂ ಪುರಿ ಫೌಂಡೇಶನ್ ಭಾರತದ ಪಂಜಾಬ್, ಲಂಡನ್ ಮತ್ತು ಕೇನ್ಸ್‌ನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಿದೆ. ಹಲವಾರು ಸ್ಪರ್ಧೆಗಳು ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಈ ಕಾರ್ಯಕ್ತಮ ನಡೆಯಲಿದೆ. " ಯೂಟ್ಯೂಬ್ ಚಾನೆಲ್ ಕುರಿತು  ನಂದಿತಾ ಹೇಳಿದ್ದಾರೆ. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com