'ಟೈಮ್ಸ್ 100 ಅತ್ಯಂತ ಪ್ರಭಾವಶಾಲಿಗಳ ಪಟ್ಟಿ'ಯಲ್ಲಿ ನಟ ಆಯುಷ್ಮಾನ್ ಖುರಾನಾ

ಬಾಲಿವುಡ್ ನಟ ಆಯುಷ್ಮಾನ್ ಖುರಾನಾ 'ಟೈಮ್ಸ್ ನ 2020 ರ ಅತ್ಯಂತ ಪ್ರಭಾವಶಾಲಿ 100 ಜನರ' ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ವರ್ಷ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ನಟ ಖುರಾನಾ ಆಗಿದ್ದಾರೆ
ಆಯುಷ್ಮಾನ್ ಖುರಾನಾ
ಆಯುಷ್ಮಾನ್ ಖುರಾನಾ
Updated on

ಬಾಲಿವುಡ್ ನಟ ಆಯುಷ್ಮಾನ್ ಖುರಾನಾ 'ಟೈಮ್ಸ್ ನ 2020 ರ ಅತ್ಯಂತ ಪ್ರಭಾವಶಾಲಿ 100 ಜನರ' ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ವರ್ಷ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ನಟ ಖುರಾನಾ ಆಗಿದ್ದಾರೆ.

ಅಸಾಂಪ್ರದಾಯಿಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ  ಮತ್ತು ಅವರ ಚಿತ್ರಗಳಲ್ಲಿ "ರೂಢಿಗತ ಸಂಪ್ರದಾಯಗಳನ್ನು" ಬದಿಗೊತ್ತಿದ್ದಕ್ಕಾಗಿ ನಟಿ ದೀಪಿಕಾ ಪಡುಕೋಣೆ ಖುರಾನಾ ಅವರನ್ನು ಶ್ಲಾಘಿಸಿದ್ದಾರೆ.

ಆಯುಷ್ಮಾನ್  ಖುರಾನಾ ಜತೆಗಿನ ತನ್ನ ಮೊದಲ ಭೇಟಿಯನ್ನು ನೆನಪಿಸಿಕೊಂಡ ದೀಪಿಕಾ, "ಆಯುಷ್ಮಾನ್ ಖುರಾನಾ ಅವರ ಚೊಚ್ಚಲ ಚಿತ್ರ "ವಿಕ್ಕಿ ಡೋನರ್" ನ ಬಗ್ಗೆ ನಾನು ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತೇನೆ.  ಅದಕ್ಕೂ ಮೊದಲು ಅವರು ಹಲವಾರು ವರ್ಷಗಳಿಂದ ಅವರು ಎಂಟರ್ಟೈನ್ಮೆಂಟ್ ಇಂಡಸ್ಟ್ರಿಯ ಭಾಗವಾಗಿದ್ದರು.ಹಾಗಾಗಿ ಇಂದು ನಾನು, ನೀವು ಅವರ ಬಗ್ಗೆ ಮಾತನಾಡುವಂತೆ ಸ್ಮರಣೀಯ ಚಿತ್ರಗಳನ್ನು ಪಾತ್ರಗಳ ಮೂಲಕ ಸೃಷ್ಟಿಸಲು ಸಾಧ್ಯವಾಯಿತು.ಅಲ್ಲಿ ನಾಯಕನ ಪಾತ್ರಗಳು ಸಾಮಾನ್ಯವಾಗಿ ರೂಡಿಗತ ಸಂಪ್ರದಾಯಗಳ ಆಚೆಗೆ ಕರೆದೊಯ್ಯುವಂತಿರುತ್ತದೆ. ಆಯುಷ್ಮಾನ್ ಖುರಾನಾ  ಯಶಸ್ವಿಯಾಗಿ ಮತ್ತು ಎಲ್ಲರಿಗೆ ಮನವರಿಕೆಯಾಗುವಂತೆ ಪಾತ್ರಗಳನ್ನು ನಿರ್ವಹಿಸುತ್ತಾರೆ. 

"ಭಾರತದಲ್ಲಿ, 1.3 ಶತಕೋಟಿಗಿಂತ ಹೆಚ್ಚು ಜನಸಂಖ್ಯೆ ಹೊಂದಿಯೂ ಕೇವಲ ಒಂದು ಸಣ್ಣ ಶೇಕಡಾ ಪ್ರಮಾಣದಷ್ಟು ಜನ ಮಾತ್ರ ತಮ್ಮ ಕನಸುಗಳು ಸಾಕಾರವಾಗುವುದನ್ನು ಕಾಣಬಲ್ಲರು.  ಆಯುಷ್ಮಾನ್ ಖುರಾನಾ ಅವರಲ್ಲಿ ಒಬ್ಬರು. ನೀವು ಬಹುಶಃ ಆಶ್ಚರ್ಯ ಪಡುತ್ತೀರಿ. ಅದಕ್ಕೆ ಕಾರಣ ಅವರ ಪ್ರತಿಭೆ ಮತ್ತು ಕಠಿಣ ಪರಿಶ್ರಮ! ಅದಕ್ಕೂ ಹೆಚ್ಚಿನದಾಗಿ , ತಾಳ್ಮೆ, ಪರಿಶ್ರಮ ಮತ್ತು ನಿರ್ಭಯತೆ. ಕನಸಿನ ಬಗ್ಗೆ ಸ್ಪಷ್ಟವಾದ ಒಳನೋಟ " ದೀಪಿಕಾ ಹೇಳಿದ್ದಾರೆ.

2019 ರಲ್ಲಿ ಖುರಾನಾ "ಅಂಧಾಧುನ್" ಚಿತ್ರದ ಅಭಿನಯಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com