'ಗುಂಜನ್ ಸಕ್ಸೇನಾ - ದಿ ಕಾರ್ಗಿಲ್ ಗರ್ಲ್' ಸ್ಟ್ರೀಮಿಂಗ್ ಗೆ ತಡೆ ನೀಡಲು ದೆಹಲಿ ಹೈಕೋರ್ಟ್ ನಕಾರ

ನೆಟ್‌ಫ್ಲಿಕ್ಸ್ ನಲ್ಲಿ  ಸ್ಟ್ರೀಮಿಂಗ್ ಆಗುತ್ತಿರುವ  'ಗುಂಜನ್ ಸಕ್ಸೇನಾ - ದಿ ಕಾರ್ಗಿಲ್ ಗರ್ಲ್'  ಚಿತ್ರದ  ಸ್ಟ್ರೀಮಿಂಗ್ ಗೆ ತಡೆ ನಿಡಲು ದೆಹಲಿ ಹೈಕೋರ್ಟ್ ಬುಧವಾರ ನಿರಾಕರಿಸಿದೆ, ಚಿತ್ರದಲ್ಲಿ ಭಾರತೀಯ ವಾಯುಪಡೆ (ಐಎಎಫ್)ಯನ್ನು ಕೀಳಾಗಿ ತೋರಿಸಿಲಾಗಿದೆ  ಎಂಬ ಕೇಂದ್ರದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಗುಂಜನ್ ಸಕ್ಸೇನಾ - ದಿ ಕಾರ್ಗಿಲ್ ಗರ್ಲ್ ಚಿತ್ರದ ದೃಶ್ಯ
ಗುಂಜನ್ ಸಕ್ಸೇನಾ - ದಿ ಕಾರ್ಗಿಲ್ ಗರ್ಲ್ ಚಿತ್ರದ ದೃಶ್ಯ

ನವದೆಹಲಿ: ನೆಟ್‌ಫ್ಲಿಕ್ಸ್ ನಲ್ಲಿ  ಸ್ಟ್ರೀಮಿಂಗ್ ಆಗುತ್ತಿರುವ  'ಗುಂಜನ್ ಸಕ್ಸೇನಾ - ದಿ ಕಾರ್ಗಿಲ್ ಗರ್ಲ್'  ಚಿತ್ರದ  ಸ್ಟ್ರೀಮಿಂಗ್ ಗೆ ತಡೆ ನಿಡಲು ದೆಹಲಿ ಹೈಕೋರ್ಟ್ ಬುಧವಾರ ನಿರಾಕರಿಸಿದೆ, ಚಿತ್ರದಲ್ಲಿ ಭಾರತೀಯ ವಾಯುಪಡೆ (ಐಎಎಫ್)ಯನ್ನು ಕೀಳಾಗಿ ತೋರಿಸಿಲಾಗಿದೆ  ಎಂಬ ಕೇಂದ್ರದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಓವರ್‌ ದಿ ಟಾಪ್ (ಒಟಿಟಿ) ಪ್ಲಾಟ್‌ಫಾರ್ಮ್‌ನಲ್ಲಿ ಚಲನಚಿತ್ರ ಬಿಡುಗಡೆಯಾಗುವ ಮೊದಲು ನ್ಯಾಯಾಲಯವನ್ನು ಏಕೆ ಸಂಪರ್ಕಿಸಿಲ್ಲ ಎಂದು ನ್ಯಾಯಮೂರ್ತಿ ರಾಜೀವ್ ಶೇಖರ್ ಅವರು ಕೇಂದ್ರವನ್ನು ಕೇಳಿದ್ದಾರೆ.  ಚಿತ್ರವು ಈಗಾಗಲೇ ಸ್ಟ್ರೀಮಿಂಗ್ ಆಗಿರುವುದರಿಂದ ಈಗ ತಡೆಯಾಜ್ಞೆಯನ್ನು ನೀಡಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಕೇಂದ್ರ ಸರ್ಕಾರವನ್ನು  ಪ್ರತಿನಿಧಿಸುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್, ಈ ಚಿತ್ರವು ವಾಯುಪಡೆಯ ಬಗೆಗೆ ಕೀಳಾಗಿ ಬಿಂಬಿಸಿದೆ. ವಾಯುಪಡೆಯಲ್ಲಿ ಲಿಂಗ ತಾರತಮ್ಯ ಅತಿಯಾಗಿದೆ ಎಂದು ಚಿತ್ರದಲ್ಲಿ ತೋರ್ಪಡಿಸಲಾಗಿದೆ ಆದರೆ ಅದು ನಿಜವಲ್ಲ ಎಂದು ವಾದಿಸಿದರು. ಅಲ್ಲದೆ ಚಲನಚಿತ್ರವನ್ನು ನಿರ್ಮಿಸಿದ ಧರ್ಮ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಮೇಲೆ ಕ್ರಮ ಜರುಗಿಸಿ ಚಲನಚಿತ್ರದ ಸ್ಟ್ರೀಮಿಂಗ್ ಅನ್ನು ನಿಲ್ಲಿಸಬೇಕೆಂದು ಅವರು ಕೋರ್ಟ್ ಗೆ ಒತ್ತಾಯಿಸಿದ್ದಾರೆ.

ಕೇಂದ್ರದ ಮನವಿಯ ಮೇರೆಗೆ ನೆಟ್‌ಫ್ಲಿಕ್ಸ್ ಪ್ರತಿಕ್ರಿಯೆಯನ್ನು ನ್ಯಾಯಾಲಯ ಕೋರಿದೆ. ಅಲ್ಲದೆ ಮಾಜಿ ಫ್ಲೈಟ್ ಲೆಫ್ಟಿನೆಂಟ್ ಗುಂಜನ್ ಸಕ್ಸೇನಾ ಅವರನ್ನೂ ಈ ಮೊಕದ್ದಮೆಗೆ ಒಂದು ಪಕ್ಷವನ್ನಾಗಿ ಮಾಡಬೇಕೆಂಬುದು ತಮ್ಮ ಅಭಿಪ್ರಾಯವೆಂದು ನ್ಯಾಯಾಲಯ ಹೇಳಿದೆ.

ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಆಗಸ್ಟ್ 12 ರಂದು ಈ ಚಲನಚಿತ್ರವನ್ನು ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com