ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್

ನಾನು ಪ್ರತಿದಿನ ಗೋ ಮೂತ್ರ ಕುಡಿಯುತ್ತೇನೆ: ಬಾಲಿವುಡ್ ನಟ ಅಕ್ಷಯ್ ಕುಮಾರ್ 

ಆಯುರ್ವೇದ ಕಾರಣಕ್ಕಾಗಿ ತಾವು ಪ್ರತಿದಿನ ಗೋ ಮೂತ್ರವನ್ನು ಸೇವಿಸುವುದಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೇಳಿಕೊಂಡಿದ್ದಾರೆ. 
Published on

ನವದೆಹಲಿ:ಆಯುರ್ವೇದ ಕಾರಣಕ್ಕಾಗಿ ತಾವು ಪ್ರತಿದಿನ ಗೋ ಮೂತ್ರವನ್ನು ಸೇವಿಸುವುದಾಗಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೇಳಿಕೊಂಡಿದ್ದಾರೆ. 

ತಮ್ಮ ಮುಂಬರುವ ಬೆಲ್ ಬಾಟಂ ಚಿತ್ರದ ಶೂಟಿಂಗ್ ನಲ್ಲಿ ಸ್ಕಾಟ್ ಲ್ಯಾಂಡ್ ನಲ್ಲಿರುವ ನಟ ಅಕ್ಷಯ್ ಕುಮಾರ್, ಬ್ರಿಟನ್ ನ ಸಾಹಸಿಗ, ಡಾಕ್ಯುಮೆಂಟರಿ ತಯಾರಕ ಬೇರ್ ಗ್ರಿಲ್ಸ್ ಜೊತೆ ನಡೆಸಿದ ಇನ್ಸ್ಟಾಗ್ರಾಂ ಲೈವ್ ಚಾಟಿಂಗ್ ನಲ್ಲಿ ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ,ಪ್ರಸ್ತುತ ಸ್ಕಾಟ್ ಲ್ಯಾಂಡ್ ನಲ್ಲಿ ಚಿತ್ರದ ಶೂಟಿಂಗ್ ನಲ್ಲಿ ನಟಿಯರಾದ ಹುಮಾ ಖುರೇಷಿ ಮತ್ತು ಲಾರಾ ದತ್ತ ಭೂಪತಿ ಕೂಡ ಸೇರಿದ್ದಾರೆ.

ಅರಣ್ಯ ಸಾಹಸ ಕುರಿತ ಡಾಕ್ಯುಮೆಂಟರಿ ಕಾರ್ಯಕ್ರಮದಲ್ಲಿ ಬೇರ್ ಗ್ರಿಲ್ಸ್ ಜೊತೆ ಆನೆ ಲದ್ದಿಯ ಟೀ ಕುಡಿದ ಬಗ್ಗೆ ನಟಿ ಹುಮಾ ಖುರೇಷಿ ಕೇಳಿದಾಗ ಅಕ್ಷಯ್ ಕುಮಾರ್, ನನಗೇನು ಅನ್ನಿಸಲಿಲ್ಲ, ನಾನು ಪ್ರತಿದಿನ ಗೋ ಮೂತ್ರ ಆರೋಗ್ಯಕ್ಕಾಗಿ ಕುಡಿಯುತ್ತೇನೆ, ಅದರಲ್ಲೇನು ವಿಶೇಷವಿಲ್ಲ ಎಂದರು.

ಇಂಟು ದ ವೈಲ್ಡ್ ವಿತ್ ಬೇರ್ ಗ್ರಿಲ್ಸ್ ಡಾಕ್ಯುಮೆಂಟರಿ ಕಾರ್ಯಕ್ರಮದಲ್ಲಿ ಬ್ರಿಟನ್ ಸಾಹಸಿಗ ಬೇರ್ ಗ್ರಿಲ್ಸ್ ಜೊತೆ ನಟ ಅಕ್ಷಯ್ ಕುಮಾರ್ ಕರ್ನಾಟಕದ ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಸುತ್ತಿದ್ದರು, ಅದು ಇಂದು ಡಿಸ್ಕವರಿ+ಚಾನೆಲ್ ನಲ್ಲಿ ಪ್ರಸಾರವಾಗಲಿದೆ. 
ಬೇರ್ ಗ್ರಿಲ್ಸ್ ಅವರು ನಟ ಅಕ್ಷಯ್ ಜೊತೆ ಕೆಲಸ ಮಾಡಿದ್ದು ತುಂಬಾ ಖುಷಿ ಕೊಟ್ಟಿತು, ಇನ್ನೂ ಅವರ ಜೊತೆ ಕೆಲಸ ಮಾಡಲು ಇಚ್ಛೆಯಿರುವುದಾಗಿ ಹೇಳಿದ್ದಾರೆ. ಅಲ್ಲದೆ ನಟ ಉತ್ತಮವಾಗಿ ದೇಹದ ಫಿಟ್ ನೆಸ್ ಕಾಯ್ದುಕೊಂಡಿದ್ದಾರೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com