ಪೂನಂ ಪಾಂಡೆ ಬಂಧನ ಓಕೆ, ಬೆತ್ತಲೆ ಓಡಿದ ಮಿಲಿಂದ್ ಬಂಧಿಸಿಲ್ಲ ಯಾಕೆ?: ಟ್ವೀಟಿಗರ ಪ್ರಶ್ನೆ
ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿದ ಆರೋಪದ ಮೇಲೆ ನಟಿ ಪೂನಂ ಪಾಂಡೆ ಅವರನ್ನು ಗೋವಾ ಪೊಲೀಸರು ಬಂಧಿಸಿದ ನಂತರ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
Published: 06th November 2020 08:05 PM | Last Updated: 06th November 2020 08:05 PM | A+A A-

ಪೂನಂ ಪಾಂಡೆ - ಮಿಲಿಂದ್ ಸೋಮನ್
ಮುಂಬೈ: ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿದ ಆರೋಪದ ಮೇಲೆ ನಟಿ ಪೂನಂ ಪಾಂಡೆ ಅವರನ್ನು ಗೋವಾ ಪೊಲೀಸರು ಬಂಧಿಸಿದ ನಂತರ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಪೂನಂ ಪಾಂಡೆ ಬಂಧನವೇನೋ ಸರಿ. ಆದರೆ ಗೋವಾ ಬೀಚ್ ನಲ್ಲಿ ತನ್ನ ಹುಟ್ಟು ಹಬ್ಬದ ದಿನ ಬೆತ್ತಲೆಯಾಗಿ ಓಡಿದ ನಟ ಹಾಗೂ ಮಾಡೆಲ್ ಮಿಲಿಂದ್ ಸೋಮನ್ ಅವರನ್ನು ಏಕೆ ಬಂಧಿಸಲಿಲ್ಲ ಎಂದು ಗೋವಾ ಸರ್ಕಾರವನ್ನು ಟ್ವೀಟಿಗರು ತಿವಿದಿದ್ದಾರೆ.
ಪುರುಷರಿಗೊಂದು ಕಾನೂನು, ಮಹಿಳೆಯರಿಗೊಂದು ಕಾನೂನು ಏಕೆ? ಚಿತ್ರಕಥೆಗಾರ ಅಪೂರ್ವಾ ಅಸ್ರಾಣಿ ಅವರು ಟ್ವೀಟ್ ಮಾಡಿದ್ದಾರೆ.
ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿದ್ದಕ್ಕೆ ಪೂನಂ ಪಾಂಡೆಯನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. ಆದರೆ ಮಿಲಿಂದ್ ಸೊಮನ್ ಪೂರ್ಣ ಬೆತ್ತಲಾಗಿ ಬೀಚ್‌ನಲ್ಲಿ ಓಡಿದ್ದಾರೆ. ಹಾಗಿದ್ದರೂ ಅವರನ್ನು ಏಕೆ ಬಂಧಿಸಿಲ್ಲ. ಗಂಡಿಗೆ ಒಂದು ನ್ಯಾಯ, ಹೆಣ್ಣಿಗೆ ಒಂದು ನ್ಯಾಯವಾ ಎಂದು ಕೆಲವರು ಟ್ವೀಟ್ಟರ್‌ನಲ್ಲಿ ಪ್ರಶ್ನಿಸಿದ್ದಾರೆ.
#PoonamPandey & #MilindSoman both stripped down to their birthday suits in #Goa recently. Pandey partly, Soman completely. Pandey is in legal trouble--for obscenity. Soman is being lauded for his fit body at age 55. I guess we are kinder to our nude men than to our nude women. pic.twitter.com/qQ9UFQIYXJ
— Apurva (@Apurvasrani) November 4, 2020
The #hypocrisy is astounding...why is a man applauded and a woman arrested for doing the same thing? About time we move past this #inequality...#Chauvinism #GenderEquality #HowIsThisFairhttps://t.co/cnVWgLQQZG
— Parul Yadav (@TheParulYadav) November 4, 2020