'ನಾನು ಮಾದಕ ವ್ಯಸನಿಯಾಗಿದ್ದೆ'ಎಂದು ಕಂಗನಾ ರಾನಾವತ್ ಒಪ್ಪಿಕೊಳ್ಳುತ್ತಿರುವ ವಿಡಿಯೊ ವೈರಲ್ !

ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ತಾನು ಮಾದಕ ವಸ್ತು ವ್ಯಸನಿಯಾಗಿದ್ದೆ ಎಂದು ಬಾಲಿವುಡ್ ನಟಿ ಕಂಗನಾ ರಾನಾವತ್ ಹೇಳಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಹರಿದಾಡುತ್ತಿದೆ. ಈ ವಿಡಿಯೊವನ್ನು ಕಂಗನಾ ಅವರೇ ಕಳೆದ ಮಾರ್ಚ್ ನಲ್ಲಿ ಲಾಕ್ ಡೌನ್ ಸಮಯದಲ್ಲಿ ತಮ್ಮ ಇನ್ಸ್ಟಾಗ್ರಾಂ ಅಕೌಂಟ್ ನಲ್ಲಿ ಹಾಕಿಕೊಂಡಿದ್ದರು.
ಕಂಗನಾ ರಾನಾವತ್
ಕಂಗನಾ ರಾನಾವತ್
Updated on

ಮುಂಬೈ:ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ತಾನು ಮಾದಕ ವಸ್ತು ವ್ಯಸನಿಯಾಗಿದ್ದೆ ಎಂದು ಬಾಲಿವುಡ್ ನಟಿ ಕಂಗನಾ ರಾನಾವತ್ ಹೇಳಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಹರಿದಾಡುತ್ತಿದೆ. ಈ ವಿಡಿಯೊವನ್ನು ಕಂಗನಾ ಅವರೇ ಕಳೆದ ಮಾರ್ಚ್ ನಲ್ಲಿ ಲಾಕ್ ಡೌನ್ ಸಮಯದಲ್ಲಿ ತಮ್ಮ ಇನ್ಸ್ಟಾಗ್ರಾಂ ಅಕೌಂಟ್ ನಲ್ಲಿ ಹಾಕಿಕೊಂಡಿದ್ದರು.

ವಿಡಿಯೊದಲ್ಲಿ ಕಂಗನಾ, ಹಿಮಾಚಲ ಪ್ರದೇಶದ ಮನಾಲಿಯ ನನ್ನ ಮನೆಯಿಂದ ಹೊರಬಂದು ಮುಂಬೈಗೆ ಚಿತ್ರರಂಗದಲ್ಲಿ ಅವಕಾಶ ಅರಸಿ ಬಂದು ಒಂದೆರಡು ವರ್ಷಗಳಲ್ಲಿ ನಾನು ನಟಿಯಾದೆ. ಅದರ ಒಟ್ಟೊಟ್ಟಿಗೆ ಮಾದಕ ವಸ್ತು ಸೇವನೆಯ ಚಟಕ್ಕೂ ಬಿದ್ದೆ. ಅನೇಕ ಘಟನೆಗಳು ನನ್ನ ಜೀವನದಲ್ಲಿ ನಡೆದುಹೋದವು. ನನ್ನ ಜೀವನದಲ್ಲಿ ಹಲವು ಅಪಾಯಕಾರಿ ಕೃತ್ಯಗಳನ್ನು ಮಾಡಿದಂತಹ ಜನರ ಕೈಯಲ್ಲಿ ನಾನು ಸಿಕ್ಕಿಹಾಕಿಕೊಂಡಿದ್ದೆ ಎಂದು ಹೇಳುತ್ತಾರೆ, ಇದನ್ನು ಕಂಗನಾ ತಮ್ಮ ಮನಾಲಿಯ ಮನೆಯ ಟೆರೇಸ್ ಮೇಲೆ ಹೇಳುತ್ತಿರುವ ವಿಡಿಯೊವಾಗಿದ್ದು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು.

ಸುಶಾಂತ್ ಸಿಂಗ್ ರಜಪೂತ್ ನಿಧನ ನಂತರ ಬಾಲಿವುಡ್ ನಟಿ ರಿಯಾ ಚಕ್ರವರ್ತಿಯನ್ನು ಡ್ರಗ್ ಪ್ರಕರಣದಲ್ಲಿ ಬಂಧಿಸಿದ ನಂತರ ಕಂಗನಾ ಬಾಲಿವುಡ್ ನಲ್ಲಿ ಶೇಕಡಾ 99ರಷ್ಟು ಮಂದಿ ಕೊಕೇನ್ ಸೇವಿಸುತ್ತಾರೆ, ರಣವೀರ್ ಸಿಂಗ್, ರಣಬೀರ್ ಕಪೂರ್, ವಿಕಿ ಕೌಶಲ್ , ಆಯನ್ ಮುಖರ್ಜಿ ಮೊದಲಾದವರ ರಕ್ತ ಪರೀಕ್ಷೆ ಮಾಡಿಸಿ ಎಂದಿದ್ದರು.

ಇದೀಗ ಅವರ ಮಾತುಗಳನ್ನು ಹೊಂದಿರುವ ವಿಡಿಯೊಗಳನ್ನು ಒಬ್ಬರು ಶೇರ್ ಮಾಡಿ, ಕಂಗನಾ ಅವರೇ ಡ್ರಗ್ ಸೇವಿಸುತ್ತಿದ್ದರು, ಈಗ ಏನನ್ನುತ್ತೀರಿ ಎಂದು ಕೇಳಿದ್ದಾರೆ.

ಇನ್ನು ತಮ್ಮ ಮೇಲೆ ಕೇಳಿಬಂದಿದ್ದ ಡ್ರಗ್ ಆರೋಪಕ್ಕೆ ನಟಿ ಕಂಗನಾ, ನನ್ನ ವಿರುದ್ಧದ ಆರೋಪ ಸಾಬೀತಾದರೆ ಮುಂಬೈ ನಗರವನ್ನು ಶಾಶ್ವತವಾಗಿ ತೊರೆಯುವುದಾಗಿ ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com