
ಮುಂಬಯಿ: ನಟ ಇರ್ಫಾನ್ ಖಾನ್ ಅವರ ಸಾವಿನ ವದಂತಿ ಬಗ್ಗೆ ಪ್ರತಿಕ್ರಿಯಿಸಿರುವ ಅವರ ವಕ್ತಾರ ಇದೆಲ್ಲಾ ಅತೀವ ಕಲ್ಪನೆಗಳು ಮತ್ತು ಇವೆಲ್ಲಾ ಕಟ್ಟು ಕತೆ ಎಂದು ಹೇಳಿದ್ದಾರೆ. 53 ವರ್ಷದ ನಟ ಆಸ್ಪತ್ರೆಯಲ್ಲಿ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಇರ್ಫಾನ್ ಖಾನ್ ಅವರ ಆರೋಗ್ಯದ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳನ್ನು ನೋಡಿ ಬೇಸರವಾಗಿದೆ. ಅವರ ಬಗ್ಗೆ ಕಾಳಜಿ ವಹಿಸಿರುವ ಜನರ ಬಗ್ಗೆ ಮೆಚ್ಚುಗೆಯಿದೆ. ಆದರೆ ಕೆಲವರು ಸುಖಾ ಸುಮ್ಮನೆ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ ಇದರಿಂದ ಅವರ ಕುಟುಂಬ ಮತ್ತು ಅಭಿಮಾನಿಗಳು ಆತಂಕಕ್ಕೊಳಗಾಗಿದ್ದಾರೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ಇರ್ಫಾನ್ ಅವರು ಸಮರ್ಥ ವ್ಯಕ್ತಿ ಅವರು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
Advertisement