ನನ್ನ ಬಾಯಿ ಮುಚ್ಚಿಸುವ ಯತ್ನದಲ್ಲಿ ಇಷ್ಟೊಂದು ಸಮಯ ವ್ಯಯಿಸಿದಿರಾ: ನಿಮ್ಮ ಆರೋಪ ನಿರಾಧಾರ; ಅನುರಾಗ್ ಕಶ್ಯಪ್

ನಿರ್ದೇಶಕ ಮತ್ತು ಬರಹಗಾರ ಅನುರಾಗ್ ಕಶ್ಯಪ್ ಮೇಲೆ ನಟಿ ಪಾಯಲ್ ಘೋಷ್ ಮಾಡಿರುವ ಲೈಂಗಿಕ ಕಿರುಕುಳ ಆರೋಪಕ್ಕೆ ಇದೀಗ ಅನುರಾಗ್  ಕಶ್ಯಪ್ ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ
ಅನುರಾಗ್ ಕಶ್ಯಪ್
ಅನುರಾಗ್ ಕಶ್ಯಪ್
Updated on

ಮುಂಬಯಿ: ನಿರ್ದೇಶಕ ಮತ್ತು ಬರಹಗಾರ ಅನುರಾಗ್ ಕಶ್ಯಪ್ ಮೇಲೆ ನಟಿ ಪಾಯಲ್ ಘೋಷ್ ಮಾಡಿರುವ ಲೈಂಗಿಕ ಕಿರುಕುಳ ಆರೋಪಕ್ಕೆ ಇದೀಗ ಅನುರಾಗ್  ಕಶ್ಯಪ್ ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.

ನನ್ನ ಬಾಯಿಯನ್ನು ಮುಚ್ಚಿಸುವ ಪ್ರಯತ್ನದಲ್ಲಿ ನೀವು ಇಷ್ಟೊಂದು ಸಮಯವನ್ನು ವ್ಯಯಿಸಿದಿರಾ? ಹೋಗ್ಲಿ ಬಿಡಿ. ನನ್ನ ಬಾಯಿ ಮುಚ್ಚಿಸುವ ಪ್ರಯತ್ನದಲ್ಲಿ, ನೀವೊಬ್ಬರು ಮಹಿಳೆಯಾಗಿದ್ದೂ ಹಲವು ಮಹಿಳೆಯರ ಹೆಸರನ್ನು ಈ ಪ್ರಕರಣದಲ್ಲಿ ಎಳೆದು ತಂದಿದ್ದೀರಿ. ಒಂದು ಮಿತಿ ಇರಲಿ ಮೇಡಂ. ನಾನು ಇಷ್ಟನ್ನೇ ಹೇಳಲು ಬಯಸುತ್ತೇನೆ, ಏನೆಲ್ಲಾ ಆರೋಪಗಳಿವೆಯೋ, ಅವೆಲ್ಲವೂ ನಿರಾಧಾರವಾದುದಾಗಿದೆ’.

‘ನಾನು ಎಂದೂ ಅಂತಹ ನಡವಳಿಕೆ ತೋರಿದವನಲ್ಲ. ಅಂತಹ ಕೃತ್ಯಗಳನ್ನು ನಾನು ಸಹಿಸುವುದಿಲ್ಲ. ನೋಡೋಣ ಮುಂದೇನಾಗುತ್ತದೆ ಎಂದು. ನಿಮ್ಮ ವಿಡಿಯೊಗಳನ್ನು ನೋಡುವಾಗ ನೀವು ಹೇಳಿರುವುದರಲ್ಲಿ ಎಷ್ಟು ಸತ್ಯವಿದೆ, ಎಷ್ಟು ಅಸತ್ಯವಿದೆ ಎಂಬುದು ಅರ್ಥವಾಗುತ್ತದೆ. ನಾನು ಪ್ರೀತಿ ಹಾಗೂ ಹಾರೈಕೆಯನ್ನು ಮುಂದುವರೆಸಲು ಬಯಸುತ್ತೇನೆ.
ನೀವು ಇಂಗ್ಲಿಷ್‌ನಲ್ಲಿ ಮಾತನಾಡುವಾಗ ನಾನು ಹಿಂದಿಯಲ್ಲಿ ಉತ್ತರಿಸಿದ್ದಕ್ಕೆ ಕ್ಷಮೆ ಇರಲಿ’ ಎಂದು ಬರೆದುಕೊಂಡಿದ್ದಾರೆ.

‘ಈ ಕ್ರಿಯಾಶೀಲ ವ್ಯಕ್ತಿಯ ಹಿಂದೆ ಅಡಗಿಕೊಂಡಿರುವ ರಾಕ್ಷಸೀ ಪ್ರವೃತ್ತಿಯನ್ನು ದೇಶವೇ ನೋಡಲಿ ದಯವಿಟ್ಟು ಈ ಕುರಿತಾಗಿ ಕ್ರಮ ಕೈಗೊಳ್ಳಿ. ಇದರಿಂದ ನನಗೆ ತೊಂದರೆಯಾಗಬಹುದೆಂದೂ ನನಗೆ ತಿಳಿದಿದೆ ಹಾಗೂ ನನ್ನ ಸುರಕ್ಷತೆಯೂ ಅಪಾಯದಲ್ಲಿದೆ ಎಂಬ ಅರಿವೂ ನನಗಿದೆ. ದಯವಿಟ್ಟು ಸಹಾಯ ಮಾಡಿ’ ಎಂದು ನಟಿ ಪಾಯಲ್ ಘೋಷ್ ಅವರು ಪ್ರಧಾನ ಮಂತ್ರಿ ಕಛೇರಿಯನ್ನು ಮತ್ತು ಸ್ವತಃ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com