ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದ ಕೆಜಿಎಫ್ 'ಅಧೀರ'! ಮಗನ ಜನ್ಮದಿನದಂದು ಶುಭಸುದ್ದಿ ಹಂಚಿಕೊಂಡ ಸಂಜಯ್ ದತ್

ಮಹಾಮಾರಿ ಕ್ಯಾನ್ಸರ್ ಅನ್ನು ಸೋಲಿಸುವ ಮಾತನಾ2ಡಿದ್ದ ಸುಮಾ ರು ಒಂದು ವಾರದ ನಂತರ, ಹಿರಿಯ ನಟ, ಕೆಜಿಎಫ್ ಚಾಪ್ಟರ್ 2 ಖ್ಯಾತಿಯ ಅಧೀರ ಸಂಜಯ್ ದತ್ ಅವರು ತಮ್ಮ ಪುತ್ರ ಶಹರಾನ್  ಜನ್ಮದಿನದಂದು ತಾವು ಕ್ಯಾನ್ಸರ್ ನಿಂದ ಗುಣಮುಖವಾಗಿರುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ. 
ಸಂಜಯ್ ದತ್
ಸಂಜಯ್ ದತ್
Updated on

ಮಹಾಮಾರಿ ಕ್ಯಾನ್ಸರ್ ಅನ್ನು ಸೋಲಿಸುವ ಮಾತನಾಡಿದ್ದ ಸುಮಾ ರು ಒಂದು ವಾರದ ನಂತರ, ಹಿರಿಯ ನಟ, ಕೆಜಿಎಫ್ ಚಾಪ್ಟರ್ 2 ಖ್ಯಾತಿಯ ಅಧೀರ ಸಂಜಯ್ ದತ್ ಅವರು ತಮ್ಮ ಪುತ್ರ ಶಹರಾನ್  ಜನ್ಮದಿನದಂದು ತಾವು ಕ್ಯಾನ್ಸರ್ ನಿಂದ ಗುಣಮುಖವಾಗಿರುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ. 

ತಮ್ಮ ಆರೋಗ್ಯದ ಕುರಿತ ಅಪ್ ಡೇಟ್ ಬಗ್ಗೆ ಹೇಳಿಕೆಯನ್ನು ಹಂಚಿಕೊಳ್ಳಲು ದತ್ ತಮ್ಮ ಟ್ವಿಟ್ತರ್ ನಲ್ಲಿ ಬರೆದಿದ್ದು "ತಾನು ಅನಾರೋಗ್ಯದಿಂದ ಚೇತರಿಸಿಕೊಂಡಿದ್ದೇನೆ" ಎಂದು ಹೇಳಿದ್ದಾರೆ.. ಅವರು ಮತ್ತು ಅವರ ಕುಟುಂಬಕ್ಕೆ ಕಳೆದ ದಿನಗಳು  ಎಷ್ಟು "ಕಷ್ಟಕರ" ಆಗಿದ್ದವು ಎಂದು ಹೇಳುವ ಮೂಲಕ  ಅವರು ತನ್ನ ಬರಹ ಪ್ರಾರಂಭಿಸುತ್ತಾರೆ.

"ಕಳೆದ ಕೆಲವು ವಾರಗಳು ನನ್ನ ಕುಟುಂಬ ಮತ್ತು ನನಗೆ ಬಹಳ ಕಷ್ಟದ ಸಮಯವಾಗಿತ್ತು. ಆದರೆ ದೇವರು ತನ್ನ ಪ್ರೀತಿಯ ಭಕ್ತರಿಗೆ ಕಠಿಣ ಪರೀಕ್ಷೆಗಳನ್ನು ನೀಡುತ್ತಾನೆ. ಮತ್ತು ಇಂದು, ನನ್ನ ಮಗನ ಜನ್ಮದಿನದಂದು, ವಿಜಯಶಾಲಿಯಾಗಿ ಹೊರಬರಲು ನನಗೆ ಸಂತೋಷವಾಗಿದೆ ಈ ಯುದ್ಧದ ಗೆಲುವು ನಾನು ಅವರಿಗೆ ನೀಡಬಹುದಾದ  ಅತ್ಯುತ್ತಮ ಉಡುಗೊರೆ"

"ಮುನ್ನಾಭಾಯಿ ಎಂಬಿಬಿಎಸ್" ನಟ ಸಂಜಯ್ ದತ್ ತನ್ನ ಅಭಿಮಾನಿಗಳು, ಕುಟುಂಬ ಮತ್ತು ಸ್ನೇಹಿತರಿಗೆ  "ಅಚಲವಾದ ನಂಬಿಕೆ, ಅಭಿಮಾನ ಮತ್ತು ಬೆಂಬಲಕ್ಕಾಗಿ" ಧನ್ಯವಾದಗಳನ್ನು ಅರ್ಪಿಸಿದರು.

