
ನವದೆಹಲಿ: ದೇಶದ್ರೋಹ ಪ್ರಕರಣದ ಅಡಿ ಪೊಲೀಸ್ ವಿಚಾರಣೆಗೆ ಹಾಜರಾಗುವಂತೆ ನಟಿ ಕಂಗನಾ ರಣಾವತ್ ಮತ್ತು ಆಕೆಯ ಸಹೋದರಿ ರಂಗೋಲಿ ಚಾಂದೆಲ್ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ.
ವಿಜಯದಶಮಿ ಹಬ್ಬದ ದಿನವಾದ ಅ.26 ಮತ್ತು 27ರಂದು ಅವರು ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. ಬಾಲಿವುಡ್ ನಟಿ ಕಂಗನಾ ರಣಾವತ್ ಹಾಗೂ ಆಕೆಯ ಸಹೋದರಿ ರಂಗೋಲಿ ಚಾಂದೆಲ್ ತಮ್ಮ ಟ್ವೀಟ್ಗಳ ಮೂಲಕ ಕೋಮು ದ್ವೇಷವನ್ನು ಹರಡುವ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ದೂರಿನ ಕುರಿತು ದಾಖಲಾದ ಎಫ್ಐಆರ್ ಅಡಿ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು.
ನಟಿ ಕಂಗನಾ ಮತ್ತವರ ಸಹೋದರಿ ಟ್ವೀಟ್ ಮೂಲಕ ಕೋಮುದ್ವೇಷ ಹರಡುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿ ನಿರ್ದೇಶಕ ಸಾಹಿಲ್ ಆಸ್ರಫ್ಆಲಿ ಸಯ್ಯದ್ ಬಾಂದ್ರಾ ಮೆಟ್ರೋಪಾಲಿಟನ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ಈ ಕ್ರಮಕ್ಕೆ ಮುಂದಾಗಲಾಗಿದೆ.
ಕಂಗಾನಾ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದಾರೆ. ಇದು ಧಾರ್ಮಿಕ ಮನೋಭಾವಕ್ಕೆ ಧಕ್ಕೆ ತರುವಂತೆ ಇದೆ. ಅಷ್ಟೇ ಅಲ್ಲದೇ , ಅನೇಕ ಕಲಾವಿದರ ಭಾವನೆಗಳು ಚ್ಯುತಿ ತರುತ್ತಿದೆ. ಕಂಗನಾ ಕಲಾವಿದರನ್ನು ಕೋಮು ವರ್ಗದಲ್ಲಿ ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸಯ್ಯದ್ ದೂರು ನೀಡಿದ್ದಾರೆ.
Advertisement