"ನಿಮ್ಮೆಲ್ಲರ ಅಚಲವಾದ ನಂಬಿಕೆ ಮತ್ತು ಬೆಂಬಲವಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ಈ ಪ್ರಯತ್ನದ ಸಮಯದಲ್ಲಿ ನನ್ನ ಕುಟುಂಬ ಮತ್ತು ಸ್ನೇಹಿತರು ನನ್ನೊಂದಿಗೆ ನಿಂತು ನನ್ನ ಶಕ್ತಿಯ ಮೂಲವಾಗಿರುವ ಎಲ್ಲ ಅಭಿಮಾನಿಗಳಿಗೆ ನಾನು ಕೃತಜ್ಞನಾಗಿದ್ದೇನೆ" ಎಂದು ಅವರು ಹೇಳಿದರು.

"ನೀವು ನನ್ನ ಮೇಲಿಟ್ಟ ದ ಪ್ರೀತಿ, ದಯೆ ಮತ್ತು ಅಸಂಖ್ಯಾತ ಆಶೀರ್ವಾದಗಳಿಗೆ ಧನ್ಯವಾದಗಳು" ಎಂದು 61 ವರ್ಷದ ನಟ ಹೇಳಿದ್ದಾರೆ/

ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯ ವೈದ್ಯ ಡಾ. ಸೇವಂತಿ ಮತ್ತು ವೈದ್ಯಕೀಯ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ದತ್  ತಮ್ಮ ನೋಟ್ಸ್ ಅನ್ನು ಕೊನೆ ಮಾಡಿದ್ದಾರೆ."ಕಳೆದ ಕೆಲವು ವಾರಗಳಲ್ಲಿ ನನ್ನನ್ನು ಚೆನ್ನಾಗಿ ನೋಡಿಕೊಂಡ ಕೋಕಿಲಾಬೆನ್ ಆಸ್ಪತ್ರೆಯ ಡಾ. ಸೇವಂತಿ ತಿ ಮತ್ತು ಅವರ ವೈದ್ಯರು, ದಾದಿಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ನಾನು ವಿಶೇಷವಾಗಿ ಕೃತಜ್ಞನಾಗಿದ್ದೇನೆ"

ಉಸಿರಾಟದ ತೊಂದರೆಯಿಂದಾಗಿ ಎರಡು ದಿನಗಳವರೆಗೆ ಆಸ್ಪತ್ರೆಗೆ ದಾಖಲಾದ ನಂತರ, ಆಗಸ್ಟ್‌ನಲ್ಲಿ ದತ್ ಅವರ ಆರೋಗ್ಯ ಪರಿಸ್ಥಿತಿಗಳಿಂದಾಗಿ ಕೆಲಸದಿಂದ ವಿರಾಮ ತೆಗೆದುಕೊಳ್ಳುವುದಾಗಿ ಘೋಷಿಸಿದ್ದರು. ದತ್ ಅವರ ಪ್ರಕಟಣೆಯ ನಂತರ, ಅವರ ಪತ್ನಿ ಮಾನ್ಯ ತಮ್ಮ ಪತಿಯ ಆರೋಗ್ಯದ ಬಗ್ಗೆ ಅಪ್ ಡೇಟ್  ಹಂಚಿಕೊಳ್ಳುವ ಹೇಳಿಕೆಯನ್ನು ಬಿಡುಗಡೆ ಮಾಡಿದರು ಮತ್ತು ಜನರು  ಊಹಾಪೋಹಗಳಿಗೆ ಅನಗತ್ಯ ವದಂತಿಗಳಿಗೆ ಬಲಿಯಾಗಬಾರದು" ಎಂದು ಒತ್ತಾಯಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com